
ಬೆಂಗಳೂರು(ಅ.08): ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಕಳವು ಮಾಡುತ್ತಿದ್ದ ಕಿಲಾಡಿ ಪ್ರೇಮ ಜೋಡಿಯೊಂದು(Lovers) ಚಂದ್ರಾ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.
ರಾಜಾಜಿನಗರದ ನಿವಾಸಿಗಳಾದ ವಿನಯ್ (32) ಆತನ ಪ್ರೇಯಸಿ ಕೀರ್ತನಾ (25) ಬಂಧಿತರಾಗಿದ್ದು, ಆರೋಪಿಗಳಿಂದ ಲ್ಯಾಪ್‌ಟಾಪ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಮಾರುತಿ ನಗರದ ಕುಲಶೇಖರ್ ಎನ್ನುವವರ ಮನೆಗೆ ಬಾಡಿಗೆ ಕೇಳುವ ನೆಪದಲ್ಲಿ ತೆರಳಿದ್ದ ಆರೋಪಿಗಳು, ಆ ಮನೆಯಲ್ಲಿದ್ದ ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು(Police), ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳ್ಳಿಯ ಕೈಚಳಕ, ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಕೊಂಡಿದ್ದ 4 ಲಕ್ಷ ರೂ ಗೋವಿಂದ..!
ವಿನಯ್ ಅಪರಾಧ ಹಿನ್ನಲೆಯುಳ್ಳವನಾಗಿದ್ದು, ಆತನ ವಿರುದ್ಧ ರಾಜಾಜಿನಗರ ಹಾಗೂ ಬಸವೇಶ್ವನಗರ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಕ್ರಿಮಿನಲ್ ಚರಿತ್ರೆ ಕಾರಣಕ್ಕೆ ಬಸವೇಶ್ವರ ನಗರ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ತೆರೆಯಲಾಗಿತ್ತು. ಇತ್ತೀಚೆಗೆ ಕೀರ್ತನಾಳನ್ನು ಪ್ರೇಮಿಸುತ್ತಿದ್ದ ಆತ, ತನ್ನ ಗೆಳತಿಗೆ ಉಡುಗೊರೆ ಹಾಗೂ ಜಾಲಿ ರೈಡ್ ಕರೆದೊಯ್ಯಲು ಅಗತ್ಯ ಖರ್ಚುಗಳಿಗೆ ಮತ್ತೆ ಕಳ್ಳತನ ಶುರು ಮಾಡಿದ್ದ. ಇದಕ್ಕೆ ಆಕೆ ಸಹ ಸಾಥ್ ಕೊಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಗಳಿಗೆ ಬಾಡಿಗೆ ಕೇಳುವ ನೆಪದಲ್ಲಿ ಹೋಗಿ ಮನೆ ಮಾಲೀಕರ ಗಮನ ಬೇರೆಡೆ ಸೆಳೆದು ಕೈಗೆ ಸಿಕ್ಕಿದ್ದನ್ನು ಅವರು ದೋಚುತ್ತಿದ್ದರು. ಮನೆ ಮಾಲೀಕರ ಜತೆಯಲ್ಲಿ ಬಾಡಿಗೆ ವಿಚಾರವಾಗಿ ವಿನಯ್ ಮಾತನಾಡುತ್ತಿದ್ದರೆ, ಮನೆ ನೋಡುವ ನೆಪದಲ್ಲಿ ಕೀರ್ತನಾ ಮುಂದಾಗುತ್ತಿದ್ದಳು. ಮಾಲೀಕರ ಗಮನವನ್ನು ವಿನಯ್ ಬೇರೆಡೆ ಸೆಳೆಯುತ್ತಿದಂತೆ ಕೀರ್ತನಾ ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಎಗರಿಸುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ