
ಚಾಮರಾಜನಗರ, (ಏ.22): ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಜಾಲಿ ರೈಡ್ ಮಾಡಿರೋ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಪ್ರೇಮಿಗಳು ಜಾಲಿಯಾಗಿ ರೈಡ್ ಮಾಡಿದ್ದಾರೆ. ಜನರನ್ನೂ ಲೆಕ್ಕಿಸದೆ ಯುವಕ ಯುವತಿಯ ಹುಚ್ಚಾಟ ಮೆರೆದಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೈಕ್ ಚಾಮರಾಜನಗರದ ನೋಂದಣಿ ಸಂಖ್ಯೆಯನ್ನು ಹೊಂದಿದೆ. ಯುವಕ-ಯುವತಿ ಒಂದೇ ಊರಿನವರೂ ಎಂದು ಹೇಳಲಾಗಿದೆ.
ಅಪ್ರಾಪ್ತ ಬಾಲಕಿಯ ಅಪಹರಣ, ಮದುವೆಯಾಗಿ ದೈಹಿಕ ಸಂಪರ್ಕ, ಆರೋಪಿಗೆ ಕೊನೆಗೂ ಶಿಕ್ಷೆ!
ಲವರ್ ಬಾಯ್ ಪೊಲೀಸ್ ವಶಕ್ಕೆ
ಚಾಮರಾಜನಗರ ಹೊರ ವಲಯದಲ್ಲಿ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಯುವತಿಯನ್ನು ಕೂರಿಸಿಕೊಂಡು ಅಜಾಗರೂಕತೆಯಿಂದ ಹೆಲ್ಮೆಟ್ ಸಹ ಧರಿಸಿದೆ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ. ಸ್ವಾಮಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಾಗಿದ್ದಾನೆ. ಈತ ಏ. 21ರಂದು ಸಂಜೆ 4ಗಂಟೆ ಸಮಯದಲ್ಲಿ ನಗರ ಹಾಗೂ ಗುಂಡ್ಲುಪೇಟೆ ರಸ್ತೆಯ ಯಡಪುರ ಗ್ರಾಮದ ಬಳಿ, ತನ್ನ ಪಲ್ಸರ್ ಬೈಕಿನ ಟ್ಯಾಂಕಿನ ಮೇಲೆ ಯುವತಿಯೋರ್ವಳನ್ನು ಅಸಭ್ಯವಾಗಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ. ಹೆಲ್ಮೆಟ್ ಸಹ ಧರಿಸದೇ ಬೈಕನ್ನು ಯದ್ವಾತದ್ವಾ ಓಡಿಸುತ್ತಿದ್ದ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು, ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದರು. ಬೈಕ್ ನಂಬರ್ ಪರಿಶೀಲಿಸಿದ್ದಾರೆ. ಎಚ್.ಡಿ. ಕೋಟೆಯ ತಾಲೂಕಿನ ನಿವಾಸಿ ಎಸ್. ಸಿ. ಸ್ವಾಮಿ ಎಂದು ತಿಳಿದು, ಆತನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ