
ಬೆಂಗಳೂರು (ಫೆ.21): ಕ್ಯಾಬ್ ಡ್ರೈವರ್ ಹಾಗೂ ಆತನ ಸ್ನೇಹಿತ ಸೇರಿಕೊಂಡು ಕಾಲ್‌ಗರ್ಲ್ ಒಬ್ಬಳನ್ನು ಓಯೋ ರೂಮ್‌ಗೆ ಕರೆಸಿಕೊಂಡು ಅವಳನ್ನು ಹೇಳಿದ ಸ್ಥಳಕ್ಕೆ ಬಿಡಲು ಹೋದಾಗ ಕಾರಿನ ಸಮೇತವಾಗಿ ಯುವತಿ ಹಾಗೂ ಇನ್ನೊಬ್ಬ ಸ್ನೇಹಿತನನ್ನು ಕಿಡ್ನಾಪ್ ಮಾಡಿದ್ದ ಕೇಸ್‌ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಕಾಲ್ ಗರ್ಲ್ ಆಗಿ ಬಂದಿದ್ದ ಯುವತಿಯೇ 5 ಲಕ್ಷ ರೂ. ಹಣಕ್ಕಾಗಿ ಕಿಡ್ನಾಪ್ ಮಾಡಿಸಿದ್ದಾಳೆ.
ಕ್ಯಾಬ್ ಡ್ರೈವರ್ ಮಂಜುನಾಥ್ ಹಾಗೂ ಆತನ ಸ್ನೇಹಿತ ರಜನಿಕಾಂತ್ ಇಬ್ಬರೂ ಸೇರಿಕೊಂಡು ಕೆಂಗೇರಿ ಬಳಿಯಲ್ಲಿದ್ದ ಕಾಲ್‌ಗರ್ಲ್‌ಳನ್ನು ಬುಕ್ ಮಾಡಿ ಓಯೋ ರೂಮ್‌ಗೆ ಕರೆದುಕೊಂಡು ಹೋಗಿದ್ದಾರೆ. ನಂತರ, ತನನ್ನು ಹೇಳಿದ ಸ್ಥಳಕ್ಕೆ ಬಿಡುವಂತೆ ಕೇಳಿಕೊಂಡಿದ್ದು, ಯುವಕರು ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಕಾಲ್‌ಗರ್ಲ್ ಮೊದಲೇ ತನ್ನ ಸಹಚರರಿಗೆ ಮಾಹಿತಿ ನೀಡಿ ಯುವಕರನ್ನು ಕಿಡ್ನಾಪ್ ಮಾಡಿಸಲು ಯೋಜನೆ ರೂಪಿಸಿದ್ದಳು. ಅದರಂತೆ ಹೋಟೆಲ್ ಲೊಕೇಶನ್ ಶೇರ್ ಮಾಡಿಕೊಂಡು ಕಿಡ್ನಾಪ್ ಕೂಡ ಮಾಡಲಾಗಿತ್ತು. ಆದರೆ, ಈ ವೇಳೆ ಡ್ರೈವರ್ ಮಂಜುನಾಥ್ ಕಾರಿನಿಂದ ಜಂಪ್ ಮಾಡಿ ತಪ್ಪಿಸಿಕೊಂಡು ದೂರು ನೀಡಿದ್ದನು.
Bengaluru: ಓಯೋ ರೂಮ್‌ಗೆ ಕಾಲ್ ಗರ್ಲ್ ಕರೆಸಿಕೊಂಡ ಕ್ಯಾಬ್ ಡ್ರೈವರ್: ಕಾರಿನ ಸಮೇತ ಕಾಲ್ ಗರ್ಲ್ ಕಿಡ್ನಾಪ್
ಪೊಲೀಸರಿಂದ ಆರೋಪಿಗಳ ಬಂಧನ: ಕಾರಿನಲ್ಲಿದ್ದ ಯುವಕ ಹಾಗೂ ಕಾಲ್‌ಗರ್ಲ್‌ಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದ ಸುಲಿಗೆಕೋರರ ಬೆನ್ನು ಹತ್ತಿದ ಪೊಲೀಸರು ಅವರನ್ನು ನಂಜನಗೂಡು ಬಳಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಪ್ರಮುಖ ಆರೋಪಿ ತಿರುಮಲೇಶ್,ನವೀನ್, ಕೆಂಪರಾಜ್, ಮಂಜುನಾಥ್, ಭರತ್ ಹಾಗೂ ದಪ್ಪೀರ್ ಸಾಭ್ ಸೇರಿ 7 ಜನರನ್ನು ಬಂಧಿಸಿದ್ದಾರೆ. ಜೊತೆಗೆ, ಕಿಡ್ನಾಪರ್ಸ್‌ಗೆ ಸಾಥ್ ನೀಡಿದ್ದ ಕಾಲ್‌ಗರ್ಲ್ ಪ್ರೀಯಾಳನ್ನು ಪೋಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಸುಲಿಗೆಕೋರರಿಂದ 5 ಲಕ್ಷ ರೂ.ಗೆ ಬೇಡಿಕೆ: ಇನ್ನು ಕಾಲ್‌ಗರ್ಲ್ ಹಾಗೂ ಸ್ನೇಹಿತ ರಜನಿಕಾಂತ್ ಅವರನ್ನು ಕಾರಿನ ಸಮೇತವಾಗಿ ಕಿಡ್ನಾಪ್ ಮಾಡಿದ್ದ ದೂರು ಬೇಗೂರು ಪೊಲೀಸ್ ಠಾಣೆಯಲ್ಲಿ ದಾಖಲು ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿಗಳನ್ನು ಟ್ರೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸುಲಿಗೆಕೋರರ ಗ್ಯಾಂಗ್‌ನ ಸದಸ್ಯೆಯೂ ಆಗಿದ್ದ ಕಾಲ್ ಗರ್ಲ್ ಓಯೋ ರೂಮ್‌ನಿಂದ ವಾಪಸ್ ಹೋಗುವಾಗ, ತಮ್ಮ ಯೋಜನೆಯಂತೆ ಕಿಡ್ನಾಪ್ ಮಾಡಿಕೊಂಡು ನಂಜನಗೂಡು ಕಡೆಗೆ ಹೋಗಿದ್ದಾರೆ. ನಂತರ, ಕ್ಯಾಬ್ ಡ್ರೈವರ್ ಮಂಜುನಾಥ್‌ಗೆ ಕರೆ ಮಾಡಿ 5 ಲಕ್ಷ ರೂ. ಹಣವನ್ನು ಕೊಟ್ಟರೆ ಆತನ ಸ್ನೇಹಿತ ರಜನಿಕಾಂತ್‌ನನ್ನು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಒಂದೇ ಟೈಮಲ್ಲಿ 12 ಯುವತಿಯರೊಂದಿಗೆ ಚಾಟಿಂಗ್: ಕೆಲಸ ಕೊಡಿಸೋ ನೆಪದಲ್ಲಿ ಕಾಮಕ್ರೀಡೆಗೆ ಬಳಕೆ
ಲೊಕೇಶನ್ ಶೇರ್ ಮಾಡಿದ್ದ ಕಾಲ್‌ಗರ್ಲ್: ಕಾಲ್ ಗರ್ಲ್ ಆಗಿ ಬಂದಿದ್ದ ಯುವತಿ ಕಿಡ್ನಾಪರ್ಸ್‌ಗೆ ಸಾಥ್ ಕೊಟ್ಟಿದ್ದಾಳೆ. ಆರೋಪಿಗಳಿಗೆ ಹೊಟೇಲ್ ಲೋಕೇಷನ್ ಕಳುಹಿಸಿದ್ದ ಯುವತಿಯ ಲೊಕೇಷನ್ ಆಧರಿಸಿ, ಬೈಕ್‌ನಲ್ಲಿ 7 ಮಂದಿ ಯುವಕರು ಆಗಮಿಸಿದ್ದಾರೆ. ನಂತರ, ಬೈಕ್‌ಗೆ ಗುದ್ದಿಕೊಂಡು ಹೋಗಿದ್ದೀಯ ಎಂದು ಜಗಳ ಮಾಡಿ, ಕಾರಿನ ಸಮೇತ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದ ಆರೋಪಿಗಳು ಮಂಡ್ಯ, ಮೈಸೂರು ಮೂಲಕ ನಂಜನಗೂಡಿಗೆ ತೆರಳಿದ್ದಾರೆ. ನಂತರ ರಜನೀಕಾಂತ್ ಬಿಡುಗಡೆಗೆ 5 ಲಕ್ಷ ಹಣ ನೀಡುವಂತೆ ಡಿಮಾಂಡ್ ಮಾಡಿದ್ದಾರೆ. ರಾತ್ರೋರಾತ್ರಿ ಆರೋಪಿಗಳ ಬೆನ್ನು ಬಿದ್ದಿದ್ದ ಬೇಗೂರು ಪೊಲೀಸರು, ನಂಜನಗೂಡು ಪೊಲೀಸರ ನೆರವಿನಿಂದ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ