ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಗರದ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ.ಗಿರಿಜಾ ಕೊಲೆಯಾದ ಪತ್ನಿ, ನವೀನ್ ಕೊಲೆ ಮಾಡಿದ ಆರೋಪಿ ಪತಿ
ಬೆಂಗಳೂರು (ಏ.14): ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಗರದ ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ.
ಗಿರಿಜಾ ಕೊಲೆಯಾದ ಪತ್ನಿ, ನವೀನ್ ಕೊಲೆ ಮಾಡಿದ ಆರೋಪಿ ಪತಿ. ಭಟ್ಕಳ ಮೂಲದವರಾದ ಗಿರಿಜಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್ ಎಂಬುವವನೊಂದಿಗೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಗಂಡ-ಹೆಂಡತಿ ಇಬ್ಬರೂ ಬೆಂಗಳೂರಲ್ಲಿ ನೆಲೆಸಿದ್ದರು.
ಮದುವೆಯಾದ ಪತ್ನಿಯನ್ನೇ ಕಾಲ್ ಗರ್ಲ್ ಮಾಡಿದ ಗಂಡ; ಫೇಸ್‌ಬುಕ್‌ನಲ್ಲಿ ಹೆಂಡತಿ ಫೊಟೋ ಹಂಚಿಕೊಂಡ ಕಿತಾಪತಿ
ಮದುವೆ ಬಳಿಕ ಗಿರಿಜಾಗೆ ಗರ್ಭಪಾತ ಆಗಿತ್ತು. ಗರ್ಭಪಾತ ಆಗಿದ್ದರಿಂದ ಸದ್ಯಕ್ಕೆ ಮಗು ಬೇಡ ಎಂದಿದ್ದ ಗಿರಿಜಾ. ಆದರೆ ಮಗು ಬೇಕು ಅಂತಾ ಹಟಕ್ಕೆ ಬಿದ್ದಿದ್ದ ಗಂಡ ನವೀನ್. ಇದೇ ವಿಚಾರಕ್ಕೆ ಇಬ್ಬರ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು.
ಏ.12 ರಂದು ಮತ್ತೆ ಮಗು ಬೇಕು ನವೀನ್, ಬೇಡ ಸದ್ಯಕ್ಕೆ ಬೇಡ ಅಂತಾ ಗಿರಿಜಾ ಜಗಳಮಾಡಿಕೊಂಡಿದ್ದಾರೆ. ಅಂದು ರಾತ್ರಿ ಕುಪಿತಗೊಂಡಿದ್ದ ಆರೋಪಿ ನವೀನ್ ಪತ್ನಿಯನ್ನ ಮುಗಿಸಲು ನಿರ್ಧರಿಸಿಬಿಟ್ಟಿದ್ದಾನೆ. ಪತ್ನಿ ಮಲಗಿರುವ ಸಮಯ ನೋಡಿ ಉಸಿರುಗಟ್ಟಿಸಿ ಕೊಲೆ ಮಾಡಿಯೇ ಬಿಟ್ಟಿದ್ದಾನೆ ಪಾಪಿ ಗಂಡ. ಪತಿಯನ್ನ ನಂಬಿ ಬಂದ ಗಿರಿಜಾ ನಿದ್ದೆಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ್ದಾಳೆ. ಸದ್ಯ ಆರೋಪಿ ನವೀನ್ ಬಂಧಿಸಿದ ಪೊಲೀಸರು. ಕೊಲೆ ಘಟನೆ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.