* ಮಗಳನ್ನೇ ರೇಪ್ ಮಾಡಲು ಮುಂದಾದ ಅಪ್ಪ
* ಹೆಂಡತಿ ಮನೆಯಲ್ಲಿಲ್ಲದ ಸಮಯದಲ್ಲಿ ಕುಕೃತ್ಯ
* ಮಲಮಗಳು ಕಿರುಚಾಟ ಆರಂಭಿಸಿದಾಗ ಗುಪ್ತಾಂಗಕ್ಕೆ ಕೋಲು ಹಾಕಿದ
ರಾಂಚಿ(ಆ.07): ಜಾರ್ಖಂಡ್ (Jharkhand) ರಾಜಧಾನಿ ರಾಂಚಿಯಲ್ಲಿ(Ranchi) ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಮಲತಂದೆ(Stepfather) ರಕ್ಕಸನಾಗಿದ್ದು, ತನ್ನೆಲ್ಲಾ ಸಂಬಂಧಗಳ ಮಿತಿ ಮೀರಿದ್ದಾನೆ. ಆರೋಪಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ(Rape) ಯತ್ನಿಸಿದ್ದಾರೆ. ಮುಗ್ಧ ಬಾಲಕಿ ಕಿರುಚಾಟ ಆರಂಭಿಸಿದಾಗ, ಕ್ರೌರ್ಯ ಮೆರೆದಿದ್ದಾನೆ. ಭಾಲಕಿಯ ಗುಪ್ತಾಂಗಕ್ಕೆ ಕೋಲು ತುರುಕಿದ್ದಾನೆ. ಇದರಿಂದಾಗಿ ಬಾಲಕಿಗೆ ರಕ್ತಸ್ರಾವವಾವಾಗಿದೆ. ಗಂಟೆಗಟ್ಟಲೇ ಬಾಲಕಿ ನರಳಾಡಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಪ್ರಕರಣ ಕೋಕರ್‌ನ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಘಟನೆಯ ಸಮಯದಲ್ಲಿ ಬಾಲಕಿಯ ತಾಯಿ ಹೊರಗೆ ಹೋಗಿದ್ದರು. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಮಲತಂದೆ ಬಾಲಕಿ ಬಳಿ ತೆರಳಿ ಅಶ್ಲೀಲ ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದ್ದಾನೆ. ಹೀಗಿರುವಾಗ ಬಾಲಕಿ ಕಿರುಚಲು ಆರಂಭಿಸಿದ್ದಾಳೆ. ಮೊದಲು ಆರೋಪಿ ಬಾಲಕಿಯ ಬಾಯಿ ಮುಚ್ಚಿಸಲು ಭಾರೀ ಯತ್ನ ನಡೆಸಿದ್ದಾನೆ. ಆದರೆ ಬಾಲಕಿ ಸುಮ್ಮನಾಗದಾಗ ಆಕೆಯ ಗುಪ್ತಾಂಗ ಘಾಸಿಗೊಳಿಸಿದ್ದಾನೆ. ಅಷ್ಟಾದರೂ ಸಮಾಧಾನ ಪಡದ ಆತ ಗುಪ್ತಾಂಗಕ್ಕೆ ಕೋಲು ಹಾಕಿದ್ದಾನೆ. ಇದರಿಂದ ಬಾಲಕಿ ಮತ್ತಷ್ಟು ಗಾಯಗೊಂಡಿದ್ದಾಳೆ.
ಬಾಲಕಿಯ ಸ್ಥಿತಿ ಗಂಭೀರ, ಖಾಸಗಿ ಭಾಗಕ್ಕೆ ಗಂಭೀರ ಗಾಯ
ಹುಡುಗಿಯ ತಾಯಿ ಮನೆಗೆ ತಲುಪಿದಾಗ ಮಲತಂದೆಯ ಕುಕೃತ್ಯ ಬೆಳಕಿಗೆ ಬಂದಿದೆ. ಹುಡುಗಿ ರಕ್ತಸಿಕ್ತ ಸ್ಥಿತಿಯಲ್ಲಿ ನರಳಾಡುತ್ತಿದ್ದು, ತಾಯಿ ಏನಾಯಿತೆಂದು ಪ್ರಶ್ನಿಸಿದಾಗ ಎಲ್ಲಾ ವಿಚಾರವನ್ನೂ ತಿಳಿಸಿದ್ದಾಳೆ. ಇದಾದ ಬಳಿಕ ಮಹಿಳೆ ತನ್ನ ಮಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ, ಪೊಲೀಸರ ಸಹಾಯದಿಂದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಮುಂದುವರೆಸಲಾಗಿದೆ
ಮಹಿಳೆ ಮಗುವಿನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಆತನ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಸದರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಶ್ಯಾಮ್ ಮಹತೋ ತಿಳಿಸಿದ್ದಾರೆ.