ನಗರದ ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗ್ ಮೇಲೆ ಬಳ್ಳಾರಿ ಗಾಂಧಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಶೋಕ್ ಮತ್ತು ಹರೀಶ್ ಕುಮಾರ್ ಬಂಧಿತ ಆರೋಪಿಗಳು
ಬಳ್ಳಾರಿ (ಏ.14):ನಗರದ ಲಾಡ್ಜ್ ಒಂದರಲ್ಲಿ ರೂಂ ಬುಕ್ ಮಾಡಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಗ್ಯಾಂಗ್ ಮೇಲೆ ಬಳ್ಳಾರಿ ಗಾಂಧಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಶೋಕ್ ಮತ್ತು ಹರೀಶ್ ಕುಮಾರ್ ಬಂಧಿತ ಆರೋಪಿಗಳು. ಎ1 ಆರೋಪಿಯಾಗಿರುವ ಅಶೋಕ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಬ್ಯಾಂಕಿನಲ್ಲಿ ನೋಟು ಚಲಾವಣೆ ವಹಿವಾಟು ಅರಿತಿದ್ದ ಖದೀಮ, ಹರೀಶ್ ಜೊತೆಗೆ ಸೇರಿ ಖೋಟಾ ನೋಟು ಪ್ರಿಂಟ್ ಮಾಡಲು ಸ್ಕೆಚ್ ಆಗಿದ್ದ. ಅದಕ್ಕಾಗಿ ಬಳ್ಳಾರಿಯ ಕೋಲಾಚಲಂ ಕಾಂಪೌಂಡ್ ನಲ್ಲಿರುವ ಮೋಹನ್ ಲಾಡ್ಜ್ ನಲ್ಲಿ ಉಳಿದುಕೊಂಡು ಖೋಟಾ ನೋಟು ಪ್ರಿಂಟ್ ಮಾಡಲು ಮುಂದಾಗಿದ್ದರು.
undefined
ಮಗು ಮಾಡಿಕಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ; ಕೊಲೆಯಲ್ಲಿ ಅಂತ್ಯ!
ಲೋಕಸಭಾ ಚುನಾವಣೆ ಹಿನ್ನೆಲೆ ನಕಲಿ ನೋಟುಗಳನ್ನು ಮಾರುಕಟ್ಟೆಗೆ ಬಿಡುವ ಪ್ಲಾನ್ ಮಾಡಿದ್ದ ಖದೀಮರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಸಿದ್ದರಾಮೇಶ್ವರ, ಪಿಎಸ್ಐ ಸೌಮ್ಯಾ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಆರೋಪಿಗಳನ್ನು ಬಂದಿಸಲಾಗಿದೆ. ದಾಳಿ ವೇಳೆ ಲಾಡ್ಜ್ ರೂಂ ನಲ್ಲಿಟ್ಟಿದ್ದ ಝರಾಕ್ಸ್ ಕಲರ್ ಪ್ರಿಂಟ್ ಮಷಿನ್, ಸುಮಾರು 8000 ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪೆಡದ ಪೊಲೀಸರು.