ಕೋಲಾರ: ಪೊಲೀಸರಿಗೇ ಸುಪಾರಿ ಕೊಟ್ಟು ಠಾಣೆಯಲ್ಲಿ ಯುವಕನಿಗೆ ಚಿತ್ರಹಿಂಸೆ..!

By Kannadaprabha News  |  First Published Feb 26, 2024, 1:00 AM IST

ಯುವಕನಿಗೆ ಥಳಿಸಿದ ದೃಶ್ಯಗಳನ್ನು ಪಿಎಸ್‌ಐ ಅರ್ಜುನ್‌ ಗೌಡ ವಿಡಿಯೋ ಕಾಲ್ ಮೂಲಕ ಯುವತಿಯ ತಂದೆಗೆ ತೋರಿಸಿದ್ದಾರೆ. ಗೋಣಿಕೊಪ್ಪದ ರಮೇಶ್ ಎನ್ನುವವರ ಮನೆಯಲ್ಲಿ ೧ ಲಕ್ಷ ಹಣ ಕಳುವಾಗಿರೊ ಆರೋಪ ಹೊರಿಸಿ ಗುರುಮೂರ್ತಿಗೆ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಯುವಕನ ತಾಯಿ ಮಂಜುಳಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.


ಕೋಲಾರ(ಫೆ.26):  ಯುವತಿಯೊಂದಿಗೆ ಸಲುಗೆಯಿಂದ ಇದ್ದ ಹಿನ್ನೆಲೆಯಲ್ಲಿ ಯುವತಿಯ ತಂದೆ ಪೊಲೀಸರಿಗೆ ಸುಪಾರಿ ಕೊಟ್ಟು ಯುವಕನ ಮೇಲೆ ಕಳ್ಳತನ ಆರೋಪದಡಿ ಠಾಣೆಯಲ್ಲಿ ಚಿತ್ರಹಿಂಸೆ ಕೊಡಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸರ ವಿರುದ್ಧ ಹಲ್ಲೆಗೊಳಗಾದ ಕುಟುಂಬಸ್ಥರು ಆರೋಪಿಸಿದ್ದಾರೆ. ಫೆ.೨೨ ರಂದು ತಿಪ್ಪದೊಡ್ಡಿಯ ೧೯ ವರ್ಷದ ಯುವಕ ಗುರುಮೂರ್ತಿ ಎಂಬುವನನ್ನು ಬಂಧಿಸಿರುವ ನಂಗಲಿ ಪೊಲೀಸರು, ನಂತರ ಠಾಣೆಗೆ ಕರೆತಂದು ಥಳಿಸಿದ್ದಾರೆ.

Latest Videos

undefined

ಕೋಲಾರ: ಕಳೆದ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಕೊನೆಗೂ ಅರೆಸ್ಟ್

ಯುವಕನಿಗೆ ಥಳಿಸಿದ ದೃಶ್ಯಗಳನ್ನು ಪಿಎಸ್‌ಐ ಅರ್ಜುನ್‌ ಗೌಡ ವಿಡಿಯೋ ಕಾಲ್ ಮೂಲಕ ಯುವತಿಯ ತಂದೆಗೆ ತೋರಿಸಿದ್ದಾರೆ. ಗೋಣಿಕೊಪ್ಪದ ರಮೇಶ್ ಎನ್ನುವವರ ಮನೆಯಲ್ಲಿ ೧ ಲಕ್ಷ ಹಣ ಕಳುವಾಗಿರೊ ಆರೋಪ ಹೊರಿಸಿ ಗುರುಮೂರ್ತಿಗೆ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಯುವಕನ ತಾಯಿ ಮಂಜುಳಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ಗಾಯಾಳು ಗುರುಮೂರ್ತಿ ಸದ್ಯ ಮುಳಬಾಗಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಮುಳಬಾಗಲು ಡಿವೈಎಸ್‌ಪಿ ನಂದ ಕುಮಾರ್ ಭೇಟಿ ನೀಡಿ ಯುವಕನಿಂದ ದೂರು ಸ್ವೀಕರಿಸಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಕಳೆದ ೬ ತಿಂಗಳ ಹಿಂದೆ ಮದನಪಲ್ಲಿ ಮೂಲದ ವ್ಯಕ್ತಿಯನ್ನು ಕಳ್ಳತನ ಪ್ರಕರಣದಲ್ಲಿ ಕರೆತಂದಾಗ ಆತ ಠಾಣೆಯಲ್ಲೇ ಮೃತಪಟ್ಟಿದ್ದ. ಆಗ ನಂಗಲಿ ಠಾಣೆ ಮತ್ತೆ ವಿವಾದಕ್ಕೆ ಕಾರಣರಾಗಿದೆ.

ಯುವತಿ ಕರೆದಿದ್ದರಿಂದ ತಾನು ಆಕೆಯ ಮನೆಗೆ ಹೋಗಿದ್ದಾಗ, ತನ್ನ ಮೇಲೆ ಕಳ್ಳತನದ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪೊಲೀಸರಿಂದ ಹಲ್ಲೆಗೊಳಗಾದ ಗುರುಮೂರ್ತಿ ಹೇಳಿದ್ದಾನೆ. ಅಪ್ರಾಪ್ತ ಗುರುಮೂರ್ತಿ ಮೇಲೆ ಹೀಗೆ ಠಾಣೆಯಲ್ಲಿ ಹಲ್ಲೆ ಮಾಡಿರುವ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ.

click me!