Fake Covid Certificate: ಹೊರ ರಾಜ್ಯಕ್ಕೆ ಹೋಗಲು ನಕಲಿ ಕೋವಿಡ್‌ ರಿಪೋರ್ಟ್‌: ಇಬ್ಬರ ಬಂಧನ

Kannadaprabha News   | Asianet News
Published : Jan 09, 2022, 07:40 AM IST
Fake Covid Certificate: ಹೊರ ರಾಜ್ಯಕ್ಕೆ ಹೋಗಲು ನಕಲಿ ಕೋವಿಡ್‌ ರಿಪೋರ್ಟ್‌: ಇಬ್ಬರ ಬಂಧನ

ಸಾರಾಂಶ

*  ಹೊರ ರಾಜ್ಯಗಳಿಗೆ ತೆರಳುವ ಜನರಿಗೆ ನಕಲಿ ಪ್ರಮಾಣಪತ್ರ ವಿತರಣೆ *  50 ಹೆಚ್ಚಿನ ನಕಲಿ ಕೋವಿಡ್‌ ವರದಿ ಜಪ್ತಿ *  ಸ್ವಾಬ್‌ ಸ್ಯಾಂಪಲ್‌ ಸಂಗ್ರಹಿಸದೆ ಕೊವೀಡ್‌ ಪರೀಕ್ಷಾ ವರದಿ ನೀಡುತ್ತಿದ್ದ ಆರೋಪಿಗಳು 

ಬೆಂಗಳೂರು(ಜ.09): ಹಣಕ್ಕಾಗಿ ನಕಲಿ ಕೋವಿಡ್‌ ಪರೀಕ್ಷಾ ಪ್ರಮಾಣಪತ್ರ(Fake Covid Certificate) ವಿತರಿಸುತ್ತಿದ್ದ ಖಾಸಗಿ ಲ್ಯಾಬ್‌ನ ಇಬ್ಬರು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ. ಕಾವಲ್‌ಭೈರಸಂದ್ರದ ಸ್ಕೈ ಲೈನ್‌ ಡಯಾಗ್ನಸ್ಟಿಕ್‌ ಲ್ಯಾಬ್‌ನ ನೌಕರರು ಬಂಧಿತರಾಗಿದ್ದು(Arrest), ಹೊರ ರಾಜ್ಯಗಳಿಗೆ ತೆರಳುವ ಜನರಿಗೆ ಆರೋಪಿಗಳು(Accused) ನಕಲಿ ಪ್ರಮಾಣಪತ್ರ ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 50 ಹೆಚ್ಚಿನ ನಕಲಿ ಕೋವಿಡ್‌ ವರದಿಗಳನ್ನು(Covid Report) ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ(Coronavirus) ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಣಿಸುವ ಹಾಗೂ ಆಗಮಿಸುವವರಿಗೆ ಕಡ್ಡಾಯವಾಗಿ ಕೊರೋನಾ ಪ್ರಮಾಣ ಸಲ್ಲಿಕೆಗೆ ಸರ್ಕಾರವು ಆದೇಶಿದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಆರೋಪಿಗಳು, ಸರ್ಕಾರದ ಅನುಮತಿ ಪಡೆಯದೆ ಸ್ಕೈಲೈನ್‌ ಡಯಾಗ್ನಸ್ಟಿಕ್‌ ಲ್ಯಾಬ್‌ನ ಹೆಸರಿನಲ್ಲಿ ಸಾರ್ವಜನಿಕರಿಗೆ ಕೊವೀಡ್‌ ಪರೀಕ್ಷಾ ಪ್ರಮಾಣ ಪತ್ರ ವಿತರಿಸುತ್ತಿದ್ದರು. ತಮ್ಮ ಪರಿಚಿತರಿಂದ ಸಂಪರ್ಕಿಸುವ ಜನರಿಂದ ಹಣ ಪಡೆದು ಆರೋಪಿಗಳು, ಸ್ವಾಬ್‌ ಸ್ಯಾಂಪಲ್‌ ಸಂಗ್ರಹಿಸದೆ ನೇರವಾಗಿ ಕೊವೀಡ್‌ ಪರೀಕ್ಷಾ ವರದಿಯನ್ನು ನೀಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Crime Cases in India: ದೇಶದ ಇತರೆ ನಗರಗಳಿಗಿಂತ ಬೆಂಗ್ಳೂರು ಸೇಫ್‌..!

ಜೂಜಾಟ: ಮೂವರ ಬಂಧನ

ರಬಕವಿ-ಬನಹಟ್ಟಿ(ಬಾಗಲಕೋಟೆ): ಇಲ್ಲಿನ ಲಕ್ಷ್ಮೀ ನಗರದ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ(Gambling) ಆಡುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಪೊಲೀಸರು(Police) ಮೂವರು ಆರೋಪಿಗಳನ್ನು ಬಂಧಿಸಿ,.71 ಸಾವಿರ ನಗದು ಹಾಗೂ 52 ಇಸ್ಪೀಟ್‌ ಎಲೆಗಳನ್ನು ವಶಕ್ಕ ಪಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಬಸಪ್ಪ ಮಹಾಲಿಂಗಪ್ಪ ಹೊಸೂರ, ಪ್ರಕಾಶ ಶಂಕರ ಪಟ್ಟಣ, ಬಸವರಾಜ ಪರಸಪ್ಪ ಗೊಲಬಾಂವಿ ಬಂಧಿತ ಆರೋಪಿಗಳು. ಮಲ್ಲಪ್ಪ ಮೇಲಪ್ಪ ಮುಗತಿ, ಶಿವಪ್ಪ ಶಂಕರ ಮನಗೂಳಿ ಪರಾರಿಯಾಗಿದ್ದಾರೆ. ಆರೋಪಿತರೆಲ್ಲರೂ ಬನಹಟ್ಟಿಹಾಗೂ ಚಿಮ್ಮಡ ಗ್ರಾಮದವರಾಗಿದ್ದಾರೆ. ಬನಹಟ್ಟಿ ಪೊಲೀಸ್‌ ತಂಡವು ಖಚಿತ ಮಾಹಿತಿ ಮೇರೆಗೆ ದಾಳಿ(Raid)ನಡೆಸಿ ಆರೋಪಿಗಳನ್ನು ಬಂಧಿಸಿದೆ. ಈ ಕುರಿತು ಬನಹಟ್ಟಿಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಳೆ ಫಸಲಿನೊಂದಿಗೆ ಬೆಳೆದಿದ್ದ ಗಾಂಜಾ ವಶ

ಹನೂರು(ಚಾಮರಾಜನಗರ): ರಾಮಾಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ(Marijuana)ವಶಪಡಿಸಿಕೊಂಡಿರುವ ಪೊಲೀಸರು ಕೃಷ್ಣಮೂರ್ತಿ ಎಂಬಾತನನ್ನು ಬಂಧಿಸಿದ್ದಾರೆ.

ಬಾಳೆ ತೋಟದಲ್ಲಿ ಫಸಲಿನ ಮಧ್ಯೆ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ರಾಮಾಪುರ ಪೊಲೀಸರು ಪರಿಶೀಲಿಸಿದಾಗ 6 ಕೆ.ಜಿ 350 ಗ್ರಾಂ ಗಾಂಜಾ ಪತ್ತೆಯಾಗಿದೆ. ಕೂಡಲೇ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಡಿವೈಎಸ್‌ಪಿ ನಾಗರಾಜು, ಇನ್‌ ಸ್ಪೆಕ್ಟರ್‌ ನಂಜುಂಡಸ್ವಾಮಿ, ಪಿಎಸ್‌ಐ ಮಂಜುನಾಥ್‌ ಪ್ರಸಾದ್‌, ಎಎಸ್‌ಐ ಮಹದೇವಸ್ವಾಮಿ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ರಂಗಸ್ವಾಮಿ, ನಾಗಶೆಟ್ಟಿ, ಗಿರೀಶ್‌ ಕಾನ್‌ಸ್ಟೇಬಲ್‌ ಸುರೇಶ್‌, ಮನೋಹರ್‌ ಪಾಲ್ಗೊಂಡಿದ್ದರು.

Suvarna FIR : ಅದೊಂದು ಸಂಬಂಧಕ್ಕಾಗಿ ಗಂಡನ ಕತೆಯನ್ನೇ ಮುಗಿಸಿದ ಹಾಸನದ ಹಂತಕಿ!

ಡ್ರಗ್ಸ್‌ ಸಾಗಿಸುತ್ತಿದ್ದ ಮಹಿಳೆ ಬಂಧನ 1.5 ಕೋಟಿ ಮೊತ್ತದ ಡ್ರಗ್ಸ್‌

ಧಾರವಾಡ: ರೈಲಿನ ಮೂಲಕ ಅಪಾರ ಮೊತ್ತದ ಡ್ರಗ್ಸ್‌ನ್ನು(Drugs) ರಾಜಧಾನಿ ಬೆಂಗಳೂರಿಗೆ(Bengaluru) ಸಾಗಿಸುತ್ತಿದ್ದ ಉಗಾಂಡಾ(Uganda) ಮೂಲದ ಮಹಿಳೆಯನ್ನು(Woman) ಶನಿವಾರ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬೆಂಗಳೂರಿನ ನಾರ್ಕೋಟಿಕ್‌ ಕಂಟ್ರೋಲ್‌ ಬ್ಯೂರೋ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದೆಹಲಿಯಿಂದ ಹೊರಟಿದ್ದ ನಿಜಾಮುದ್ದೀನ ರೈಲಿನಲ್ಲಿದ್ದ ಮಹಿಳೆಯನ್ನು ಪಕ್ಕಾ ಮಾಹಿತಿ ಮೇರೆಗೆ ಅಧಿಕಾರಿಗಳು ದೆಹಲಿಯಿಂದಲೂ ಹಿಂಬಾಲಿಸುತ್ತಾ ಬಂದಿದ್ದು, ಹುಬ್ಬಳ್ಳಿಯಲ್ಲಿ ಒಂದೂವರೆ ಕೋಟಿ ಮೊತ್ತದ ಡ್ರಗ್ಸ್‌ನೊಂದಿಗೆ ಬಂಧಿಸಿದ್ದಾರೆ. ನಂತರ ಆರೋಪಿ ಮಹಿಳೆಯನ್ನು ಧಾರವಾಡ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರು ಮಾಡಿದ್ದು ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಕುರಿತು ಹುಬ್ಬಳ್ಳಿಯ ರೈಲ್ವೆ ಪೊಲೀಸರು ಪ್ರಕರಣ ಸಹ ದಾಖಲು ಮಾಡಿಕೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ