Yadgir Rape Case: ಆಟೋದಲ್ಲಿ ಸಂಚರಿಸುವ ಮುನ್ನ ಮಹಿಳೆಯರೇ ಎಚ್ಚರ...!

Published : Apr 28, 2022, 12:56 PM ISTUpdated : Apr 28, 2022, 12:58 PM IST
Yadgir Rape Case: ಆಟೋದಲ್ಲಿ ಸಂಚರಿಸುವ ಮುನ್ನ ಮಹಿಳೆಯರೇ ಎಚ್ಚರ...!

ಸಾರಾಂಶ

*  ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಮೇಲೆ ಚಾಲಕನಿಂದ ಅತ್ಯಾಚಾರ *  ಆಟೋ ಚಾಲಕ ಮತ್ತು ಸ್ನೇಹಿತನಿಂದ ಕೃತ್ಯ *  ಮಹಿಳೆಯರು ಕೂಡ ಎಚ್ಚರ ವಹಿಸಬೇಕು  

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ(ಏ.28):  ಆಟೋದಲ್ಲಿ ಪ್ರಯಾಣ ಮಾಡಿ ಸುರಕ್ಷಿತವಾಗಿ ಕೆಲಸ ಕಾರ್ಯ ಹಾಗೂ ಮನೆಗೆ ತೆರಳಬೇಕೆಂದರೆ ಇನ್ನೂ ಮುಂದೆ ಎಚ್ಚರ ವಹಿಸಬೇಕಾಗಿದೆ. ಅಟೋ ಚಾಲಕನೇ ಕಾಮ ಪೈಶಾಚಿಕ ಕೃತ್ಯ ವೇಸಗಿದಕ್ಕೆ ಈಗ ಆಟೋದಲ್ಲಿ ತೆರಳಲು ಮಹಿಳೆಯರಿಗೆ(Women)  ಸುರಕ್ಷತೆ ಇಲ್ಲದಂತಾಗಿದೆ. ಯಾದಗಿರಿ(Yadgir) ನಗರದ ಹೊರಭಾಗದ ವರ್ಕನಳ್ಳಿಯ ಹಾಳು ಬಿದ್ದ ನಿರ್ಜನ ಪ್ರದೇಶದ ಮನೆಯಲ್ಲಿ ಅಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ(Rape) ವೆಸಗಿ ಜೀವ ಬೆದರಿಕೆ ಹಾಕಿದ್ದಾರೆ. ಹಾಡಹಗಲೇ ಇಂತಹ ಅಮಾನವೀಯ ಕೃತ್ಯ ಮಾಡಲಾಗಿದೆ.

ಒಂಟಿ ಮಹಿಳೆಯನ್ನು ಅತ್ಯಾಚಾರಗೈದ ಆಟೋ ಚಾಲಕ

ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿಯು ಮನೆ ಕೆಲಸ ಮಾಡಲು ಏ. 26 ರಂದು ಆಟೋದಲ್ಲಿ ತಮ್ಮ ಊರಿಂದ ಯಾದಗಿರಿ ಜಿಲ್ಲಾ ಕೇಂದ್ರದ ಕಡೆ ಪ್ರಯಾಣ ಬೆಳೆಸುತ್ತಿದ್ದಳು. ಈ ವೇಳೆ ಆಟೋ ಚಾಲಕ ಎಂ.ಹೊಸಳ್ಳಿ ಗ್ರಾಮದಲ್ಲಿ ತನ್ನ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದಾನೆ. ಯುವತಿ ಪ್ರಯಾಣ ಬೆಳೆಸುತ್ತಿದ್ದು ಆಟೋ ಯಾದಗಿರಿ ನಗರಕ್ಕೆ ಎಂಟ್ರಿಕೊಟ್ಟಿದೆ ಈ ವೇಳೆ ಯುವತಿಯು ನಾನು ಹೊಸ ಬಸ್ ನಿಲ್ದಾಣದ ಕಡೆ ತೆರಳಬೇಕು ಅಲ್ಲಿ ಬಿಡಿ ಎಂದಿದ್ದಾಳೆ. ಆದರೆ, ಆಟೋ ಚಾಲಕ ಆಟೋದಲ್ಲಿ ಡಿಸೇಲ್ ಇಲ್ಲವೆಂದು ಆಟೋವನ್ನು ನಗರದ ಹೊರಭಾಗದ ವರ್ಕನಳ್ಳಿಯ ಹಾಳು ಬಿದ್ದ ಮನೆ ಕಡೆ ಬಲವಂತವಾಗಿ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಆಟೋ ಚಾಲಕನ ಸ್ನೇಹಿತ ಕೂಡ ಆಟೋದಲ್ಲಿದ್ದನು. ನಂತರ ಹಾಡಹಗಲೇ ಯುವತಿ ಮೇಲೆ ಅಟೋ ಚಾಲಕ ಹಣಮಂತ ಜೀನಕೇರಿ ಎಂಬಾತ ಅತ್ಯಾಚಾರ ವೆಸಗಲು ಮುಂದಾಗಿದ್ದನು. 

ಸಿನಿಮಾ ಗ್ರೂಪ್ ಡ್ಯಾನ್ಸರ್ ಮಾತು ಕೇಳಿ ಹೋಟೆಲ್‌ಗೆ ಹೋದ ಅಪ್ರಾಪ್ತೆಯ ರೇಪ್!

ನಿಮ್ಮ ಕಾಲು ಬೀಳ್ತೆನೆ ಬಿಡಿ ಎಂದರು ಬಿಡದ ಕಾಮುಕ

ಈ ವೇಳೆ ಯುವತಿಯು ಕಾಲು ಬೀಳುತ್ತೇನೆ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಅಣ್ಣ ಎಂದು ವಿನಂತಿ ಮಾಡಿಕೊಂಡಿದ್ದಾಳೆ. ಆದರೆ, ಆಟೋ ಚಾಲಕ ಯುವತಿಯ ವಿನಂತಿ ಮಾತಿಗೆ ಸುಮ್ಮನಿರದೇ ಆಕೆಯ ಮೇಲೆ ಎರಗಿ ಅತ್ಯಾಚಾರ ವೆಸಗಿದ್ದಾನೆ. ಅಟೋ ಚಾಲಕನ ಸ್ನೇಹಿತ ಅತ್ಯಾಚಾರ ವೆಸಗುವ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಅತ್ಯಾಚಾರ ವೆಸಗಿ ಆಟೋ ಚಾಲಕ ಯುವತಿಗೆ ಈ ವಿಷಯ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ನಂತರ ಯುವತಿಯು ತಮ್ಮ ಚಿಕ್ಕಪ್ಪನ ಮುಂದೆ  ನೋವು ತೋಡಿಕೊಂಡಿದ್ದಾಳೆ. ನಂತರ ಚಿಕ್ಕಪ್ಪ ಯಾದಗಿರಿ ಮಹಿಳಾ ಠಾಣೆಗೆ ಆಗಮಿಸಿ ಅತ್ಯಾಚಾರ ವೆಸಗಿರುವ ಬಗ್ಗೆ ದೂರು ನೀಡಿದ್ದಾನೆ. ನಂತರ ಮಹಿಳಾ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಅತ್ಯಾಚಾರ ವೆಸಗಿದ್ದ ಆಟೋ ಚಾಲಕ ಹಣಮಂತ ಹಾಗೂ ಆತನ ಸ್ನೇಹಿತ ನರಸಪ್ಪನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ .ಕೃತ್ಯಕ್ಕೆ ಬಳಕೆ ಮಾಡಿದ ಆಟೋ ಜಪ್ತಿ ಮಾಡಲಾಗಿದೆ.

ಆರೋಪಿಗಳ ವಿರುದ್ಧ ರೌಡಿಶೀಟರ್ ಓಪನ್

ಈ ಪ್ರಕರಣವನ್ನು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಗಂಭೀರವಾಗಿ ಪರಿಗಣಿಸಿದ್ದು, ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಮಹಿಳಾ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ರೌಡಿಶೀಟರ್(Rowdysheeter) ಕೂಡ ಓಪನ್ ಮಾಡಲಾಗಿದೆ. ಮಹಿಳೆಯರು ಕೂಡ ಅಗತ್ಯ ಎಚ್ಚರ ವಹಿಸಬೇಕೆಂದರು. ಮಹಿಳೆಯರು ತಮ್ಮ ರಕ್ಷಣೆಗಾಗಿ ವಾಹನದಲ್ಲಿ ಚಲಾಯಿಸುವಾಗ ಖಾರದ ಪುಡಿ ಪಾಕೇಟ್ ಗಳನ್ನು ಇಟ್ಟುಕೊಂಡು ಚಲಾಯಿಸಬೇಕೆಂದು ಎಚ್ಚರಿಕೆ ನೀಡಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!