ತುಮಕೂರು: ವೇಶ್ಯಾವಾಟಿಕೆಗೆ ಲಾಡ್ಜ್‌ನಲ್ಲೇ ಸುರಂಗ..!

By Kannadaprabha News  |  First Published Sep 22, 2021, 9:43 AM IST

*  ಪೊಲೀಸ್ ದಾಳಿ ವೇಳೆ ಅಡಗಲು ಗೋಡೆಯಲ್ಲಿ ಸುರಂಗ ಕೋಣೆ
*  ರಾಶಿ ರಾಶಿ ಕಾಂಡೋಮ್ ಪತ್ತೆಯಾಗಿದ್ದ ತುಮಕೂರಿನ ಹೆದ್ದಾರಿ ಪಕ್ಕದ ಲಾಡ್ಜ್‌ನಲ್ಲಿ ದಂಧೆ
*  ಪೊಲೀಸರು, ಒಡನಾಡಿ ಸಂಸ್ಥೆ ನಡೆಸಿದ ದಾಳಿ ವೇಳೆ ವೇಶ್ಯಾವಾಟಿಕೆ ದಂಧೆ ಬಯಲು


ತುಮಕೂರು(ಸೆ.22): ಭಾರೀ ಚರ್ಚೆಗೆ ಕಾರಣವಾಗಿದ್ದ ತುಮಕೂರಿನ(Tumakuru) ಹೆದ್ದಾರಿ ರಸ್ತೆಯಲ್ಲಿ ಕಿಲೋಮೀಟರ್‌ ಗಟ್ಟಲೆ ರಾಶಿ ರಾಶಿ ಕಾಂಡೋಮ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಘಟನೆಗೆ ಇದೀಗ ಹೊಸ ತಿರುವು ಸಿಕ್ಕಿದೆ.

ಕಾಂಡೋಮ್‌ಗಳು ಪತ್ತೆಯಾದ ಸ್ಥಳದ ಸಮೀಪದ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ(Prostitute) ನಡೆಯುತ್ತಿದ್ದ ವಿಚಾರ ಇದೀಗ ಬಯಲಾಗಿದೆ. ಜತೆಗೆ, ಪೊಲೀಸರ ದಾಳಿ ವೇಳೆ ಆರೋಪಿಗಳು ಬಚ್ಚಿಟ್ಟುಕೊಳ್ಳಲು ಹೋಟೆಲ್ ರೂಂನಲ್ಲೇ ಗುಪ್ತ ಸುರಂಗ ಕೋಣೆಯನ್ನೂ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.

Tap to resize

Latest Videos

undefined

ಫುಲ್ ನೈಟ್ 5 ಸಾವಿರ... ತಾಸಿಗೆ ಎರಡು ಸಾವಿರ! ಬೆಂಗಳೂರಿನ ನಶೆ ರಾಣಿಯರು

ಮೈಸೂರಿನ ಒಡನಾಡಿ ಸಂಸ್ಥೆ, ಪೊಲೀಸರ(Police) ನೇತೃತ್ವದಲ್ಲಿ ತುಮಕೂರಿನ ರಿಂಗ್ ರಸ್ತೆಯ ಲಾಡ್ಜ್‌ವೊಂದರ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಪಿಂಪ್‌ಗಳನ್ನು ಬಂಧಿಸಿ, ಐದು ಮಂದಿ ಕೋಲ್ಕತಾ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ. ಮೂರು ವಾರಗಳ ಹಿಂದೆ ಲಾಡ್ಜ್‌ ಸನಿಹದಲ್ಲೇ ಇದ್ದ ಹೆದ್ದಾರಿಯಲ್ಲಿ ಕಿ.ಮೀ. ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿತ್ತು. ಈ ಸಂಬಂಧ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾಂಡೋಮ್‌ಗಳು ಪತ್ತೆಯಾದ ಜಾಗದಲ್ಲೇ ಇದ್ದ ಲಾಡ್ಜ್‌ ಬಳಿ ಹಲವು ವಾಹನಗಳನ್ನು ಪಾರ್ಕ್ ಮಾಡುತ್ತಿದ್ದ ವಿಷಯ ಪೊಲೀಸರ ಗಮನಕ್ಕೂ ಬಂದಿತ್ತು. ಹೀಗಾಗಿ ಕೆಲ ದಿನಗಳಿಂದ ಲಾಡ್ಜ್‌ ಮೇಲೆ ಕಣ್ಣಿಡಲಾಗಿತ್ತು. ಈ ಮಧ್ಯೆ, ಮೈಸೂರಿನ ಒಡನಾಡಿ ಸಂಸ್ಥೆ ಸ್ಟ್ಯಾನಿ ಪರಶುರಾಮ್ ಅವರನ್ನೊಳಗೊಂಡ ತಂಡ ತುಮಕೂರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿತ್ತು. 

ಬೆಲ್ ಒತ್ತಿದಾಗ ಅಡಗಿ ಕೂರುತ್ತಿದ್ದರು: 

ವೇಶ್ಯಾವಾಟಿಕೆ ನಡೆಯುತ್ತಿದ್ದ ಕೋಣೆಯಲ್ಲಿ ಸುರಂಗ ಕೋಣೆಯೊಂದು ಪತ್ತೆಯಾಗಿದ್ದು, ಪೊಲೀಸರು ದಾಳಿ ನಡೆಸಿದಾಗ ಸಿಬ್ಬಂದಿಯೊಬ್ಬರು ಬೆಲ್ ಒತ್ತುತ್ತಾರೆ. ಆಗ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ತಕ್ಷಣ ಕೋಣೆಯಲ್ಲಿರುವ ಡ್ರೆಸ್ಸಿಂಗ್ ಟೇಬಲ್ ಕೆಳಗೆ ನಿರ್ಮಿಸಲಾಗಿರುವ ರಹಸ್ಯ ಸುರಂಗ ಕೋಣೆಯಲ್ಲಿ ಅಡಗಿಕೊಳ್ಳುತ್ತಿದ್ದರು. 
 

click me!