
ಬೆಂಗಳೂರು(ಅ.26): ಮನೆ ಮುಂದೆ ಮದ್ಯ ಸೇವಿಸುವುದನ್ನು ಆಕ್ಷೇಪಿಸಿದ ತನ್ನ ಅಕ್ಕನ ಕಪಾಳಕ್ಕೆ ಹೊಡೆದಿದ್ದಕ್ಕೆ ಕೋಪಗೊಂಡು ಸ್ನೇಹಿತನಿಗೆ ಚಾಕುವಿನಿಂದ ಇರಿದು ಮೃತನ ಗೆಳೆಯರೇ ಕೊಂದಿರುವ ಘಟನೆ ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿಎಸ್‌ಕೆ ಗಾರ್ಡನ್ ನಿವಾಸಿ ಪ್ರಭು (24) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ವಿಜಯ್ ಪೌಲ್ ಹಾಗೂ ಚೌಕಿ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಒಂದೇ ಏರಿಯಾದಲ್ಲಿ ನೆಲೆಸಿದ್ದರಿಂದ ಈ ಮೂವರು ಬಾಲ್ಯ ಸ್ನೇಹಿತರಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಚೌಕಿ ಮನೆ ಮುಂದೆ ಕುಳಿತು ಸೋಮವಾರ ರಾತ್ರಿ ಪ್ರಭು ಮದ್ಯ ಸೇವಿಸುತ್ತಿದ್ದ. ಈ ವರ್ತನೆಗೆ ಚೌಕಿ ಸೋದರಿ ಆಕ್ಷೇಪಿಸಿದ್ದಾರೆ. ಇದರಿಂದ ಕೆರಳಿದ ಆತ, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದಾದ ನಂತರ ಮತ್ತೆ ಪಿಎಸ್‌ಕೆ ಗಾರ್ಡನ್ ಪುಟ್ಬಾಲ್ ಕ್ರೀಡಾಂಗಣ ಬಳಿ ಈ ಮೂವರು ಸ್ನೇಹಿತರು ಮದ್ಯ ಸೇವನೆಗೆ ತೆರಳಿದ್ದಾರೆ. ಆ ವೇಳೆ ಮದ್ಯದ ಅಮಲಿನಲ್ಲಿ ತನ್ನ ಅಕ್ಕನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರಭುಗೆ ಚೌಕಿ ಬೈದಿದ್ದಾನೆ.
ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ, ಮರ್ಡರ್ ಆರೋಪಿಗಳ ಸುಳಿವು ನೀಡಿದ ಪೊಲೀಸ್ ನಾಯಿ!
ಈ ಹಂತದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಗ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ವಿಜಯ್ ಮೇಲೆ ಪ್ರಭು ಹಲ್ಲೆ ನಡೆಸಿದ್ದಾನೆ. ಆಗ ಆತನಿಗೆ ಕೈಗೆ ಗಾಯವಾಗಿದೆ. ಈ ಹಲ್ಲೆಯಿಂದ ಕೆರಳಿದ ಆರೋಪಿಗಳು, ಪ್ರಭು ಕೈಯಿಂದ ಚಾಕು ಕಸಿದುಕೊಂಡು ಆತನಿಗೆ ಇರಿದು ಕೊಂದಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ