
ಬೆಂಗಳೂರು (ಫೆ.3) : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಹೆಸರಲ್ಲಿ ಕಿಡಿಗೇಡಿಯೊಬ್ಬ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮ್ಯಾನೇಜರ್‌ಗೆ ಬರೋಬ್ಬರಿ ಆರೂವರೆ ಲಕ್ಷ ರೂಪಾಯಿ ವಂಚನೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಂ ಎಸ್ ಧೋನಿ ಮ್ಯಾನೇಜರ್ ಸ್ಚಾಮಿನಾಥನ್ ವಂಚನೆಗೊಳಗಾದವರು. ತಿರುಪತಿಯಲ್ಲಿ ಸ್ಪೆಷಲ್ ದರ್ಶನ ಮಾಡಿಸಲಾಗುತ್ತದೆಂದು ನಂಬಿಸಿ ಲಕ್ಷ ಲಕ್ಷ ವಂಚನೆ ಮಾಡಿರುವ ಕಿಡಿಗೇಡಿ. ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದಿರುವ ಕೃತ್ಯ. ಹಣಪಡೆದು ಅತ್ತ ತಿರುಪತಿ ದರ್ಶನ ಮಾಡಿಸದೇ, ಹಣವೂ ವಾಪಸ್ ಕೊಡದೇ ವಂಚನೆ ಮಾಡಿರುವ ಹಿನ್ನೆಲೆ ಇದೀಗ ವಂಚಕನ ವಿರುದ್ಧ ಹೆಚ್‌ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೆಳ್ತಂಗಡಿ: ಆಯುರ್ವೇದ ಪಂಡಿತರೆಂದು ನಂಬಿಸಿ 30 ಸಾವಿರ ವಂಚನೆ
ಕೇಂದ್ರ ಸಚಿವೆ ಹೆಸರೇಳಿ ವಂಚನೆ:
ಎಂಎಸ್ ಧೋನಿ ಮ್ಯಾನೇಜರ್‌ನ ಸಂಪರ್ಕಿಸಿರುವ ಆರೋಪಿ ತಾನು ಐಎಎಸ್ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ಸಚಿವರ ಬಳಿ ಪಿಎ ಆಗಿದ್ದೇನೆ ಅಂತಾ ಪರಿಚಯಿಸಿಕೊಂಡಿದ್ದಾನೆ. ತನ್ನದು ಸಾಯಿ ಟ್ರಸ್ಟ್ ಇದೆ ಕೈಲಾದ ಸಹಾಯ ಮಾಡಿ ಎಂದು ಮೂರು ಲಕ್ಷ ಹಣ ಪಡೆದಿದ್ದಾರೆ. ಅಲ್ಲದೇ ಹನ್ನೆರಡು ಮಂದಿಗೆ ವಿಶೇಷ ದರ್ಶನ ಮಾಡಿಸ್ತೇವೆ ರೂಮ್ ವ್ಯವಸ್ಥೆ ಇರುತ್ತೆ. ಭೇಟಿ ಬಳಿಕ ಪ್ರೋಟೋಕಾಲ್ ಮೂಲಕ ಯಾರನ್ನಾದ್ರು ಕಳಿಸಬಹುದು ಎಂದು ನಂಬಿಸಿರುವ ಕಿರಾತಕ. ಆ ಬಳಿಕ ಸ್ನೇಹಿತನನ್ನ ಕಳಿಸೋ ವಿಚಾರದ ನಿಟ್ಟಿನಲ್ಲಿ ಮೂರು ಲಕ್ಷ ರೂ. ಹಣವನ್ನು ಫೋನ್ ಪೇ ಮಾಡಿರುವ ಸ್ವಾಮಿನಾಥನ್.
ಮಗಳನ್ನ ಮದುವೆ ಮಾಡಿಕೊಡುವುದಾಗಿ ನಂಬಿಸಿ ಯುವಕನಿಗೆ ಬರೋಬ್ಬರಿ ₹25 ಲಕ್ಷ ಉಂಡೇನಾಮ ಹಾಕಿದ ಕುಟುಂಬ!
ಹಣ ಪಡೆದರೂ ತಿರುಪತಿ ದರ್ಶನ ಮಾಡಿಸದೇ, ಸಂಪರ್ಕಕ್ಕೂ ಸಿಗದೆ ಹಿನ್ನೆಲೆ ವಂಚನೆಗೊಳಗಾಗಿರುವುದು ಸ್ಪಷ್ಟವಾಗಿ ಹೀಗಾಗಿ ವಂಚಕನ ವಿರುದ್ಧ ಹೆಚ್‌ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗೆ ಸ್ವಾಮಿನಾಥನ್ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ವಂಚಕನ ಪತ್ತೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ