ಬಾಲಕಿಯರ ಹಾಸ್ಟೆಲ್‌ನಲ್ಲಿ ಸರ್‌ಪ್ರೈಸ್‌ ಚೆಕ್‌: ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು

Published : Aug 22, 2023, 09:43 PM IST
ಬಾಲಕಿಯರ ಹಾಸ್ಟೆಲ್‌ನಲ್ಲಿ ಸರ್‌ಪ್ರೈಸ್‌ ಚೆಕ್‌: ರಾತ್ರೋರಾತ್ರಿ ಕಾಣೆಯಾದ 89 ಹುಡುಗಿಯರು

ಸಾರಾಂಶ

ರಾತ್ರಿ ಹಠಾತ್ ತಪಾಸಣೆಯ ವೇಳೆ ಉತ್ತರ ಪ್ರದೇಶದ ಗೊಂಡಾದಲ್ಲಿ ದಾಖಲಾಗಿದ್ದ ಒಟ್ಟು 100 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಹಾಸ್ಟೆಲ್‌ನಲ್ಲಿ ಹಾಜರಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೊಂಡಾ, ಉತ್ತರ ಪ್ರದೇಶ (ಆಗಸ್ಟ್‌ 22, 2023): ಉತ್ತರ ಪ್ರದೇಶ ರಾಜ್ಯ ಸರ್ಕಾರ ನಡೆಸುತ್ತಿರುವ ವಸತಿ ಶಾಲೆಯೊಂದ್ರಲ್ಲಿ ಅಧಿಕಾರಿಗಳು ಹಠಾತ್‌ ತಪಾಸಣೆ ಮಾಡಿದ್ದಾರೆ. ಈ ವೇಳೆ, ಅಲ್ಲಿನ ಸ್ಥಿತಿಯನ್ನು ಕಂಡು ಅಧಿಕಾರಿಗಳು ಗಲಿಬಿಲಿಗೊಂಡಿದ್ದಾರೆ. ಈ ಹಿನ್ನೆಲೆ ವಾರ್ಡನ್ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ದಾಖಲಾಗಿದೆ. 

ರಾತ್ರಿ ಹಠಾತ್ ತಪಾಸಣೆಯ ವೇಳೆ ಉತ್ತರ ಪ್ರದೇಶದ ಗೊಂಡಾದಲ್ಲಿ ದಾಖಲಾಗಿದ್ದ ಒಟ್ಟು 100 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಹಾಸ್ಟೆಲ್‌ನಲ್ಲಿ ಹಾಜರಿರುವುದು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಪರಸ್ಪುರದ ಕಸ್ತೂರಬಾ ಗಾಂಧಿ ವಸತಿ ಬಾಲಕಿಯರ ಶಾಲೆಯಲ್ಲಿ ಸೋಮವಾರ ರಾತ್ರಿ ತಪಾಸಣೆ ನಡೆಸಲಾಯಿತು ಎಂದೂ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.

ಇದನ್ನು ಓದಿ: ಅನಾಥ ಬಾಲಕಿ ಮನೆಗೆ ನುಗ್ಗಿ ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್‌ ಮಾಡಿದ 8 ಜನ ಕಾಮುಕರು!

"ಅಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಆದರೆ 11 ವಿದ್ಯಾರ್ಥಿನಿಯರು ಮಾತ್ರ ಶಾಲೆಯಲ್ಲಿ ಹಾಜರಿರುವುದು ಕಂಡುಬಂದಿದೆ. ಈ ಹಿನ್ನೆಲೆ 89 ವಿದ್ಯಾರ್ಥಿನಿಯರ ಗೈರುಹಾಜರಿಯ ಬಗ್ಗೆ ವಾರ್ಡನ್ ಸರಿತಾ ಸಿಂಗ್ ಅವರನ್ನು ಕೇಳಿದಾಗ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ" ಎಂದೂ ಜಿಲ್ಲಾಧಿಕಾರಿ ಹೇಳಿದರು.

ಅಲ್ಲದೆ, "ಇದು ಗಂಭೀರ ನಿರ್ಲಕ್ಷ್ಯ. ವಸತಿ ಬಾಲಕಿಯರ ಶಾಲೆಗಳನ್ನು ಈ ರೀತಿ ನಡೆಸುವಂತಿಲ್ಲ" ಎಂದೂ ಜಿಲ್ಲಾಧಿಕಾರಿ ಹೇಳಿದ್ದು, ಈ ಹಿನ್ನೆಲೆ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಾಲಾ ವಾರ್ಡನ್, ಪೂರ್ಣಾವಧಿ ಶಿಕ್ಷಕ, ಕಾವಲುಗಾರ ಮತ್ತು ಪ್ರಾಂತೀಯ ರಕ್ಷಣಾ ದಳದ (ಪಿಆರ್‌ಡಿ) ಗೇಟ್‌ ಬಳಿ ರಾತ್ರಿ ವೇಳೆ ಕರ್ತವ್ಯ ಕಾಯುತ್ತಿದ್ದ ಜವಾನನ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ) ಪ್ರೇಮ್ ಚಂದ್ ಯಾದವ್ ತಿಳಿಸಿದ್ದಾರೆ. 

ಇದನ್ನೂ ಓದಿ: ಪಂಚಾಂಗ ನೋಡ್ಕೊಂಡು ಅಪರಾಧ ನಿಯಂತ್ರಣಕ್ಕೆ ಮುಂದಾದ ಪೊಲೀಸ್‌ ಇಲಾಖೆ!

ಇದರೊಂದಿಗೆ ನೌಕರರ ವಿರುದ್ಧವೂ ಇಲಾಖಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿ ವಿರುದ್ಧ ಇಲಾಖಾ ಕ್ರಮಕ್ಕಾಗಿ ಜಿಲ್ಲಾ ಯುವ ಕಲ್ಯಾಣಾಧಿಕಾರಿಗೆ ಪ್ರತ್ಯೇಕ ಪತ್ರ ಬರೆಯಲಾಗಿದೆ ಎಂದು ಬಿಎಸ್‌ಎ ತಿಳಿಸಿದೆ.

ಇದನ್ನೂ ಓದಿ: ಅಯ್ಯೋ ಶಿವನೇ! ತಾಯಿ ಯಾರಿಗೋ ಮೆಸೇಜ್‌ ಮಾಡ್ತಿದ್ರು ಅಂತ ಕೊಚ್ಚಿ ಕೊಲೆ ಮಾಡ್ದ ಮಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ