ಠಾಣಾಭವನ ಮತ್ತು ಗರ್ಹಿ ಪುಖ್ತಾದಲ್ಲಿ ವಾಸಿಸುತ್ತಿದ್ದ ತೃತೀಯ ಲಿಂಗಿಗಳಾದ ಪಿಂಕಿ ಹಾಗೂ ರೇಷ್ಮಾ ಜೊತೆ ಉತ್ತಮ ಸಂಬಂಧ ಹೊಂದಿದ್ದ ಟೈಲರರ್ ಜಬ್ಬಾರ್ ಅವರಿಗೆ ಚಹಾದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನೀಡಿದ್ದಾರೆ. ಆ ಬಳಿಕ ವೃಕ್ತಿಯ ಮರ್ಮಾಂಗವನ್ನು ಕತ್ತರಿಸಿ ಶುಗರ್ ಮಿಲ್‌ನಲ್ಲಿ ಎಸೆದ ಘಟನೆ ಬೆಳಕಿಗೆ ಬಂದಿದೆ.
ಲಕ್ನೋ (ಅ. 28): ತಮ್ಮೊಂದಿಗೆ ಆತ ಕೂಡ ನಪುಂಸಕನಾಗಬೇಕು ಎನ್ನುವ ಉದ್ದೇಶದಲ್ಲಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು ವ್ಯಕ್ತಿಯೊಬ್ಬನ ಮರ್ಮಾಂಗವನ್ನೇ ಕತ್ತರಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಟ್ಟೆ ಖರೀದಿಸುವ ನೆಪದಲ್ಲಿ ಥಾನಭವನ ಮತ್ತು ಗರ್ಹಿ ಪುಖ್ತಾದಲ್ಲಿ ವಾಸಿಸುತ್ತಿದ್ದ ತೃತೀಯ ಲಿಂಗಿಗಳಾದ ಪಿಂಕಿ ಹಾಗೂ ರೇಷ್ಮಾ ಟೈಲರ್ ಆಗಿರುವ ಜಬ್ಬಾರ್‌ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಮಾರ್ಗಮಧ್ಯದಲ್ಲಿ ಜಬ್ಬಾರ್‌ಗೆ ಚಹಾದಲ್ಲಿ ಅಮಲು ಬರು ಪದಾರ್ಥ ನೀಡಲಾಗಿತ್ತು. ಆತ ಮೂರ್ಛೆ ತಪ್ಪಿದಾಗ ಮರ್ಮಾಂಗವ್ನು ಕತ್ತರಿಸಿ ದಾರಿ ಮಧ್ಯದಲ್ಲಿರುವ ಶುಗರ್ ಮಿಲ್‌ನಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ. ಜಬ್ಬಾರ್ ಶಾಮ್ಲಿ ಪ್ರದೇಶದ ಸೊಂತಾ ರಸೂಲ್‌ಪುರ ಗ್ರಾಮದ ನಿವಾಸಿಯಾಗಿದ್ದಾರೆ. ಆತ ಮದುವೆಯಾಗಿದ್ದರೂ, ತೃತೀಯಲಿಂಗಗಳಾದ ಇವರೊಂದಿಗೆ ಹೆಚ್ಚಿನ ಕಾಲ ಜೊತೆಯಲ್ಲಿ ಇರುತ್ತಿದ್ದರು ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.
उत्तर प्रदेश: किन्नरों ने शामली में कथित तौर पर एक विवाहित व्यक्ति का निजी अंग काटा।
पीड़ित ने बताया, "पिंकी और रेशमा ने कपड़े लाने के लिए शामली जाने की बात कही। इन्होंने चार अज्ञात लोगों के साथ मुझे चाय पिलाई। चाय में पता नहीं क्या था और नशे में मेरा निजी अंग काट दिया।" (27.10) pic.twitter.com/0fGS2T3ptB
ಸಂತ್ರಸ್ತ ಶಹಜಾದ್ ಅವರ ಪುತ್ರ ಜಬ್ಬಾರ್ ಠಾಣಾಭವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವೃತ್ತಿಯಲ್ಲಿ ತಾನೊಬ್ಬ ಟೈಲರ್ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಠಾಣಾ ಭವನ ಮತ್ತು ಗರ್ಹಿ ಗುಪ್ತಾದಲ್ಲಿ ವಾಸ ಮಾಡುತ್ತಿರುವ ಇಬ್ಬರು ತೃತೀಯ ಲಿಂಗಿಗಳ ಜೊತೆ ಉತ್ತಮ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾಗಿ ತಿಳಿಸಿದ್ದರು. ಠಾಣಾಭವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ತಾನು ಯಾವುದೋ ಕೆಲಸದ ನಿಮಿತ್ತ ಠಾಣಾಭವನಕ್ಕೆ ಹೋಗಿದ್ದೆ, ಅಲ್ಲಿ ಪಿಂಕಿ ಮತ್ತು ರೇಷ್ಮಾಳನ್ನು ನೋಡಿದ್ದೆ. ಶಾಮ್ಲಿಯಿಂದ ಬಟ್ಟೆ ಖರೀದಿಸುವ ನೆಪದಲ್ಲಿ ಅವರನ್ನು ಕಾರಿನಲ್ಲಿ ಕೂರಿಸಿದರು. ಕಾರಿನಲ್ಲಿ ಇನ್ನೂ ನಾಲ್ವರು ಕುಳಿತಿದ್ದರು.
ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಅವರು ನನಗೆ ಚಹಾ ನೀಡಿದರು. ಅದನ್ನು ಕುಡಿದ ಬಳಿಕ ನನಗೆ ಪ್ರಜ್ಞೆ ತಪ್ಪಿಸಿತು. ಆ ನಂತರ ಅವರು ನನ್ನ ಮರ್ಮಾಂಗವನ್ನು ಕತ್ತರಿಸಿ ಠಾಣಾಭವನ ಜಿಲ್ಲೆಯ ಸಕ್ಕರೆ ಕಾರ್ಖಾನೆ ಬಳಿ ಎಸೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !
ಬಟ್ಟೆ ತರಲು ಶಾಮ್ಲಿಗೆ ಹೋಗಬೇಕು ಎಂದು ಪಿಂಕಿ ಮತ್ತು ರೇಷ್ಮಾ ಹೇಳಿದ್ದರು ಎಂದು ಜಬ್ಬಾರ್‌ಹೇಳಿದ್ದಾರೆ. ಈ ವೇಳೆ ಕಾರಿನಲ್ಲಿಯೇ ಅವರು ನನಗೆ ಚಹಾ ನೀಡಿದರು. ಅಲ್ಲಿಂದ ನನಗೆ ಪ್ರಜ್ಞೆ ತಪ್ಪಿತ್ತು. ಚಹಾದಲ್ಲಿ ಏನು ಬೆರೆಸಿದ್ದರು ಎನ್ನುವುದು ನನಗೆ ತಿಳಿದಿಲ್ಲ. ಆ ಬಳಿಕ ನಾನು ಮೂರ್ಛೆ ತಪ್ಪಿದೆ ಎಂದಿದ್ದಾರೆ. ಜಬ್ಬಾರ್‌ಗೆ ಪ್ರಜ್ಞೆ ಬಂದ ಕೂಡಲೇ ಮನೆಯವರಿಗೆ ಕರೆ ಮಾಡಿದ್ದಾರೆ. ಅವರು ತಕ್ಷಣ ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ಅವರನ್ನು ಉನ್ನತ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಆತಮ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಸಿಂಗ್ ತಿಳಿಸಿದ್ದಾರೆ.
ಲಾಡ್ಜ್‌ನಲ್ಲಿ ಬಡಿದಾಡಿಕೊಂಡ ತೃತೀಯ ಲಿಂಗಿಗಳು, ಯುವಕನ ಮಧ್ಯೆ ಬಡಿದಾಟ..!
ಜಬ್ಬಾರ್ ನೀಡಿದ ದೂರಿನ ಆಧಾರದ ಮೇಲೆ, ಶಾಮ್ಲಿ ಎಎಸ್‌ಪಿ ಓಪಿ ಸಿಂಗ್ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 328 ಮತ್ತು 326 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಯುತ್ತಿದೆ.