ಶಾಲಾ ವಾಹನಕ್ಕೆ ಬಲಿಯಾದ ಮೂರು ವರ್ಷದ ಪುಟ್ಟ ಕಂದಮ್ಮ!

By Gowthami K  |  First Published Jul 8, 2023, 6:09 PM IST

ಶಾಲಾ ವಾಹನ ಹರಿದು ಚಕ್ರದಡಿಯಲ್ಲಿ ಮೂರು ವರ್ಷದ  ಪುಟ್ಟ ಮಗು ಮೃತಪಟ್ಟ ದಾರುಣ ಘಟನೆ ಕುಷ್ಟಗಿ ಪೋಲಿಸ್ ಠಾಣೆಯ ವ್ಯಾಪ್ತಿಯ ಗೋತಗಿಯ ಗ್ರಾಮದಲ್ಲಿ ನಡೆದಿದೆ.


ಕೊಪ್ಪಳ (ಜು.8): ಶಾಲಾ ವಾಹನ ಹರಿದು ಚಕ್ರದಡಿಯಲ್ಲಿ ಮೂರು ವರ್ಷದ ಚೈತ್ರಾ ಬಾವಿಕಟ್ಟಿ ಎಂಬ ಪುಟ್ಟ ಮಗು ಮೃತಪಟ್ಟ ದಾರುಣ ಘಟನೆ ಕುಷ್ಟಗಿ ಪೋಲಿಸ್ ಠಾಣೆಯ ವ್ಯಾಪ್ತಿಯ ಗೋತಗಿಯ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಗೋತಗಿ ಗ್ರಾಮದ ಬಸವರಾಜ ಬಾವಿಕಟ್ಟಿ ಅವರ ಮೂವರು ಪುತ್ರಿಯರಲ್ಲಿ ಇಬ್ಬರು ಪುತ್ರಿಯರನ್ನು 5 ಕಿ.ಮೀ. ದೂರದಲ್ಲಿರುವ ಹುನಗುಂದ ತಾಲೂಕಿನ ಹಿರೇಓತಗೇರಿ ಗ್ರಾಮದ ಖಾಸಗಿ ಶಾಲೆಯಾದ ಜ್ಞಾನಮಂದಿರ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಶನಿವಾರ ಬೆಳಿಗ್ಗೆ ಶಾಲಾ ವಾಹನವು ಎಂದಿನಂತೆ ಗೋತಗಿ ಗ್ರಾಮದ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಲು ಬಂದಿತ್ತು.

Tap to resize

Latest Videos

ಪಾಕ್ ನಾರಿಯ ಹನಿಟ್ರ್ಯಾಪ್‌ನಲ್ಲಿ ಡಿಆರ್‌ಡಿಒ ವಿಜ್ಞಾನಿ, ಚಾರ್ಜ್​ಶೀಟಲ್ಲಿ​ ಬಯಲಾಯ್ತು 

ಶಾಲೆಗೆ ಹೊರಟ ಅಕ್ಕನನ್ನು ಕಳಿಸಲು ತಮ್ಮ ಅಜ್ಜಿಯ ಜೊತೆಗೆ ಬಂದಿದ್ದ ಮೂರು ವರ್ಷದ ಮಗು ಚೈತ್ರಾ ತನ್ನ ಅಕ್ಕನನ್ನು ಬಸ್ಸ್ ಹತ್ತಿಸಿದ್ದು ವಾಪಸ್ಸು ಬರುವಾಗ ವಾಹನದ ಚಾಲಕ ಪ್ರವೀಣಕುಮಾರ ಕಂದಕೂರು ಗಮನಿಸದ ಹಿನ್ನೆಲೆಯಲ್ಲಿ ವಾಹನ ಚಲಾಯಿಸಿಕೊಂಡು ಹೋದ ಪರಿಣಾಮವಾಗಿ ಚೈತ್ರಾಳ ತಲೆಯ ಮೇಲೆ ವಾಹನದ ಬಲಗಡೆಯ ಚಕ್ರ ಹೋಗಿದ್ದರ ಕಾರಣದಿಂದ ಬಹಳಷ್ಟು ರಕ್ತಸ್ರಾವವಾಗಿ ಮಗು ಮೃತ ಪಟ್ಟಿದ್ದಾಳೆ.

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಶೇಕಡಾ 25 ರಷ್ಟು ಕಡಿತ, ಇಲ್ಲಿದೆ ಹೊಸ ಬೆಲೆ ಪಟ್ಟಿ!

ಮೃತಪಟ್ಟ ಚೈತ್ರಾಳ ಶವವನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಕುರಿತು ಚೈತ್ರಾಳ ತಂದೆಯಾದ ಬಸವರಾಜ ಬಾವಿಕಟ್ಟಿ ದೂರಿನ ಅನ್ವಯ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು  ಮಾಡಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಅಪಘಾತಕ್ಕಿಡಾಗಿ  ಚೈತ್ರಾ ಮೃತಪಟ್ಟ ಹಿನ್ನೆಲೆಯಲ್ಲಿ  ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

click me!