ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಖಾಸಗಿ ಪ್ರವಾಸಿ ಬಸ್ ಉರುಳಿ ಬಿದ್ದು15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಜೆ ಬರುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿದೆ.
ಚಾಮರಾಜನಗರ (ಜ.25): ಮಹದೇಶ್ವರ ಬೆಟ್ಟದ ಪಾಲಾರ್ ಬಳಿ ಖಾಸಗಿ ಪ್ರವಾಸಿ ಬಸ್ ಉರುಳಿ ಬಿದ್ದು15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ತಮಿಳುನಾಡು ಪ್ರವಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಜೆ ಬರುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿದೆ.
ಗುಜರಾತ್‌ನಿಂದ ಆಗಮಿಸಿದ್ದ ಪ್ರವಾಸಿ ಬಸ್ ಇಂದು ಬೆಳಗ್ಗೆ ತಮಿಳುನಾಡಿನಿಂದ ಮಹದೇಶ್ವರ ಬೆಟ್ಟಕ್ಕೆ ಬರುತ್ತಿತ್ತು. ಈ ವೇಳೆ ಬಸ್ ಅನ್ನು ತಿರುವಿನಲ್ಲಿ ತಿರುಗಿಸುವಾಗ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದು, ನಂತರ ಬೆಟ್ಟದತ್ತ ನುಗ್ಗಿದೆ. ಈ ವೇಳೆ ಬಸ್ ವಾಲಿಕೊಂಡು ಬಿದ್ದಿದ್ದು, ಬಸ್‌ನಲ್ಲಿದ್ದ 15 ಮಂದಿಗೆ ಹಾಯವಾಗಿದೆ. ಇನ್ನು ಬಸ್‌ನಲ್ಲಿ ಸುಮಾರು 50 ಪ್ರವಾಸಿಗರು ಪ್ರಯಾಣ ಮಾಡುತ್ತಿದ್ದರು. ಪಾಲಾರ್ ರಸ್ತೆಯ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಗಾಯಾಳುಗಳಿಗೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
undefined
Mandya: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಗುದ್ದಿ ಇಬ್ಬರು ಮಹಿಳೆಯರ ಸಾವು: ರೈಲ್ವೆ ನಿಲ್ದಾಣದಲ್ಲಿ ದುರ್ಘಟನೆ
20 ಅಡಿ ಬೆಟ್ಟವೇರಿದ ಖಾಸಗಿ ಬಸ್: ಸ್ಲೀಪರ್ ಕೋಚ್ ಟೂರಿಸ್ಟ್ ಬಸ್ ಪಾಲಾರ್ ಬಳಿ ಎರಡನೇ ತಿರುವಿನಲ್ಲಿ ತಿರುಗಿಸಿಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯ ಪಕ್ಕದಲ್ಲಿ ಅಳವಡಿಕೆ ಮಾಡಲಾಗಿದ್ದ ಕಲ್ಲುಗಳನ್ನು ಹತ್ತಿಕೊಂಡು ಬೆಟ್ಟದತ್ತ ನುಗ್ಗಿದೆ. ಸುಮಾರು 20 ಅಡಿ ಎತ್ತರದಷ್ಟು ಬೆಟ್ಟವನ್ನು ಹತ್ತಿದ್ದು, ನಂತರ ಮುಂದಕ್ಕೆ ಹೋಗಲು ಸಾಧ್ಯವಾಗದೇ ಬಸ್ ವಾಲಿಕೊಂಡಿದೆ. ಇನ್ನು ಬಸ್ಸಿನ ಒಳಗೆ ಬಲಭಾಗದಲ್ಲಿ ಇದ್ದ ಪ್ರಯಾಣಿಕರು ಮಲಗಿದ ಸೀಟಿನಿಂದ ರಸ್ತೆಗೆ ಬಿದ್ದಿದ್ದಾರೆ. ಸುಮಾರು ಐದಾರು ಅಡಿಯಿಂದ ರಸ್ತೆಗೆ ಬಿದ್ದಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ. ಮಹದೇಶ್ವರ ಬೆಟ್ಟದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ ನಂತರ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಮತ್ತು ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಸ್ಕೂಟರ್‌ಗೆ ಬಸ್ ಡಿಕ್ಕಿ, ತಲೆಗೆ ಚಕ್ರ ಹರಿದು ಮಹಿಳಾ ಉದ್ಯೋಗಿ ಸಾವು
ಬೆಟ್ಟದಿಂದ ಬಸ್ ಇಳಿಸಲು ಪರದಾಟ: ಇನ್ನು ಬೆಳಗ್ಗಿನ ಜಾವ ಬಸ್ ಬೆಟ್ಟವನ್ನು ಏರಿದ ನಂತರ ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ. ಆದರೆ, ಪ್ರಯಾಣಿಕ ಬಸ್ ಅನ್ನು ಬೆಟ್ಟದಿಂದ ಕೆಳಗೆ ಇಳಿಸಲು ಪ್ರಯತ್ನ ಮಾಡಿದ್ದು, ರಸ್ತೆಗೆ ಅಳವಡಿಕೆ ಮಾಡಿದ ಪಕ್ಕದ ಸಿಮೆಂಟ್ ಕಲ್ಲುಗಳು ಗಾಲಿಗೆ ಅಡ್ಡಲಾಗಿ ಕುಳಿತುಕೊಂಡಿದೆ. ಹೀಗಾಗಿ, ಬಸ್ ಅನ್ನು ಕೆಳಗೆ ಇಳಿಸಲು ಸಾಧ್ಯವಾಗದೇ ಅಲ್ಲಿಯೇ ನಿಲ್ಲಿಸಿದ್ದಾನೆ. ಈ ವೇಳೆ ಬಸ್‌ನೊಳಗಿದ್ದ ಇತರೆ ಪ್ರಯಾಣಿಕರು ಹೊರಬಂದು ರಸ್ತೆಗೆ ಬಿದ್ದಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕ್ರೇನ್ ಸಹಾಯದಿಂದ ಬಸ್ ತೆರವು: ಅಪಘಾತಕ್ಕೆ ಒಳಗಾದ ಟೂರಿಸ್ಟ್ ಬಸ್‌ನ ಕೆಲವು ಭಾಗಗಳು ಹಾನಿಯಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಉಳಿದ ಪ್ರಯಾಣಿಕರು ತಮ್ಮ ಊರುಗಳತ್ತ ಹೊರಡಲು ಅನುಕೂಲ ಮಾಡಿಕೊಡಲಾಗಿದೆ. ಬೆಟ್ಟವನ್ನು ಏರಿದ್ದ ಬಸ್ ಅನ್ನು ಕ್ರೇನ್ ಮೂಲಕ ಕೆಳಗೆ ಇಳಿಸಲಾಗಿದೆ. ಈ ಘಟನೆ ಕುರಿತು ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಚಾಲಕನನ್ನು ಕೂಡ ವಶಕ್ಕೆ ಪಡೆದಿದ್ದು, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
Accident: ಕಾರು ಡಿಕ್ಕಿಯಾಗಿ ಮದುಮಗ ಸೇರಿ ಇಬ್ಬರ ಸಾವು: ಕಣ್ಣೀರು ಹಾಕುತ್ತಿರುವ ವಧು