
ಕಲಬುರಗಿ/ಚಿಂಚೋಳಿ(ಆ.22): ಅಪ್ರಾಪ್ತ ಅಕ್ಕ ಹಾಗೂ ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಲಾಗಿರುವ ಆರೋಪ ಕೇಳಿ ಬಂದಿದೆ.
ಅಪ್ರಾಪ್ತ ಬಾಲಕ, ಬಾಲಕಿ ಇಬ್ಬರ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿರುವ ಕಾಮುಕನನ್ನು ಸಚೀನ್ ಡಾಕು ಚವ್ಹಾಣ (21) ಎಂದು ಗುರುತಿಸಲಾಗಿದೆ. ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿ ಕುಂಚಾವರಂ ಠಾಣೆಯ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಲ್ಲಿ ಪೋಕ್ಸೋ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಸ್ವಗ್ರಾಮಕ್ಕೆ ಮೃತದೇಹ!
ಚಾಕ್ಲೇಟ್ ಕೊಡೋದಾಗಿ ಕರೆಯುತ್ತಿದ್ದ ಕಾಮುಕ:
ಆರೋಪಿ ಕಾಮುಕ ಬಾಲಕರನ್ನು ಚಾಕ್ಲೇಟ್ ಕೊಡೋದಾಗಿ ಕರೆಯುತ್ತಿದ್ದ, ಚಾಕ್ಲೇಟ್ ಆಸೆಗಾಗಿ ಬಾಲಕ, ಬಾಲಕಿ ಹೋದಾಗ ಅವರ ಮೇಲೆ ದೌರ್ಜನ್ಯ ಎಸಗಿದ್ದ. ಕಳೆದ ಒಂದು ತಿಂಗಳ ಹಿಂದೆ ಸಚೀನ್ ಚಾಕ್ಲೇಟ್ ಕೊಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಮತ್ತೆ ಸಚೀನ್ ತಾಯಿ ಬಳಿಯಲ್ಲಿದ್ದ ಮಕ್ಕಳನ್ನು ಚಾಕ್ಲೇಟ್ ಕೊಡಿಸುತ್ತೇನೆ ಎಂದು ಕರೆದಿದ್ದಾನೆ. ಮೊದಲು ವರ್ಷದ ಬಾಲಕನಿಗೆ ಕರೆದಿದ್ದಾನೆ. ಆದರೆ ಆಗ ಬಾಲಕನು ಆತನ ಬಳಿಗೆ ಹೋಗುವುದಿಲ್ಲವೆಂದು ನಿರಾಕರಿಸಿದ್ದಾನೆ. ತಾಯಿ ಅವನಿಗೆ ಪುನಃ ಮಾಮಾ ಚಾಕ್ಲೇಟ್ ಕೊಡಿಸುತ್ತಾನೆ ಹೋಗು ಎಂದು ಹೇಳಿದ್ದಾಳೆ.
ಬಾಲಕನು ಹಿಂದೆ ನಡೆದ ಘಟನೆ ವಿವರಿಸಿದ ಬಾಲಕಿಯೂ ಸಹಾ ತನಗೂ ಆರೋಪಿ ಹೀಗೆ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾನೆ ಎಂದು ತಾಯಿ ಬಳಿ ಹೇಳಿಕೊಂಡಿದ್ದಾರೆ. ಮಕ್ಕಳ ಹೇಳಿಕೆ ಆಧರಿಸಿ ಮಕ್ಕಳ ತಾಯಿ ಕುಂಚಾವರಂ ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ಬಾಲಕ ಮತ್ತು ಬಾಲಕಿಯನ್ನು ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಂಚೋಳಿ ಡಿವೈಎಸ್ಪಿ ಕೆ.ಬಸವರಾಜ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ: ಪುತ್ರನ ಆತ್ಮಹತ್ಯೆ ಬೆನ್ನಲ್ಲೇ ನೊಂದು ತಂದೆಯೂ ಆತ್ಮಹತ್ಯೆ!
ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾಪಂಥ್, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ, ಸಿಡಿಪಿಒ ಗುರುಪ್ರಸಾದ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳ, ಭೇಟಿ ನೀಡಿದ್ದಾರೆ.
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸಚಿನ್ ಡಾಕು ಚವ್ಹಾಣನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಕುಂಚಾವರಂ ಪೋಲಿಸ್ ಠಾಣೆ ಪಿಎಸ್‌ಐ ವೆಂಕಟೇಶ ನಾಯಕ ತಿಳಿಸಿದ್ದಾರೆ. ಕುಂಚಾವರಂ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ