ತ್ವಿಶಾ ಆತ್ಮಹತ್ಯೆ ಮಾಡಿಕೊಂಡಿದ್ರೆ ಮೈಮೇಲೆ ಇಷ್ಟೊಂದು ಗಾಯ ಏಕೆ? ರಾಷ್ಟ್ರಪತಿ ಮೊರೆ ಹೋದ ಕುಟುಂಬ

Published : May 20, 2026, 10:40 AM IST
Twisha Sharma

ಸಾರಾಂಶ

ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹೊಸ ವಿಷ್ಯಗಳು ಬಹಿರಂಗಗೊಂಡಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ರಾಷ್ಟ್ರಪತಿ ಮೊರೆ ಹೋಗಿದ್ದಾರೆ. 

ಭೋಪಾಲ್ನಲ್ಲಿ ನಡೆದ ತ್ವಿಶಾ ಶರ್ಮಾ ಅನುಮಾನಾಸ್ಪದ ಸಾವಿನ ಪ್ರಕರಣ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ನ್ಯಾಯಯುತ ತನಿಖೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ತ್ವಿಶಾ ಕುಟುಂಬಸ್ಥರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ. ತ್ವಿಶಾ ಆತ್ಮಹತ್ಯೆ ಮಾಡಿಕೊಂಡಿದ್ರೆ ಅವರ ದೇಹದ ಮೇಲೆ ಗಾಯವಾಗಲು ಹೇಗೆ ಸಾಧ್ಯ ಎಂದು ಕುಟುಂಬ ಆರೋಪಿಸಿದೆ.

ತ್ವಿಶಾ ಶರ್ಮಾ ಸಾವಿನ ಹಿಂದೆ ಅನುಮಾನ

ಮೇ 12 ರಂದು ರಾತ್ರಿ 8 ಗಂಟೆ ಸುಮಾರಿಗೆ ತ್ವಿಶಾ ಸಾವನ್ನಪ್ಪಿದ್ದರು. ತ್ವಿಶಾ ಶವ, ನೇಣು ಬಿಗಿದ ಸ್ಥಿತಿಯಲ್ಲಿ ಅವರ ಗಂಡನ ಮನೆಯಲ್ಲಿ ಪತ್ತೆಯಾಗಿತ್ತು. ತ್ವಿಶಾ ಸಾವಿಗೆ ಸುಮಾರು ಒಂದು ವಾರದ ಮೊದಲು ಗರ್ಭಪಾತ ಮಾಡಿಸಿಕೊಂಡಿದ್ದರು ಎಂದು ಏಮ್ಸ್ ಭೋಪಾಲ್ ವರದಿ ಮಾಡಿದೆ. ಮರಣೋತ್ತರ ಪರೀಕ್ಷೆ ನಂತ್ರ ಆಘಾತಕಾರಿ ವಿಷ್ಯಗಳು ಹೊರ ಬಂದಿವೆ. ಏಮ್ಸ್ ಭೋಪಾಲ್ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ತ್ವಿಶಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಅವರು ಸತ್ತ ಮೇಲೆ ನೇಣು ಬಿಗಿಯಲಾಗಿಲ್ಲ. ನೇಣು ಬಿಗಿದ ಮೇಲೆ ಅವರ ಉಸಿರಾಟ ನಿಂತಿದೆ. ಕುತ್ತಿಗೆಯ ಮೇಲೆ ಮೇಲ್ಮುಖವಾದ ಲಿಗೇಚರ್ ಗುರುತು ಕಂಡುಬಂದಿದೆ. ಇದು ಸಾಮಾನ್ಯವಾಗಿ ನೇಣು ಬಿಗಿದ ಪ್ರಕರಣಗಳಲ್ಲಿ ಕಂಡುಬರುತ್ತದೆ.

ಲೀಸ್ ಹಣ ನಮಗೆ ಕೊಡಿ, ಪ್ರತಿ ತಿಂಗಳೂ ಬಾಡಿಗೆ ನಾವು ಕಟ್ಟುತ್ತೇವೆ ಎಂದು 200 ಕ್ಕೂ ಹೆಚ್ಚು ಜನರಿಗೆ ಕಂಪನಿ ಮೋಸ!

ಕುತ್ತಿಗೆಯ ಆಂತರಿಕ ಸ್ನಾಯುಗಳಲ್ಲಿ ಒತ್ತಡ ಮತ್ತು ರಕ್ತಸ್ರಾವದ ಲಕ್ಷಣಗಳು ಕಂಡುಬಂದಿವೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಹೈಯಾಯ್ಡ್ ಮೂಳೆ ಮತ್ತು ಕುತ್ತಿಗೆಯ ಮೂಳೆಗಳು ಹಾಗೆಯೇ ಇವೆ. ವೈದ್ಯರ ಪ್ರಕಾರ, ದೇಹದ ಮೇಲೆ ಯಾವುದೇ ದೊಡ್ಡ ಮಾರಣಾಂತಿಕ ಗಾಯ ಕಂಡು ಬಂದಿಲ್ಲ. ಆದ್ರೆ ಕೈಗಳು ಸೇರಿದಂತೆ ದೇಹದ ಕೆಲವು ಭಾಗಗಳಲ್ಲಿ ಸಣ್ಣ ಗಾಯಗಳು ಮತ್ತು ಗೀರುಗಳು ಕಂಡುಬಂದಿವೆ. ಈ ಗಾಯಗಳಿಗೆ ಕಾರಣವನ್ನು ಪೊಲೀಸರು ಪತ್ತೆ ಮಾಡ್ತಿದ್ದಾರೆ. ದೇಹದ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ ಅಥವಾ ಆಯುಧದಿಂದ ಗಾಯಗಳ ಯಾವುದೇ ಚಿಹ್ನೆಗಳು ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

FSL ಮತ್ತು DNA ಪರೀಕ್ಷೆ

ಪ್ರಕರಣದ ಸತ್ಯವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು, ವೈದ್ಯರು ಒಳಾಂಗಗಳು, ರಕ್ತ ಮತ್ತು ಇತರ ಮಾದರಿಗಳನ್ನು ಸಂರಕ್ಷಿಸಿದ್ದಾರೆ. ಇವುಗಳನ್ನು FSL ಪರೀಕ್ಷೆಗೆ ಕಳುಹಿಸಲಾಗಿದೆ. ತ್ವಿಶಾ ಸಾವಿಗೆ ಮುನ್ನ ಮಾದಕ ದ್ರವ್ಯ ಅಥವಾ ವಿಷಕಾರಿ ವಸ್ತುಗಳನ್ನು ಸೇವಿಸಿದ್ದಾರೆಯೇ ಎಂಬುದನ್ನು ತನಿಖೆಯಿಂದ ನಿರ್ಧರಿಸಲಾಗುತ್ತದೆ. ಇದಲ್ಲದೆ, ಡಿಎನ್ಎ ಪರೀಕ್ಷೆಗಾಗಿ ಮಾದರಿಗಳನ್ನು ಸಂರಕ್ಷಿಸಲಾಗಿದೆ.

ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ

ಒಂದ್ಕಡೆ ತನಿಖೆ ನಡೆಯುತ್ತಿದ್ದರೆ ಇನ್ನೊಂದು ಕಡೆ ತ್ವಿಶಾ ಕುಟುಂಬಸ್ಥರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅವರ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಸಾವು ಮತ್ತು ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾರೆ. ತ್ವಿಶಾ ತಂದೆ ನವ ನಿಧಿ ಶರ್ಮಾ ಇಮೇಲ್ ಮೂಲಕ ಜಬಲ್ಪುರದ ವಕೀಲ ವಿವೇಕ್ ತಿವಾರಿ ಅವರನ್ನು ಸಂಪರ್ಕಿಸಿ ತಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ತಿವಾರಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ನ್ಯಾಯಕ್ಕೆ ಮನವಿ ಮಾಡಿದ್ದಾರೆ. ಕುಟುಂಬವು ಬಹಿರಂಗಪಡಿಸಿದ ಸಂಗತಿಗಳು ಅತ್ಯಂತ ಗಂಭೀರ, ಸೂಕ್ಷ್ಮ ಮತ್ತು ಕಾನೂನುಬದ್ಧವಾಗಿ ಮಹತ್ವದ್ದಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅತ್ತೆಗೆ ಜಾಮೀನು ನೀಡಿದ ನಂತರ ಕುಟುಂಬದ ಕಳವಳ

ತ್ವಿಶಾ ಅವರ ಅತ್ತೆ ಗಿರಿಬಾಲಾ ಸಿಂಗ್ ನಿವೃತ್ತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿದ್ದು, ಪ್ರಸ್ತುತ ಭೋಪಾಲ್ ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಪ್ರಭಾವ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಕುಟುಂಬ ಭಯಪಡ್ತಿದೆ. ಗಿರಿಬಾಲಾ ಸಿಂಗ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ ನಂತರ ಮೃತರ ಪೋಷಕರ ಕಳವಳ ಹೆಚ್ಚಾಗಿದೆ . ಮೃತರ ತಂದೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ, ಸಾಕ್ಷ್ಯಗಳನ್ನು ತಿರುಚುವ ಮತ್ತು ಪ್ರಮುಖ ವಿಧಿವಿಜ್ಞಾನ ಸಾಮಗ್ರಿಗಳನ್ನು ನಾಶಪಡಿಸುವ ಭಯವನ್ನು ವ್ಯಕ್ತಪಡಿಸಿದ್ದಾರೆ. ಸಾಂವಿಧಾನಿಕ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ತಕ್ಷಣ ಸಂರಕ್ಷಿಸುವಂತೆಯೂ ಇದು ಒತ್ತಾಯಿಸಲಾಗ್ತಿದೆ. ಈ ಮಧ್ಯೆ ಭೋಪಾಲ್ ನ್ಯಾಯಾಲಯವು ಪರಾರಿಯಾಗಿರುವ ಪತಿ ಸಮರ್ಥ್ ಸಿಂಗ್ ಅವರ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಪೊಲೀಸರು ಅವರ ಹುಡುಕಾಟವನ್ನು ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೀಸ್ ಹಣ ನಮಗೆ ಕೊಡಿ, ಪ್ರತಿ ತಿಂಗಳೂ ಬಾಡಿಗೆ ನಾವು ಕಟ್ಟುತ್ತೇವೆ ಎಂದು 200 ಕ್ಕೂ ಹೆಚ್ಚು ಜನರಿಗೆ ಕಂಪನಿ ಮೋಸ!
ಕಳ್ಳನ ಹಿಡಿದುಕೊಟ್ರೂ, ಪೊಲೀಸರ ಹಿಂದೇಟು- ಇದೇ ನೋಡಿ ನಮ್​ ಪೊಲೀಸ್ ವ್ಯವಸ್ಥೆ: Bigg Boss ಧ್ರುವಂತ್‌ ಗರಂ