ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆಗೆ ಟ್ವಿಸ್ಟ್‌: ಆರೋಪಿ ಕಾಲೇಜಿನೊಳಗೆ ಬರಲು ಐಡಿ ಕಾರ್ಡ್ ಕೊಟ್ಟಿದ್ಯಾರು?

By Sathish Kumar KH  |  First Published Jan 3, 2023, 12:50 PM IST

ಪ್ರೆಸಿಡೆನ್ಸಿ ಯೂನಿವರ್ಸಿಟಿ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್
ಕಾಲೇಜಿನ ಆವರಣದೊಳಗೆ ಪ್ರವೇಶ ಮಾಡಲು ಆರೋಪಿಗೆ ಸಾಥ್‌ ನೀಡಿದವರು ಯಾರು?
ಬೆಂಗಳೂರಿನ ಎಲ್ಲ ಕಾಲೇಜು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಕೇಸ್


ಬೆಂಗಳೂರು (ಜ.03): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದ್ದ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿನ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ರೋಚಕ ಟ್ವಿಸ್ಟ್‌ ಲಭ್ಯವಾಗುತ್ತಿದೆ. ಕಾಲೇಜಿನ ಆವರಣದೊಳಗೆ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದ್ದರೂ, ಕೊಲೆಪಾತಕಿ ಕಾಲೇಜಿನೊಳಗೆ ಪ್ರವೇಶಿಸಲು ಇನ್ನೊಬ್ಬ ವಿದ್ಯಾರ್ಥಿ ತನ್ನ ಐಡಿ ಕಾರ್ಡ್‌ ಕೊಟ್ಟು ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆ (Rajanukunte Police Station) ವ್ಯಾಪ್ತಿಯಲ್ಲಿರುವ ಪ್ರೆಸೆಡೆನ್ಸಿ ಯೂನಿವರ್ಸಿಟಿಯಲ್ಲಿ (Presidency University) ನಿನ್ನೆ ಮಧ್ಯಾಹ್ನ ಬಿಇ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅವರ ಸೋದರತ್ತೆಯ ಮಗ ಅಂದರೆ ಮಾವನೇ (Brother-in-law) ಕೊಲೆ ಮಾಡಿದ ದುರ್ಘಟನೆ ನಡೆದಿತ್ತು. ಆದರೆ, ಕೊಲೆ ಮಾಡುವುದಕ್ಕೂ ಮುನ್ನ ಪೂರ್ಣ ಪ್ರಮಾಣದಲ್ಲಿ ಯೋಜನೆ ರೂಪಿಸಿಕೊಂಡು ಬಂದಿದ್ದ ಆರೋಪಿ ಕಾಲೇಜಿನ ಗೇಟಿನೊಳಗಡೆ ಪ್ರವೇಶ (College entry) ಮಾಡಲು ಬೇರೊಬ್ಬರನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಕಾಲೇಜು ಆವರಣದೊಳಗೆ ಪ್ರವೇಶ ಮಾಡಿ, ತರಗತಿ ಕೋಣೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಹೊರಗೆ ಕರೆದು ಮಾತನಾಡುತ್ತಾ, ಕುತ್ತಿಗೆ, ಹೊಟ್ಟೆ, ಎದೆ ಭಾಗಕ್ಕೆ ಹರಿತವಾದ ಚಾಕುವಿನಿಂದ 10ಕ್ಕೂ ಅಧಿಕ ಬಾರಿ ಚುಚ್ಚಿದ್ದಾನೆ.

Tap to resize

Latest Videos

ಬೇರೊಬ್ಬ ವಿದ್ಯಾರ್ಥಿಯ ಐಡಿ ಕಾರ್ಡ್ ಪಡೆದಿದ್ದ ಆರೋಪಿ:  ವಿದ್ಯಾರ್ಥಿನಿ ಲಯಸ್ಮಿತಾಳನ್ನು ಕೊಲೆ (Layasmita Murder) ಮಾಡಿದ ಆರೋಪಿ ಪವನ್ ಕಲ್ಯಾಣ್ ಗೆ (Accused Pavan Kalyan) ಪ್ರೆಸಿಡೆನ್ಸಿ ಕಾಲೇಜ್ ಇತರೆ ವಿದ್ಯಾರ್ಥಿಗಳು ಸಾಥ್‌ ಕೊಟ್ಟಿದ್ದಾರಾ ಎನ್ನುವ ಅನುಮಾನ ಕಾಡುತ್ತಿವೆ. ಇದಕ್ಕೆ ಕಾರಣ ಬೇರೆ ವಿದ್ಯಾರ್ಥಿಗಳ ಐಡಿ ಕಾರ್ಡ್ ಬಳಸಿ ಪವನ್ ಕಲ್ಯಾಣ್ ಕಾಲೇಜಿನೊಳಗೆ ಬಂದಿದ್ದನು. ಮಧ್ಯಾಹ್ನ 12:30 ರ ಸುಮಾರಿಗೆ ಲಂಚ ಬ್ರೇಕ್ ನಲ್ಲಿ ಪ್ರೆಸಿಡೆನ್ಸಿ ಯೂನಿವರ್ಸಿಟಿಗೆ ಆಗಮಿಸುವ ಮೊದಲು, ಪಾರ್ಕಿಂಗ್ ಗೇಟ್ ಬಳಿ ಬೇರೊಬ್ಬ ವಿದ್ಯಾರ್ಥಿ ಐಡಿ ಕಾರ್ಡ್ ಪಡೆದಿದ್ದಾನೆ. ನಂತರ ನೇರವಾಗಿ ಲಯಸ್ಮಿತಾಳ ಮೊದಲವರ್ಷ ಬಿ.ಇ. ತರಗತಿ ಕೋಣೆಯ ಬಳಿ ತೆರಳಿದ್ದಾನೆ. ತರಗತಿಯಲ್ಲಿದ್ದ ಲಯಸ್ಮಿತಾಳನ್ನ ಕಾರಿಡಾರ್ (Corridor) ಬಳಿ ಕರೆದಿರೋ ಆರೋಪಿ, ಲಯಸ್ಮಿತಾ ಬರ್ತಿದ್ದಂತೆ ಕತ್ತು ಎದೆ ಹೊಟ್ಟೆ ಸೇರೊ ಹತ್ತು ಕಡೆ ಚಾಕು (Stabbed) ಇರಿದಿದ್ದಾನೆ. 

Bengaluru Crime: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರೀತಿ ವಿಚಾರಕ್ಕೆ ಎಲ್ಲರೆದುರೇ ವಿದ್ಯಾರ್ಥಿನಿ ಮರ್ಡರ್‌

ಐಡಿ ಕಾರ್ಡ್‌ ಕೊಟ್ಟವರ ಪತ್ತೆಗೆ ಕಾರ್ಯಾಚರಣೆ:  ಇನ್ನು ಕಾಲೇಜಿನೊಳಗೆ ಆರೋಪಿ ಪವನ್ ಕಲ್ಯಾಣ್ ಬರುವುದಕ್ಕೆ ಐಡಿ ಕಾರ್ಡ್ ಕೊಟ್ಟವರು ಯಾರು ಅನ್ನೊದನ್ನ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾಲೇಜಿನ ಸಿಸಿಟಿವಿ (CCTV) ದೃಶ್ಯಾವಳಿಯಲ್ಲಿನ ಆರೋಪಿ ಚಲನವಲನ ಗಮನಿಸಲಾಗುತ್ತಿದೆ. ಜೊತೆಗೆ, ಸೆಕ್ಯೂರಿಟಿ ಗಾರ್ಡ್, ಕಾಲೇಜು ಆಡಳಿತ ಮಂಡಳಿಯ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮೃತಳ ತಾಯಿ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಮೃತ ದೇಹ ಹಸ್ತಾಂತರ ಸಿದ್ಧತೆ: ಇನ್ನು ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಯೂನಿವರ್ಸಿಟಿ ಯಲ್ಲಿ ವಿದ್ಯಾರ್ಥಿನಿ ಕೊಲೆಯಾದ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ತರಲಾಗಿತ್ತು. ನಂತರ ರಾಜಾನುಕುಂಟೆ ಪೊಲೀಸರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಡೆಯುತ್ತಿರುವ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇನ್ನು ಈ ಪರೀಕ್ಷೆ ಪೂರ್ಣಗೊಂಡಿದ್ದು, ಕೆಲವೇ ಗಂಟೆಯಲ್ಲಿ ಕುಟುಂಬಸ್ಥರಿಗೆ ಮೃತ ದೇಹ‌ ಹಸ್ತಾಂತರ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Bengaluru Crime: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ

ಹಿರಿಯ ಮಗಳನ್ನು ಕಳೆದುಕೊಂಡು ಕುಟುಂಬದಲ್ಲಿ ಆಕ್ರಂದನ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಟ್ಟಹಳ್ಳಿ ಗ್ರಾಮದ ನಿವಾಸಿ ಆಗಿದ್ದ ಲಯಸ್ಮಿತಾಳ ತಂದೆ ನಾಗರಾಜ್‌ ಕಳೆದ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಈಗ ಕೊಲೆಯಾಗಿರುವ ವಿದ್ಯಾರ್ಥಿನಿ  ಲಯಸ್ಮಿತಾ ಸೇರಿ ಅವರ ತಾಯಿಗೆ ಒಟ್ಟು ಮೂರು ಹೆಣ್ಣು ಮಕ್ಕಳಿದ್ದಾರೆ. ತಂದೆಯ ಕೊರತೆ ಕಾಡದಂತೆ ತಾಯಿ ರಾಜೇಶ್ವರಿ ಮಕ್ಕಳನ್ನು ಪೋಷಣೆ ಮಾಡಿ ಓದಿಸುತ್ತಿದ್ದಳು, ಹಿರಿಯ ಮಗಳಾಗಿದ್ದ ಲಯಸ್ಮಿತಾ ಮನೆಗೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿಂದ ಕೆಲವು ತಿಂಗಳ ಹಿಂದಷ್ಟೇ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿಸಿ ಹಾಸ್ಟೆಲ್ ನಲ್ಲಿ ಇರಿಸಿ ಓದಿಸುತ್ತಿದ್ದರು. ಆದರೆ, ಈಗ ಹಿರಿಯ ಮಗಳನ್ನು ಕಳೆದುಕೊಂಡಿರುವ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

click me!