
ಗಂಗಾವತಿ (ಮೇ.17): ತಾಲೂಕಿನ ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಕ್ಷುಲಕ ಕಾರಣಕ್ಕೆ 8 ಜನರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೊಪ್ಪಳದ ಮಹಿಳಾ ಪೇದೆ ಮೇಲೆ ಹಲ್ಲೆ ನಡೆದಿದ್ದು, ಅವರ ಚಿನ್ನದ ಸರ ನಾಪತ್ತೆಯಾಗಿದೆ.
ನಡೆದಿದ್ದೇನು: ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದಿಂದ ರೆಸಾರ್ಟ್‌ಗೆ ಬಂದಿದ್ದ ಮಹಿಳೆಯರು ಸೇರಿದಂತೆ 8 ಜನರ ಗುಂಪು ಈಜುಗೊಳದಲ್ಲಿ ಇಳಿದಿದ್ದಾರೆ. ಇದೇ ಸಮಯದಲ್ಲಿ ಗಂಗಾವತಿಯಿಂದ ಬಂದಿದ್ದ ಕೆಲ ಯುವಕರು ನೀರಿನ ಬಾಟಲು ಎಸೆದಾಡುವ ಪ್ರಸಂಗ ನಡೆದು ವಿಕೋಪಕ್ಕೆ ಹೋಗಿದೆ. ನಂತರ ಅಂಜನಾದ್ರಿಯ ಬಳಿಯಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಸಲಾಯಿಸಿದ್ದಾರೆ. ಇದರಲ್ಲಿ ಪೇದೆ ಮೇಲೆ ಹಲ್ಲೆ ನಡೆದಿದ್ದು, ಚಿನ್ನದ ಸರ ಕಿತ್ತುಕೊಂಡ್ಡಿದ್ದಾರೆ. ಸದ್ಯ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭಾರಿ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ, ಗ್ರಾಮೀಣ ಪೋಲಿಸ್ ಠಾಣೆ ಸಿಪಿಐ ರಂಗಪ್ಪ ದೊಡ್ಮನಿ,ಗಂಗಾವತಿ ನಗರ ಪೋಲಿಸ್ ಠಾಣೆ ಪಿಐ ಪ್ರಕಾಶ ಯಾತನೂರ ನಗರದ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ.
ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ವಿಚಾರಿಸಲು ಜನರು ಬರುತ್ತಿದ್ದಂತೆಯೇ ಗುಂಪುಗಳನ್ನು ಪೋಲಿಸರು ಚದುರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ