
ನ್ಯೂಯಾರ್ಕ್(ಜು. 02) ಗೆಳೆಯನ ಕಾರಣಕ್ಕೆ ಗೆಳತಿಯೂ ಜೈಲು ಪಾಲಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಎಂದು ಹೆಸರು ಪಡೆದಿದ್ದ ಗಿಸ್ಲಾನೆ ಮಾಕ್ಸ್ ವೆಲ್ ಬಂಧನವಾಗಿದೆ.
ವೇಶ್ಯಾವಾಟಿಕೆಗೆ ಹೆಣ್ಣು ಮಕ್ಕಳುನ್ನು ದೂಡುತ್ತಿದ್ದಾನೆ ಎಂಬ ಆರೋಪ ಹೊತ್ತಿರುವ ಝೆಪ್ರಿ ಎಸ್ಟಿನ್ ಗೆಳತಿ ಈ ಮಾಕ್ಸ್ ವೆಲ್. 14 ವರ್ಷದ ಬಾಲಕಿ ಸೇರಿ ಕನಿಷ್ಠ ಮೂರು ಜನರನ್ನು ವೇಶ್ಯಾವಾಟಿಕೆಗೆ ದೂಡಿದ ಆರೋಪ ಮಾಕ್ಸ್ ವೆಲ್ ಮೇಲೆ ಬಂದಿದೆ.
ಹೆಣ್ಣು ಮಕ್ಕಳನ್ನು ಇಬ್ಬರು ಸೇರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ವಿಶ್ವದ ಎಲ್ಲ ಕಡೆ ಪ್ರವಾಸ ಮಾಡುತ್ತ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಸಾಗಾಟ ಮಾಡುತ್ತಿದ್ದರು ಎಂಬ ಆರೋಪವೂ ಇವರ ಮೇಲಿದೆ.
ಒಂದು ಕಾಲದ ಬಾರ್ ಡ್ಯಾನ್ಸರ್, ಇಂದು ಬಾಲಿವುಡ್‌ನ ದೊಡ್ಡ ರೈಟರ್
ಹೆಣ್ಣು ಮಕ್ಕಳ ಸಾಗಾಟ ವಿಚಾರಣೆ ಎದುರಿಸುತ್ತಿದ್ದ 66 ವರ್ಷದ ಝೆಪ್ರಿ ಎಸ್ಟಿನ್ ಕಳೆದ ಬೇಸಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ನ್ಯೂಯಾರ್ಕ್ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ದೊಡ್ಡ ಸುದ್ದಿಯಾಗಿತ್ತು.
ಮಾಕ್ಸ್ ವೆಲ್ ಮತ್ತು ಝೆಪ್ರಿ ಎಸ್ಟಿನ್ ಅನೇಕ ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಮಸಾಜ್ ಪಾರ್ಲರ್ ಉದ್ಯಮ ನಡೆಸುತ್ತಿದ್ದೇನೆ ಎಂದು ನಂಬಿಸುತ್ತಿದ್ದ ಝೆಪ್ರಿ ಎಸ್ಟಿನ್ ಹುಡುಗಿಯರನ್ನು ಕರೆದು ತಂದು ಅವರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ. ಅನೇಕ ಮಹಿಳೆಯರು ಝೆಪ್ರಿ ಎಸ್ಟಿನ್ ಸಹಾಯ ಮಾಡುತ್ತಿದ್ದರು. ಝೆಪ್ರಿ ಎಸ್ಟಿನ್ ಈ ಸಂಸ್ಥೆಯ ಮುಖ್ಯಸ್ಥ ಎಂದು ಆತನ ಬಳಿ ತಂದು ಬಿಡುತ್ತಿದ್ದರು .
ಝೆಪ್ರಿ ಎಸ್ಟಿನ್ ಏನು ಕಡಿಮೆ ಆಸಾಮಿ ಆಗಿರಲಿಲ್ಲ. ರಾಣಿ ಎಲಿಜಬಿತ್ ಎರಡನೇ ಮಗ, ಈಗಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆಗೂ ಸ್ನೇಹ ಇಟ್ಟುಕೊಂಡಿದ್ದ. 1996 ರಿಂದ 1999 ರ ವೇಳೆ ಈ ಜೋಡಿ ಹೆಚ್ಚಿನ ಅಪರಾಧ ಮಾಡಿತ್ತು ಎನ್ನಲಾಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ