ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಭೂಪಿಂದರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ (ಡಿ.6): ಮರ ಕಡಿಯುವ ವಿಚಾರದಲ್ಲಿ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟನೊಬ್ಬ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೂರ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿರುತೆರೆ ನಟ ಭೂಪಿಂದರ್ ಸಿಂಗ್ ಹಾಗೂ ಆತನ ಸಹಾಯಕರನ್ನು ಬಂಧಿಸಲಾಗಿದೆ. ಭೂಪಿಂದರ್ ಸಿಂಗ್ ಆಕಸ್ಮಿಕವಾಗಿ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದು, ಒಬ್ಬ ಯುವಕ ಸಾವನ್ನಪ್ಪಿದ್ದಾನೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತನ ಚಿಕ್ಕಪ್ಪನ ದೂರಿನ ಮೇರೆಗೆ ಪೊಲೀಸರು ಕಿರುತೆರೆ ನಟ ಭೂಪಿಂದರ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಆತನ ಇತರ ಇಬ್ಬರು ಸಹಾಯಕರಿಗಾಗಿ ಶೋಧ ನಡೆಯುತ್ತಿದೆ.
ವರದಿಗಳ ಪ್ರಕಾರ ಕುಂಖೇಡಾ ಖಾದ್ರಿ ಮೂಲದವರಾದ ಭೂಪಿಂದರ್ ಸಿಂಗ್ ಅವರ ಫಾರ್ಮ್‌ಹೌಸ್ ಬಿಜ್ನೂರ್‌ನಲ್ಲಿ ಗುರುದಪ್ ಸಿಂಗ್ ಅವರ ನಿವಾಸದ ಪಕ್ಕದಲ್ಲಿಯೇ ಇತ್ತು. ಎರಡೂ ಆಸ್ತಿನ ಮಧ್ಯದಲ್ಲಿ ಇರುವ ನೀಲಗಿರಿ ಮರದ ವಿಚಾರವಾಗಿ ಭಾನುವಾರ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತಿಗೆ ಮಾತು ಬೆಳೆದು ವಿವಾದ ತೀವ್ರ ರೂಪಕ್ಕೆ ಹೋದಾಗ ನಟ ಭೂಪಿಂದರ್ ಸಿಂಗ್ ತನ್ನ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ಈ ವೇಳೆ ಗುರುದೀಪ್ ಸಿಂಗ್, ಅವರ ಪತ್ನಿ ಮೀರಾಬಾಯಿ ಹಾಗೂ ಅವರ ಮಗ ಅಮ್ರಿಕ್ ಅಕಾ ಭೂಟಾ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರೆ, ಗುರುದೀಪ್ ಸಿಂಗ್ ಅವರ 22 ವರ್ಷದ ಮಗ ಗೋವಿಂದ್ ಸಿಂಗ್ ಸ್ಥಳದಲ್ಲೇ ಸಾವು ಕಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಿರುತೆರೆ ನಟ ಭೂಪಿಂದರ್ ಸಿಂಗ್ ಬಂಧನ: ಘಟನೆಯ ನಂತರ ಡಿಐಜಿ ಮುನಿರಾಜ್ ಸ್ಥಳಕ್ಕೆ ತಲುಪಿದರು ಮತ್ತು ಸಿಂಗ್ ಮತ್ತು ಅವರ ಮನೆಯ ಸಹಾಯಕ ಜ್ಞಾನ್ ಸಿಂಗ್, ಗುರ್ಜರ್ ಸಿಂಗ್ ಮತ್ತು ಜೀವನ್ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅದೇ ಸಂಜೆಯ ನಂತರ ಜ್ಞಾನ್ ಸಿಂಗ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಜೀವನ್ ಸಿಂಗ್ ಮತ್ತು ಗುರ್ಜರ್ ಸಿಂಗ್ ಪರಾರಿಯಾಗಿದ್ದಾರೆ.
ಪ್ರೀತಿಯಲ್ಲಿ ಬಿದ್ದ ಮೇಘಾ ಶೆಟ್ಟಿ; ಡಿಸೆಂಬರ್ 8 ರಿವೀಲ್ ಆಗಲಿದೆ ಗುಡ್ ನ್ಯೂಸ್!
ಭೂಪಿಂದರ್ ಸಿಂಗ್ ತಮ್ಮ ವೃತ್ತಿಜೀವನವನ್ನು ಟಿವಿ ಧಾರಾವಾಹಿ ಜೈ ಮಹಾಭಾರತದೊಂದಿಗೆ ಪ್ರಾರಂಭಿಸಿದರು. ಅವರು ಏಕ್ ಹಸೀನಾ ಥಿ, ತೇರೆ ಶೆಹರ್ ಮೇ, ಮಧುಬಾಲಾ-ಏಕ್ ಇಷ್ಕ್ ಏಕ್ ಜುನೂನ್ ಮತ್ತು ಇತರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಟಿವಿ ಧಾರಾವಾಹಿಗಳ ಜೊತೆಗೆ, ಅವರು ಬ್ಲಫ್‌ಮಾಸ್ಟರ್, ಯುವರಾಜ್, ಸೋಚ್ ಎಲ್ ಮತ್ತು ಇತರ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಯುಟ್ಯೂಬರ್ ಚಂದನ್ ಕೈ ಹಿಡಿದ ಕಿರುತೆರೆ ನಟಿ ನವ್ಯಾ ನಾರಾಯಣ್; ಫೋಟೋ ವೈರಲ್