ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು : ಇಬ್ಬರ ಸಾವು, ಐವರಿಗೆ ಗಂಭೀರ

Published : Jun 14, 2023, 11:53 AM IST
ಸ್ನೇಹಿತನ ಮದುವೆಗೆ ಹೋಗಿ ಬರ್ತಿದ್ದವರು ಮಸಣ ಸೇರಿದರು : ಇಬ್ಬರ ಸಾವು, ಐವರಿಗೆ ಗಂಭೀರ

ಸಾರಾಂಶ

ದಾಬಸ್‌ಪೇಟೆಯಲ್ಲಿ ಸ್ನೇಹಿತನ ಮದುವೆಗೆ ಹೋಗಿ ಕಾರಿನಲ್ಲಿ ವಾಪಸ್‌ ಬರುತ್ತಿದ್ದ 7 ಜನ ಸ್ನೇಹಿತರಿದ್ದ ಕಾರು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ.

ತುಮಕೂರು (ಜೂ.14): ಮದುವೆ ಸಮಾರಂಭಗಳಿಗೆ ಸ್ನೇಹಿತರು ಒಟ್ಟಾಗಿ ಹೋಗುವುದು ಸರ್ವೇಸಾಮಾನ್ಯ. ಹೀಗೆ ದಾಬಸ್ ಪೇಟೆಯಲ್ಲಿದ್ದ ಸ್ನೇಹಿತನ ಮದುವೆಗೆ ಹೋಗಿದ್ದ 7 ಮಂದಿ ಸ್ನೇಹಿತರು ಮದುವೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್‌ ಬರುವಾಗ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.

ಲಾರಿ ಹಾಗೂ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಇಬ್ಬರು ಸ್ಥಳದಲ್ಲೇ‌ ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಗ್ರಹಾರದ ಬಳಿ ನಡೆದಿದೆ. ತಡ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಘಟನೆ ನಡೆದಿದೆ. ಸ್ನೇಹಿತನ ಮದುವೆಗೆ ತೆರಳಿ ಕೊರಟಗೆರೆ ಹಾಗೂ ಕೊಡಗೇನಹಳ್ಳಿಗೆ ವಾಪಸ್ ಬರುತಿದ್ದ ಯುವಕರ ತಂಡವು ರಸ್ತೆಯ ಮಧ್ಯಯೇ ಅಪಘಾತವಾಗಿ ಮಸಣವನ್ನು ಸೇರಿದ್ದಾರೆ. ಈ ಕಾರಿನಲ್ಲಿ ಒಟ್ಟು 7 ಮಂದಿ ಇದ್ದರು. ಗಾಯಾಳುಗಳನ್ನು ಸ್ಥಳೀಯ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮದುವೆಯಾಗಿ 22 ದಿನಕ್ಕೆ ದುರಂತ ಅಂತ್ಯ, ಬೈಕ್‌ನಲ್ಲಿ ಜಾಲಿರೈಡ್‌ ಹೊರಟಿದ್ದ ನವಜೋಡಿಯ ದಾರುಣ ಸಾವು!

ಆಂಧ್ರದಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ:  ಮೃತ ಯುವಕರನ್ನು ದಾವಣೆಗೆರೆ ಮೂಲದ ಶಿವು ನಾಯಕ್( 32),  ಕೊಡಿಗೇನಹಳ್ಳಿಯ ಪರಮೇಶ್  ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು 7 ಜನರು ಇದ್ದರು. ಐವರಿಗೆ ಗಾಯ ನಿಮಾನ್ಸ್ ಗೆ ದಾಖಲು ಮಾಡಲಾಗಿದೆ. ದಾಬಸ್ ಪೇಟೆಯಲ್ಲಿ ಮದುವೆ ಮುಗಿಸಿ ತುಮಕೂರು ಮೂಲಕ ಕೊಡಿಗೇನಹಳ್ಳಿ ಕಡೆ ಹೋಗುತ್ತಿದ್ದರು. ಆಂಧ್ರದಿಂದ ತುಮಕೂರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಮೃತರು ಹಾಗೂ ಗಾಯಾಳುಗಳು ಎಲ್ಲರೂ ಸ್ನೇಹಿತರು ಆಗಿದ್ದರು. ಘಟನೆ ಕುರಿತಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

24 ದಿನದ ನವ ವಿವಾಹಿತ ಜೋಡಿ ದುರ್ಮರಣ: ವಿಜಯಪುರ (ಜೂ.14): ಇತ್ತೀಚೆಗೆ ತಾನೆ ಮದುವೆಯಾಗಿದ್ದ ಜೋಡಿಗೆ ಇನ್ನೂ ಹಸಿಮೈ ಕೂಡ ಆರಿರಲಿಲ್ಲ. ನೂರೆಂಟು ಕನಸುಗಳನ್ನು ಕಟ್ಟಿಕೊಂಡು ಅದ್ಧೂರಿಯಾಗಿ ವಿವಾವಾಗಿದ್ದ ಜೋಡಿ ತಿಂಗಳು ಪೂರೈಸುವ ಮೊದಲೇ ಭೀಕರ ಬೈಕ್‌ ಅಪಘಾತದಲ್ಲಿ ಜೊತೆಯಾಗಿಯೇ ಇಹಲೋಕವನ್ನು ತ್ಯಜಿಸಿದ್ದಾರೆ. ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ನವವಿವಾಹಿತ ಜೋಡಿಯೊಂದು ರಸ್ತೆಯಲ್ಲಿಯೇ ಅನಾಥವಾಗಿ ಸಾವನ್ನಪ್ಪಿದ್ದಾರೆ.  ಅಪಘಾತದಲ್ಲಿ ನವ ವಿವಾಹಿತ ಗಂಡ ಹೆಂಡತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮದುವೆಯಾದ 24 ದಿನಗಳಲ್ಲೆ ನವಜೋಡಿ ದುರ್ಮರಣ ಕಂಡಿದ್ದಾರೆ. ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಘಟನೆ ನಡೆದಿದೆ. ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. 

ಬೆಂಗಳೂರು: ಹೆಂಡತಿಯನ್ನ ಮನೆಗೆ ಕಳಿಸದ ಅತ್ತೆಗೆ ಚಾಕುವಿನಿಂದ ಇರಿದ ಅಳಿಯ..!

ಹುಟ್ಟುಹಬ್ಬಕ್ಕೆ ಹೋಗಿ ವಾಪಸ್‌ ಬರುವಾಗ ಘಟನೆ: ಮೃತರನ್ನು ಹೊನಮಲ್ಲ ತೇರದಾಳ (31), ಅವರ ಪತ್ನಿ ಗಾಯತ್ರಿ (24) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಮೃತ ಯುವಕ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಕಳೆದ ಮೇ 22 ರಂದು ಹೊನಮಲ್ಲ ಹಾಗೂ ಗಾಯತ್ರಿ ವಿವಾಹವಾಗಿತ್ತು. ರಾತ್ರಿ ವೇಳೆ ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ನಡೆದ ದುರ್ಘಟನೆ ಸಂಭವಿಸಿದೆ. ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಜೋಡಿ ನೂರೆಂಟು ಕನಸು ಕಂಡಿದ್ದರು. ಆದರೆ, ಮದುವೆಯಾಗಿ ಒಂದು ತಿಂಗಳು ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಿಯೇ ಇಬ್ಬರೂ ದುರಂತ ಸಾವಿಗೀಡಾಗಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೊಂದೆಡೆ, ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?