ಆಗಸ್ಟ್ 9 ನೇ ತಾರೀಕು, ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿತ್ತು. ಈ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಐಜಿಪಿ ಎನ್ ಸತೀಶ್ ಕುಮಾರ್ ಇದು ಕೋಮು ಗಲಾಟೆ ಅಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ.
ವರದಿ; ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್
ಗದಗ (ಅ.12): ಆಗಸ್ಟ್ 9 ನೇ ತಾರೀಕು ನಡೆದ ಗಲಾಟೆಗೆ ಸಂಬಂಧಿಸಿ ತಾಲೂಕಿನ ಮಲ್ಲಸಮುದ್ರ ಗ್ರಾಮಕ್ಕೆ ವಿಸಿಟ್ ಮಾಡಿದ ಉತ್ತರ ವಲಯ ಐಜಿಪಿ ಎನ್ ಸತೀಶ್ ಕುಮಾರ್, ಪರಿಸ್ಥಿತಿ ಅವಲೋಕಿಸಿದ್ರು. ನಂತ್ರ ಮಾಧ್ಯಮದ ಜೊತೆ ಮಾತ್ನಾಡಿ, ಗ್ರಾಮದಲ್ಲಿ ನಡೆದಿರೋದು ಕೋಮು ಗಲಾಟೆ ಅಲ್ಲ. ಗಲಾಟೆ ಮಾಡಿದ್ದವರನ್ನ ವಶಕ್ಕೆ ಪಡೆಯಲಾಗಿದೆ ಅಂತಾ ಸ್ಪಷ್ಟನೆ ನೀಡಿದ್ರು. ಆಗಸ್ಟ್ 9 ನೇ ತಾರೀಕು, ಮಲ್ಲಸಮುದ್ರ ಗ್ರಾಮದಲ್ಲಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿತ್ತು. ಘಟನೆಯಲ್ಲಿ ಸೋಮು ಎಂಬಾತ ತೌಸಿಫ್, ಮುಸ್ತಾಕ್ ಅನ್ನೋರಿಗೆ ಚಾಕು ಚುಚ್ಚಿ ಗಾಯಗೊಳಿಸಿದ್ದ. ತೌಸಿಫ್, ಮುಸ್ತಾಕ್ ಕಡೆಯವ್ರು ಸೋಮುವನ್ನ ಬೆನ್ನಟ್ಟಿ ಹಲ್ಲೆ ಮಾಡಲು ಮುಂದಾಗಿದ್ರು. ಮನೆ ಸೇರಿದ್ದ ಸೋಮುವನ್ನ ವಶಕ್ಕೆ ನೀಡುವಂತೆ ಗಲಾಟೆ ಮಾಡಿದ್ರು. ಸೋಮು ಮನೆ ಗಾಜು ಒಡೆದು ಆಕ್ರೋಶ ವ್ಯಕ್ತ ಪಡಿಸಿದ್ರು. ಇದಾದ ಕೆಲವೇ ಕೆಲ ಗಂಟೆಗಳು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವಂತೆ ಮಾಡಿತ್ತು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಸೋಮುವನ್ನ ವಶಕ್ಕೆ ಪಡೆದಿದ್ರು. ಅಲ್ದೆ, ಗಲಾಟೆಯಲ್ಲಿ ಭಾಗಿಯಾಗಿದ್ದ ಒಬ್ಬ ಅಪ್ತಾಪ್ತ ಬಾಲಕನನ್ನೂ ವಶಕ್ಕೆ ಪಡೆಯಲಾಗಿತ್ತು. ಅದಾಗ್ಲೆ, ಸೋಷಿಯಲ್ ಮೀಡಿಯಾದಲ್ಲಿ ಕೋಮು ಗಲಭೆ ಬಣ್ಣ ನೀಡೋದಕ್ಕೆ ಕೆಲವ್ರು ಮುಂದಾಗಿದ್ರು.
undefined
ಸಲ್ಮಾನ್ ಎಂಬಾತನ ಬಂಧನ : ಕೇಸ್ ಗೆ ಸಿಕ್ಕ ಟ್ವಿಸ್ಟ್!
ಆರಂಭದಲ್ಲಿ ಕೋಮು ಸಂಘರ್ಷದ ಹಿನ್ನೆಲೆ ಚಾಕು ಇರಿನ ನಡೆದಿದೆ ಅಂತಾ ಹೇಳಲಾಗ್ತಿತ್ತು.. ಆದ್ರೆ, ಯಾವಾಗ ಸಲ್ಮಾನ್ ಎಂಬಾತನನ್ನ ವಶಕ್ಕೆ ಪಡೆಯಲಾಯ್ತೊ ಆಗ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕತಾಯ್ತು. ಜೊತೆಗೆ ಸೋಮು ಮನೆಗೆ ಹೊಕ್ಕು ಗಲಾಟೆ ಮಾಡಿದ 15 ಜನರ ವಿರುದ್ಧವೂ ಕೇಸ್ ದಾಖಲಿಸಲಾಯ್ತು.
ದಲಿತನ ಮೇಲೆ ಹಲ್ಲೆ ಆರೋಪ: ಜಿಲ್ಲಾಧಿಕಾರಿ ಕಚೇರಿ ಎದ್ರು ಧರಣಿ
ಶ್ರೀರಾಮ ಸೇನೆ ಹಾಗೂ ದಲಿತ ಸಂಘಟನೆ ಸಹಯೋಗದಲ್ಲಿ ಗದಗ ಜಿಲ್ಲಾಧಿಕಾರಿ ಕಚೇರಿ ಎದ್ರು ಸೋಮು ಕುಟುಂಬಸ್ಥರು ಧರಣಿ ನಡೆಸಿದ್ರು.. ಸೋಮು ಗುಡಿಯನ್ನ ವಶಕ್ಕೆ ಪಡೆದಿರೋ ಪೊಲೀಸರು, ಕೌಂಟರ್ ಕೇಸ್ ರಿಜಿಸ್ಟರ್ ಮಾಡಿಲ್ಲ ಅಂತಾ ತಗಾದೆ ತೆಗೆದ್ರು.. ದಲಿತ ಯುವಕ ಸೋಮು ಮೇಲೆ ಹಲ್ಲೆ ಮಾಡಲಾಗಿದೆ, ಅಲ್ದೆ ಮನೆ ಕಿಟಕಿ ಧ್ವಂಸಗೊಳಿಸಲಾಗಿದೆ.. ಹೀಗಾಗಿ ಕಿಡಿಗೆಡಿಗಳನ್ನ ವಶಕ್ಕೆ ಪಡೆಬೇಕು ಅಂತಾ ಪಟ್ಟು ಹಿಡಿದ್ರು.. ಅಲ್ದೆ, ಕೇಸ್ ದಾಖಲಿಸಿ, ವಶಕ್ಕೆ ಪಡೆಯದಿದ್ರೆ ಗದಗ ಬಂದ್ ಮಾಡೋದಾಗಿ ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.
Bengaluru; ತರಗತಿಯಲ್ಲಿ ಬಾಲಕಿಯ ಪ್ಯಾಂಟ್ ಎಳೆದ ಶಿಕ್ಷಕಿ ವಿರುದ್ಧ ಕ್ರಿಮಿನಲ್ ಕೇಸ್
ಮುಂಜಾಗೃತ ಕ್ರಮವಾಗಿ ಪ್ರಮೋದ್ ಮುತಾಲಿಕ್ ಎಂಟ್ರಿ ಬ್ಯಾನ್
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಗದಗ ಎಂಟ್ರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.. ಶುಕ್ರವಾರ ಬೆಳಗ್ಗಿನ ಏಳು ಗಂಟೆಯಿಂದ ಭಾನುವಾರ ಮಧ್ಯರಾತ್ರಿ 12 ವರೆಗೆ ಗದಗ ನಗರ ಪ್ರವೇಶ ನಿರ್ಭಂಧಿಸಿ ಆದೇಶ ಹೊರಡಿಸಲಾಗಿದೆ. ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ ಸೋಮು ಗುಡಿಯನ್ನ ಭೇಟಿ ಮಾಡೋದಕ್ಕೆ ಪ್ರಮೋದ್ ಮುತಾಲಿಕ್ ಮುಂದಾಗಿದ್ರು. ಆದ್ರೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಅವರನ್ನ ನಿರ್ಬಂಧಿಸಿದೆ.
ಚಾಕುವಿನಿಂದ ಇರಿದು 25 ವರ್ಷದ ಯುವಕನ ಬರ್ಬರ ಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಪ್ರಕರಣದಲ್ಲಿ ಗಾಯಗೊಂಡಿರೋ ತೌಸಿಫ್, ಮುಸ್ತಾಕ್ ಚೇತರಿಕೆ ಕಾಣ್ತಿದಾರೆ. ಗ್ರಾಮಕ್ಕೆ ಭೇಟಿ ನೀಡಿರೋ ಐಜಿಪಿ ಸತೀಶ್ ಕುಮಾರ್ ಪರಿಸ್ಥಿತಿ ಹತೋಟಿಯಲ್ಲಿದೆ ಅನ್ನೋ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಎಚ್ಚರ ವಹಿಸ್ಬೇಕು. ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಸಲಹೆ ನೀಡಿದ್ದಾರೆ.