* ಯೂರೋಪ್‌ನಲ್ಲಿ ನೆಲೆಸಲು ಮನೆಗಳಿಗೆ ಕನ್ನ
* ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ತೆಲಂಗಾಣದ ಖದೀಮ
* ಯುವತಿಗಾಗಿ ಬಾಂಗ್ಲಾ ಪ್ರವೇಶ
ಬೆಂಗಳೂರು(ಏ.23): ಯೂರೋಪ್‌ನಲ್ಲಿ(Europe) ಹೋಗಿ ನೆಲೆಸಲು ಅಗತ್ಯವಾದ ಹಣ ಸಂಪಾದನೆಗೆ ರಾಜಧಾನಿಯಲ್ಲಿ ಮನೆಗಳ ಕಿಟಕಿ ಸರಳು ಮುರಿದು ಕನ್ನ ಹಾಕುತ್ತಿದ್ದ ಕುಖ್ಯಾತ ಖದೀಮ ಹಾಗೂ ಆತನ ಸಹಚರನನ್ನು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಸಂಜಯನಗರ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ.
ತೆಲಂಗಾಣದ(Telangana) ಹೈದರಾಬಾದ್‌ನ(Hyderabad) ನಾನಾವತ್ ವಿನೋದ್ ಕುಮಾರ್ ಅಲಿಯಾಸ್ ಶರೀಫ್ ಹಾಗೂ ಆತನ ಸಹಚರ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) .79.64 ಲಕ್ಷ ಮೌಲ್ಯದ 792 ಗ್ರಾಂ ಚಿನ್ನ, .2 ಲಕ್ಷ ನಗದು, ದುಬಾರಿ ಮೌಲ್ಯದ 30 ವಾಚ್‌ಗಳು, 6 ಐ-ಪ್ಯಾಡ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿಯಾಗಿವೆ. ಕೆಲ ತಿಂಗಳಿಂದ ಸಂಜಯನಗರ ವ್ಯಾಪ್ತಿಯಲ್ಲಿ ಕಿಟಕಿಯ ಗ್ರೀಲ್‌ಗಳನ್ನು ಕತ್ತರಿಸಿ ಕಳವು ಮಾಡುತ್ತಿದ್ದ ಸುಮಾರು 7 ಪ್ರಕರಣಗಳು ವರದಿಯಾಗಿದ್ದು. ಈ ಸರಣಿ ಕಳ್ಳತನ(Theft) ಹಿನ್ನೆಲೆಯಲ್ಲಿ ಎಚ್ಚೆತ್ತ ಇನ್‌ಸ್ಪೆಕ್ಟರ್ ಜಿ.ಬಾಲರಾಜ್, ಪಿಎಸ್‌ಐ ಗಿರೀಶ್ ನಾಯಕ್ ನೇತೃತ್ವದ ತಂಡವು, ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್, ಅಪಾರ್ಟ್‌ಮೆಂಟ್ ಟಾರ್ಗೆಟ್..!
ಹೈದರಾಬಾದ್ ಟು ಬಾಂಗ್ಲಾ ದೇಶ
ವಿನೋದ್ ವೃತ್ತಿಪರ ಖದೀಮನಾಗಿದ್ದು, ಏಳು ವರ್ಷಗಳಿಂದ ಮನೆಗಳ್ಳತನದಲ್ಲಿ ಆತ ಸಕ್ರಿಯವಾಗಿದ್ದಾನೆ. 2015ರಲ್ಲಿ 6 ಮನೆಗಳ್ಳತನ ಪ್ರಕರಣದಲ್ಲಿ ಆತನ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಆಗ ದಾರಿ ತಪ್ಪಿದ ಮಗನನ್ನು ಪೋಷಕರು ಮನೆಯಿಂದ ಹೊರ ಹಾಕಿದರು. ತರುವಾಯ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಗೊಂಡ ವಿನೋದ್, ಹೈದರಾಬಾದ್ ತೊರೆದು ಕೊಲ್ಕತ್ತಾ ಸೇರಿದ. ಅಲ್ಲಿ ಕ್ಯಾಬ್ ಚಾಲಕನಾಗಿದ್ದಾಗ ಆತನಿಗೆ ಬಾಂಗ್ಲಾ ಮೂಲದ ಯುವತಿ ಹಾಗೂ ಈಗ ಬಂಧಿತನಾಗಿರುವ ರೋಹಿತ್ ಮಂಡಲ್ ಪರಿಚಯವಾಗಿದ್ದರು. ಗೆಳೆತನ ಪ್ರೇಮಕ್ಕೆ ತಿರುಗಿ ಕೊನೆಗೆ ಬಾಂಗ್ಲಾ ಯುವತಿ ಜತೆ ವಿವಾಹವಾದ ವಿನೋದ್, ಅಕ್ರಮವಾಗಿ ಭಾರತದ ಗಡಿದಾಟಿ ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದ. 1 ವರ್ಷ ಕಳೆಯುವ ವೇಳೆಗೆ ಢಾಕಾ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಪತ್ನಿ ಜತೆ ಭಾರತಕ್ಕೆ ವಿನೋದ್ ಮರಳಿದ ಎಂದು ಪೊಲೀಸರು ವಿವರಿಸಿದ್ದಾರೆ.
ಯೂರೋಪ್‌ನಲ್ಲಿ ನೆಲೆಸಲು ಫ್ಲ್ಯಾನ್
ಬಾಂಗ್ಲಾದಿಂದ(Bangladesh) ಭಾರತಕ್ಕೆ(India) ಮರಳುವಾಗಲೇ ವಿನೋದ್, ತಾನು ಯೂರೋಪ್ ಖಂಡದ ಯಾವುದಾದರೂ ದೇಶದಲ್ಲಿ ಹೋಗಿ ಶಾಶ್ವತವಾಗಿ ನೆಲೆಸಲು ಯೋಜಿಸಿದ್ದ. ಇದಕ್ಕಾಗಿ ಅಗತ್ಯವಾದ ಕೋಟ್ಯಂತರ ಬಂಡವಾಳವನ್ನು ಸಂಗ್ರಹಿಸಲು ಬೆಂಗಳೂರನ್ನು(Bengaluru) ಕಳ್ಳತನಕ್ಕೆ ಆಯ್ಕೆ ಮಾಡಿದ್ದ. ಅಂತೆಯೇ 2020ರಲ್ಲಿ ಪತ್ನಿ ಜತೆ ಬಂದು ನಗರದಲ್ಲಿ ನೆಲೆಸಿದ ಆತ, ಯೂಟ್ಯೂಬ್‌ನಲ್ಲಿ(Youtube) ನೋಡಿ ಕಳ್ಳತನಕ್ಕೆ ಅಗತ್ಯವಾದ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡ. 1 ಬೈಕ್ ಖರೀದಿಸಿದ. ಮತ್ತೊಂದು ಬೈಕನ್ನು ಕಳವು ಮಾಡಿದ. ಮನೆಗಳ ಕಿಟಕಿ ಸರಳು ಮುರಿದು ಒಳ ನುಗ್ಗಿ ನಗ-ನಾಣ್ಯ ದೋಚಿದ. 6 ತಿಂಗಳ ಬಳಿಕ ಪತ್ನಿಯನ್ನು ಮತ್ತೆ ಕರೆದೊಯ್ದು ಬಾಂಗ್ಲಾದೇಶದ ಢಾಕಾಗೆ ಬಿಟ್ಟು ಮರಳಿದ ವಿನೋದ್, ಕೊಲ್ಕತ್ತಾದಲ್ಲಿ ತನ್ನ ಸ್ನೇಹಿತ ರೋಹಿತ್‌ನನ್ನು ಭೇಟಿಯಾಗಿ ಹಣದಾಸೆ ತೋರಿಸಿ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದ. ಈ ಇಬ್ಬರು ಸೇರಿ ಸಂಜಯ ನಗರ, ಬಾಣಸವಾಡಿ, ಜೆ.ಸಿ.ನಗರ, ಕೋಡಿಗೆಹಳ್ಳಿ, ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ 22 ಕಳ್ಳತನ ಕೃತ್ಯ ಎಸಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಸ್ಕ್, ಟೋಪಿ ಹಾಕಿ ಕೃತ್ಯ
ಕಳ್ಳತನ ಕೃತ್ಯ ಎಸಗುವ ವೇಳೆ ತನ್ನ ಗುರುತು ಪತ್ತೆಯಾಗದಂತೆ ವಿನೋದ್ ಮಾಸ್‌್ಕ ಹಾಗೂ ಟೋಪಿ ಹಾಕುತ್ತಿದ್ದ. 7 ಕಡೆ ಮನೆಗಳ್ಳತನ ಕೃತ್ಯಗಳ ಸಂಬಂಧ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇದೇ ದೃಶ್ಯ ಸಿಕ್ಕಿತ್ತು. ಅಲ್ಲದೆ ಮೊಬೈಲ್ ಟವರ್ ಲೋಕೇಷನ್ ಆರ್.ಟಿ.ನಗರ ಸುತ್ತಮುತ್ತಲೇ ಇತ್ತು. ಈ ಮಾಹಿತಿ ಆಧರಿಸಿ ಆರ್.ಟಿ.ನಗರ ವ್ಯಾಪ್ತಿಯಲ್ಲಿ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿತ್ತು. ಆಗ ಒಂದು ದಿನ ರಾತ್ರಿ ಪೊಲೀಸರ ಕಣ್ಣಿಗೆ ವಿನೋದ್ ಬಿದ್ದಿದ್ದ. ಕೂಡಲೇ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಗಲ್ಲಿ ಗಲ್ಲಿಯಲ್ಲಿ ಬೆನ್ನುಹತ್ತಿ ಪೊಲೀಸರು ಬಂಧಿಸಿದರು.
13 ವರ್ಷದ ಬಾಲಕಿ ಮೇಲೆ 80 ಜನರಿಂದ ಲೈಂಗಿಕ ದೌರ್ಜನ್ಯ
ಕದ್ದ ಸುಂದರ ಆಭರಣ ಪತ್ನಿಗಾಗಿ ಸಂಗ್ರಹ
ಮನೆಗಳಲ್ಲಿ ಕಳವು ಮಾಡಿದ ಬಳಿಕ ಸುಂದರ ವಿನ್ಯಾಸದ ಕೆಲ ಆಭರಣಗಳನ್ನು ತನ್ನ ಪತ್ನಿಗೆ ವಿನೋದ್ ಸಂಗ್ರಹಿಸಿಡುತ್ತಿದ್ದ. ಐಷರಾಮಿ ಜೀವನ ನಡೆಸುತ್ತಿದ್ದ.
1.5 ಲಕ್ಷ ಬಹುಮಾನ:
ಸರಣಿ ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಸಂಜಯ ನಗರ ಇನ್‌ಸ್ಪೆಕ್ಟರ್ ಬಾಲರಾಜ್ ನೇತೃತ್ವದ ತನಿಖಾ ತಂಡಕ್ಕೆ ನಗರ ಪೊಲೀಸ್ ಆಯುಕ್ತ .1.5 ಲಕ್ಷ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.