ಪಾನ್ ಶಾಪ್‌ನಲ್ಲಿಯೇ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ದಂಧೆ: ಇಬ್ಬರ ಬಂಧನ

By Govindaraj S  |  First Published Aug 12, 2022, 11:59 PM IST

ಗಾಂಜಾ ಮಾರಾಟ ಮಾಡಿದರೇ ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತೆವೆಂಬ ಲೆಕ್ಕಾಚಾರದಿಂದ ಖದೀಮರು ಪಾನ್ ಶಾಪ್‌ನಲ್ಲಿ ಎಗ್ಗಿಲ್ಲದೇ  ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.


ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಆ.12): ರಾಜ್ಯದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಮಾರಾಟ ಅನೇಕ  ಪ್ರಕರಣಗಳು ಬೆಳಕಿಗೆ ಬಂದಿವೆ. ಗಾಂಜಾ ಮಾರಾಟ ಮಾಡಿದರೇ ಪೊಲೀಸರ ಕೈಗೆ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತೆವೆಂಬ ಲೆಕ್ಕಾಚಾರದಿಂದ ಖದೀಮರು ಪಾನ್ ಶಾಪ್‌ನಲ್ಲಿ ಎಗ್ಗಿಲ್ಲದೇ  ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

Tap to resize

Latest Videos

undefined

ಆನಂದ ಎಂಬ ಹೆಸರಿನ ಚಾಕೊಲೇಟ್ ಒಳಗಡೆ ನಶೆಯ ಗಾಂಜಾ ಮಿಶ್ರಣ: ಇಲ್ಲಿವರೆಗೆ ಯಾದಗಿರಿ ಜಿಲ್ಲೆಯಲ್ಲಿ ಪೊಲೀಸರು ಗಾಂಜಾ ಮಾರಾಟ, ಅಕ್ರಮ ದಂಧೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಆದರೆ, ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ದಂಧೆಯನ್ನು ಅಬಕಾರಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಉತ್ತರ ಪ್ರದೇಶದ ಮೂಲದ ಪಾನ್ ಶಾಪ್ ವ್ಯಾಪಾರಸ್ಥರು ಎರಡು ಪ್ರತ್ಯೇಕ ಪಾನ್ ಶಾಪ್‌ನಲ್ಲಿ ಪಾನ್ ಮಾರಾಟ ಮಾಡುವ ಜೊತೆ ಚಾಕೊಲೇಟ್ ರೂಪದ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಖಚೀತ ಮಾಹಿತಿ ಮೆರೆಗೆ ಅಬಕಾರಿ ಉಪ ಆಯುಕ್ತ ಮೋತಿಲಾಲ್ ಅವರ ಮಾರ್ಗದರ್ಶನದಲ್ಲಿ  ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನರೆಡ್ಡಿ, ಅಬಕಾರಿ ನಿರೀಕ್ಷಕ ಕೇದಾರನಾಥ ಎಸ್ ಟಿ ನೇತೃತ್ವದಲ್ಲಿ ದಾಳಿ ಮಾಡಿ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿ ಖದೀಮರಿಬ್ಬರನ್ನು ಬಂಧಿಸಲಾಗಿದೆ.

ಮೊನ್ನೇ ಅಷ್ಟೇ ಪರಿಷತ್‌ಗೆ ಆಯ್ಕೆಯಾಗಿದ ಬಾಬುರಾವ್ ಚಿಂಚನಸೂರ್ ರಾಜೀನಾಮೆ ಮಾತು

ಪಾನ್ ಶಾಪ್‌ನಲ್ಲಿ ಚಾಕೊಲೇಟ್ ಮಿಶ್ರಿತ ಗಾಂಜಾ ಮಾರಾಟ: ಪಾನ್ ಶಾಪ್‌ನಲ್ಲಿ ಪಾನ್ ಮಾರಾಟ ಮಾಡಿ ನೆಮ್ಮದಿಯಾಗಿ ಜೀವನ ನಡೆಸದೇ ಅಕ್ರಮ ದಂಧೆಗೆ ಈ ಉತ್ತರ ಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳು ಕೈ ಹಾಕಿದ್ದಾರೆ. ಪಾನ್ ಶಾಪ್‌ನಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡಿ ಹಣ ಸಂಪಾದಿಸುವ ಕೆಲಸಕ್ಕೆ ಕೈಹಾಕಿದ್ದು, ಇಬ್ಬರನ್ನು ಅಬಕಾರಿ ಅಧಿಕಾರಿಗಳು ಎಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ಆರೋಪಿಗಳು ಅರೆಸ್ಟ್: ರಾಜು ಪಾನ್ ಶಾಪ್‌ನಲ್ಲಿ 930 ಗ್ರಾಂನ  145 ಗಾಂಜಾ ಮಿಶ್ರಿತ ಚಾಕೊಲೇಟ್  ಜಪ್ತಿ ಮಾಡಿ ಆರೋಪಿ ಜಿತೇಂದ್ರ ಅವರನ್ನು ಬಂಧಿಸಲಾಗಿದೆ. ಅದೇ ರೀತಿ ಮಹೇಶ ಪಾನ್ ಶಾಪ್‌ನಲ್ಲಿ, 946 ಗ್ರಾಂ, 150 ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿ ಆರೋಪಿ ಮೋಹಿತ್‌ಕುಮಾರ ಅವರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದಿಂದ ಖರೀದಿ ಮಾಡಿಕೊಂಡು ಶಹಾಪುರ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದರು. ಉತ್ತರ ಪ್ರದೇಶ ಮೂಲದ ಕಂಪನಿಯ ಮುನಕ್ಕಾ  ಕಂಪನಿಯ ಆನಂದ ಹೆಸರಿನ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಲಾಗಿದೆ. ಯಾರಿಗೂ ಅನುಮಾನ ಬಾರದಂತೆ ಎರಡು ರೂಪಾಯಿ ಬೆಲೆ ಮುದ್ರಿಸಲಾಗಿದ್ದು, 20 ರಿಂದ 50 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ತಮ್ಮ ಪರಿಚಿತ ವ್ಯಸನಿಗಳಿಗೆ ಮಾತ್ರ ಚಾಕೊಲೇಟ್ ನೀಡುತ್ತಿದ್ದರು.

40 ಪರ್ಸೆಂಟ್‌ ಅಲ್ಲ, 100ಕ್ಕೆ ನೂರು ಭ್ರಷ್ಟ ಸರ್ಕಾರ: ಈಶ್ವರ ಖಂಡ್ರೆ

ಅಕ್ರಮ ಜಾಲ ಪತ್ತೆ ಹಚ್ಚಲಾಗುವುದು: ಈ ಬಗ್ಗೆ ಅಬಕಾರಿ ಉಪ ಆಯುಕ್ತ ಮೋತಿಲಾಲ್ ಅವರು ಮಾತನಾಡಿ, ಉತ್ತರ ಪ್ರದೇಶದಿಂದ ಖರೀದಿ ಮಾಡಿ ಮಾರಾಟ ಮಾಡುವ ಖಚೀತ ಮಾಹಿತಿ ಮೆರೆಗೆ ದಾಳಿ ಮಾಡಿ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಶಹಾಪುರ ಪಟ್ಟಣದಲ್ಲಿ ಈ ಅಕ್ರಮ ದಂಧೆ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಹಾಪುರ ಪಟ್ಟಣದಲ್ಲಿ ಈ ದಂಧೆ ಪತ್ತೆಯಾಗಿದೆ. ಈ ಜಾಲದ ಮೂಲದ ಬಗ್ಗೆ ಪೊಲೀಸರು ಪತ್ತೆ ಹಚ್ಚಿ ಈ ದಂಧೆಗೆ ಬ್ರೇಕ್ ಹಾಕಬೇಕಿದೆ.

click me!