ರೈತನ ಜೀವ ಬಲಿಪಡೆದ ಆನ್ ಲೈನ್ ಕ್ಲಾಸ್/ ಮಗಳಿಗೆ ಸ್ಮಾರ್ಟ್ ಪೋನ್ ತಂದು ಕೊಡಲಾಗದ ತಂದೆ/ ತಂದೆ ಮತ್ತು ಮಗಳ ನಡುವೆ ವಾಗ್ವಾದ / ಆತ್ಮಹತ್ಯೆಗೆ ಶರಣಾದ ರೈತ
ತ್ರಿಪುರಾ(ಜು. 03) ಕೊರೋನಾ ಲಾಕ್ ಡೌನ್ ಕಾರಣಕ್ಕೆ ಎಲ್ಲ ಕಡೆ ಆನ್ ಲೈನ್ ಕ್ಲಾಸ್ ಶಿಕ್ಷಣ ಶುರುವಾಗಿದೆ. ನಾವೇನೋ ಸುಲಭವಾಗಿ ಮೊಬೈಲ್ ನಲ್ಲಿ ಕಲಿಯಬಹುದು ಎಂದು ಹೇಳಿಬಿಡುತ್ತೇವೆ ಆದರೆ ವಾಸ್ತವ ಬೇರೆನೇ ಇದೆ.
ಮಗಳ ಆನ್ ಲೈನ್ ಕ್ಲಾಸ್ ಗೆ ಮೊಬೈಲ್ ಕೊಳ್ಳಲು ಸಾಧ್ಯವಾಗದ್ದಕ್ಕೆ 50 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ನೇ ತರಗತಿ ಓದುತ್ತಿದ್ದ ಮಗಳು ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ತೆಗೆಸಿಕೊಡುವಂತೆ ಕೇಳಿದ್ದಾಳೆ. ಈ ವಿಚಾರಕ್ಕೆ ತಂದೆ ಮತ್ತು ಮಗಳ ನಡುವೆ ವಾಗ್ವಾದವೂ ನಡೆದಿದೆ.
ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್; ತಮ್ಮ ಆತ್ಮಹತ್ಯೆ
ಮಗಳ ಒತ್ತಾಯಕ್ಕೆ ಮಣಿದ ತಂದೆ ಸಾಮಾನ್ಯ ಪೋನ್ ತಂದುಕೊಟ್ಟಿದ್ದಾರೆ. ಸ್ಮಾರ್ಟ್ ಪೋನ್ ಅಲ್ಲದ ಕಾರಣ ಮಗಳು ಸಿಟ್ಟಿನಿಂದ ಅದನ್ನು ಎಸೆದಿದ್ದಾಳೆ. ಇದಾದ ಮೇಲೆ ತಂದೆ ಸಿಟ್ಟಿನಿಂದ ತಮ್ಮ ಕೋಣೆಗೆ ಹೋಗಿದ್ದಾರೆ. ಮರಿದಿನ ಶವವಾಗಿ ಪತ್ತೆಯಾಗಿದ್ದಾರೆ.
ನಾವು ಅಕ್ಕಪಕ್ಕದವರನ್ನು ವಿಚಾರಿಸಿದ್ದು ಮಗಳಿಗೆ ಸ್ಮಾರ್ಟ್ ಪೋನ್ ತಂದುಕೊಡಲು ಸಾಧ್ಯವಾಗದಕ್ಕೆ ವಾಗ್ವಾದ ನಡೆದಿದ್ದು ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.