Murder In Belagavi ಇಬ್ಬರನ್ನು ಬಿಟ್ಟು ಮೂರನೇ ಮದ್ವೆಯಾದ, ಆಕೆಯಿಂದಲೇ ಜೀವ ತೆತ್ತ

By Suvarna News  |  First Published Mar 4, 2022, 9:02 PM IST

* ಇಬ್ಬರು ಹೆಂಡ್ತಿರನ್ನು ಬಿಟ್ಟು ಮೂರನೇಯವಳನ್ನ ಇಟ್ಟುಕೊಂಡ
* ಆಕೆಯಿಂದಲೇ ಜೀವ ತೆತ್ತ
* ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದ ಘಟನೆ


ಬೆಳಗಾವಿ, (ಮಾ.04): ಇಬ್ಬರು ಪತ್ನಿಯರನ್ನು ಬಿಟ್ಟು ಮೂರನೇಯವಳನ್ನು ಮದುವೆ ಆಗಿದ್ದ ವ್ಯಕ್ತಿ ಆಕೆಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ (Murder) ಘಟನೆ ಬೆಳಗಾವಿ(Belagavi) ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಬಸೂರ್ತೆ ಗ್ರಾಮದ ನಿವಾಸಿ ಗಜಾನನ ನಾಯಕ್ ಕೊಲೆಯಾದ ವ್ಯಕ್ತಿ. ಹತ್ಯೆ ಪ್ರಕರಣ ಸಂಬಂಧ ಮೃತನ ಮೂರನೇ ಪತ್ನಿ ವಿದ್ಯಾ ಪಾಟೀಲ್, ಆಕೆಯ ಪುತ್ರ ಹೃತಿಕ್ ಹಾಗೂ ಸ್ನೇಹಿತ ಪರಶುರಾಮ ಗೋಂದಳಿಯನ್ನು ಪೊಲೀಸರು ಬಂಧಿಸಿದ್ದಾರೆ.

Latest Videos

undefined

Bengaluru: ಕ್ಯಾಶ್‌ ಬ್ಯಾಕ್‌ ಹೆಸರಲ್ಲಿ ವಂಚಿಸುತ್ತಿದ್ದ Paytm ಮಾಜಿ ನೌಕರನ ಬಂಧನ

ಫೆಬ್ರವರಿ 26ರ ಮಧ್ಯರಾತ್ರಿ ಮೂವರು ಕತ್ತು ಕೋಯ್ದು ಗಜಾನನ ನಾಯ್ಕ್ ನನ್ನು ಹತ್ಯೆಗೈದಿದ್ದರು.  ಎರಡು ಮದುವೆಯಾಗಿದ್ದ ಗಜಾನನನ್ನು ಇಬ್ಬರೂ ಪತ್ನಿಯರು ಬಿಟ್ಟು ಹೋಗಿದ್ದರು. ನಂತರ ಬೆಳಗುಂದಿ ಗ್ರಾಮದ ವಿದ್ಯಾ ಪಾಟೀಲ್ ಜೊತೆ ಪಾರ್ಟನರ್​ಶಿಪ್​ (Partnership) ಬೇಕರಿ ಆರಂಭಿಸಿದ್ದ. ಯಾರಿಗೂ ಗೊತ್ತಾಗದ ರೀತಿ ವಿದ್ಯಾ ಪಾಟೀಲ್ ಜೊತೆ ರಿಜಿಸ್ಟರ್ ಮ್ಯಾರೇಜ್ ಕೂಡಾ ಆಗಿದ್ದ.

ಮೃತ ಗಜಾನನ ನಾಯ್ಕ್ ವಿದ್ಯಾ ಪಾಟೀಲ್ ಹೆಸರಲ್ಲಿ ಮನೆ ಕಟ್ಟಿಸಿ ಕೊಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು. ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ವಿದ್ಯಾ ಪಾಟೀಲ್​ಗೆ ಒತ್ತಾಯಿಸಿದ್ದ. ಇಲ್ಲವಾದರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಗಜಾನನ ನಾಯ್ಕ್ ಹತ್ಯೆಗೆ ವಿದ್ಯಾ ಪಾಟೀಲ್ ಸ್ಕೆಚ್ ಹಾಕಿದ್ದಳು.

ಫೆ.26ರ ರಾತ್ರಿ ಗಜಾನನ ನಾಯ್ಕ್ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್, ಗಜಾನನಗೆ ಕಂಠಪೂರ್ತಿ ಮದ್ಯ ಕುಡಿಸಿ ಮಗನಿಗೆ ಕರೆ ಮಾಡಿದ್ದಾಳೆ. ಸ್ನೇಹಿತ ಪರಶುರಾಮ ಗೋಂದಳಿ ಜೊತೆ ಗಜಾನನ ಮನೆಗೆ ಬಂದಿದ್ದ ವಿದ್ಯಾ ಪಾಟೀಲ್ ಮಗ ಹೃತಿಕ್ ಪಾಟೀಲ್, ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಗಜಾನನ ಹತ್ಯೆ ಮಾಡಿ ಆತನ ಡೈರಿ, ಮೊಬೈಲ್ ಫೋನ್ ಜೊತೆ ಮೂವರು ಪರಾರಿಯಾಗಿದ್ದರು. 

ಧರ್ಮದ ಯುವತಿಯನ್ನು ವಿವಾಹವಾಗಿದ್ದ ಹತ್ಯೆ
ಕಲಬುರಗಿ: ಚಾಕುವಿನಿಂದ ಇರಿದು ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡರುವಂತಹ ಘಟನೆ ನಡೆದಿದೆ. ನಗರದ ಪಿ.ಎನ್​.ಟಿ ಕ್ವಾಟರ್ಸ್ ಬಳಿ ಘಟನೆ ನಡೆದಿದ್ದು, ಪಿ.ಎನ್.ಟಿ ಕ್ವಾಟರ್ಸ್ ನಿವಾಸಿ ಪ್ರೀತಂ ಬನ್ನಿಕಟ್ಟಿ ಕೊಲೆಯಾದ ದುರ್ದೈವಿ. ಕೆಲ ತಿಂಗಳ ಹಿಂದೆ ಅನ್ಯ ಧರ್ಮದ ಯುವತಿಯನ್ನು ವಿವಾಹವಾಗಿದ್ದ ಪ್ರೀತಂ, ಇದೇ ಹಿನ್ನೆಲೆಯಲ್ಲಿ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕಳೆದ ರಾತ್ರಿ ಪ್ರೀತಂನನ್ನು ಪಾಲೋ ಮಾಡಿ, ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!