Koppala: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಗೊಬ್ಬರ ವ್ಯಾಪಾರಿ ಆತ್ಮಹತ್ಯೆ

Published : Jan 02, 2023, 09:38 PM IST
Koppala: ಸಾಲಗಾರರ ಕಿರುಕುಳಕ್ಕೆ  ಬೇಸತ್ತು ಗೊಬ್ಬರ ವ್ಯಾಪಾರಿ ಆತ್ಮಹತ್ಯೆ

ಸಾರಾಂಶ

ಸಾಲಗಾರರು ಕಿರುಕುಳಕ್ಕೆ ಗೊಬ್ಬರ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆ  ನಡೆದಿದೆ.

ಗಂಗಾವತಿ (ಜ.2): ಸಾಲಗಾರರು ಕಿರುಕುಳಕ್ಕೆ ಗೊಬ್ಬರ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ  ನಡೆದಿದೆ. ಗೊಬ್ಬರ ಮತ್ತು ಔಷದ ವ್ಯಾಪಾರಿ ದಾರದುಂಡಿ ಮುರುಳಿಧರ (65) ಆತ್ಮಹತ್ಯೆ ಮಾಡಿಕೊಂಡ ವ್ಯಾಪಾರಿ. ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ  ತಮ್ಮ ಗೊಬ್ಬರದ ಅಂಗಡಿಯಲ್ಲಿ  ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣನಾಗಿದ್ದಾನೆ. ಇವರಿಗೆ 60ಲಕ್ಷ ರು ಹೆಚ್ಚು ಸಾಲ ಇದ್ದು ,ದಿನ ನಿತ್ಯ ಕಿರುಕುಳಕ್ಕೆ ನೊಂದು ಆತ್ಮಹತ್ಯಗೆ ಕಾರಣ ಎನ್ನಲಾಗಿದೆ. ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.
 
ಕಾರು ಡಿಕ್ಕಿ ವ್ಯಕ್ತಿ ಸಾವು
ಗಂಗಾವತಿ: ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಹೇಮಗುಡ್ಡದ ಬಳಿ ನಡೆದಿದೆ. ಹನುಮೇಶ (32) ಎನ್ನವ ಯುವಕ ಮೃತಪಟ್ಟಿದ್ದು, ಹೊಲದಿಂದ ಮನೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಹಿಂದಿನಿಂದ ಕಾರು ಡಿಕ್ಕಿ ಹೊಡಿದಿದೆ.ಇದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮಾನಸಯ್ಯ ಎನ್ನುವ ವ್ಯಕ್ತಿ ಗಾಯಗೊಂಡಿದ್ದಾರೆ.ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಸಾಂತ್ವಾನ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ದಿನ ದುಷ್ಕರ್ಮಿಗಳಿಂದ ಬೈಕ್‌, ಕಾರಿಗೆ ಬೆಂಕಿ
ಗಂಗಾವತಿ: ಹೊಸ ವರ್ಷದ ಸಂಭ್ರಮಾಚರಣೆಯ ದಿನದಂದು ಬೈಕ್‌ ಸೇರಿದಂತೆ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ನಗರದ 1ನೇ ವಾರ್ಡ್‌ ಪಂಪಾನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

Dharwad: ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಬ್ಯಾಂಕ್ ಗೆ ಕನ್ನ!

ಪಂಪಾನಗರ ಪ್ರದೇಶದ ಸನಿಹದಲ್ಲಿರುವ ಮನೆಗಳ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ ಮತ್ತು ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಬೈಕ್‌ ಸುಟ್ಟು ಕರಕಲಾಗಿದ್ದು, ಕಾರುಗಳು ಅಲ್ಪಮಟ್ಟಿಗೆ ಸುಟ್ಟಿವೆ. ಮದ್ಯಪಾನ ಮಾಡಿದ್ದ ಯುವಕರು ಈ ಕೃತ್ಯ ಎಸಗಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

BENGALURU CRIME: ಸೋದರ ಮಾವನಿಂದಲೇ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿನಿ ಕೊಲೆ

ಕೆಲವರು ತಮ್ಮ ಮನೆಯ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇದರಲ್ಲಿ ದುಷ್ಕೃತ್ಯದ ಬಗ್ಗೆ ಚಿತ್ರೀಕರಣಗೊಂಡಿದೆ. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ವಾರ್ಡ್‌ನ ನಾಗರಿಕರು ಒತ್ತಾಯಿಸಿದ್ದಾರೆ. ಕೆಲ ಕಡೆ ಯುವಕರು ಬಸ್‌ಗೆ ಕಲ್ಲು ತೂರಿದ್ದು, ಈಶಾನ್ಯ ಸಾರಿಗೆ ಬಸ್‌ ಜಖಂಗೊಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ