
ಬೆಂಗಳೂರು(ಫೆ. 11) ಇವರು ಅಂತಿಂಥ ಕಿರಾತಕರಲ್ಲ. ಒಂದೇ ಹುಡುಗಿಯನ್ನ ಲವ್ (Love) ಮಾಡಿದ್ದ ಕಳ್ಳರ ಗ್ಯಾಂಗ್ ಪ್ರೀತಿ ಹೆಸರಲ್ಲಿ ಚಿನ್ನಾಭರಣ ದೋಚಿತ್ತು.
ಬ್ಯಾಡರಹಳ್ಳಿ ಪೊಲೀಸರು(Bengaluru Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಸವರಾಜ, ವಿಜಯಕುಮಾರ,ಸಂಜಯ್ ಬಂಧಿತ ಆರೋಪಿಗಳು.. ಮೊದಲಿಗೆ ಲವ್ವು ಆಮೇಲೆ ಬದುಕೋಕೆ ಕಷ್ಟ ಕಷ್ಟ ಅಂತ ರಾಗ ಎಳೆಯುತ್ತಿದ್ದರು. ಲವರ್ ಬಾಯ್ಸ್ ಕೇಳಿದಷ್ಟು ಹಣ, ಮನೆಯಲ್ಲಿಟ್ಟಿದ್ದ ಚಿನ್ನಾಭರಣ (Gold) ಹುಡುಗಿ ತಂದುಕೊಟ್ಟಿದ್ದಳು.
ಕೆಲ ಬಾರಿ ಪ್ರೀತಿಯ ಹೆಸರಲ್ಲಿ ಮನೆಗೆ ಹೋಗಿ ಕಳ್ಳತನ ಮಾಡಿ ಬಂದಿದ್ದರು ಸದ್ಯ ಪ್ರೀತಿಯ ಹೆಸರಲ್ಲಿ ಚಿನ್ನಾಭರಣ ದೋಚ್ತಿದ್ದ ಮೂವರು ಅಂದರ್ ಆಗಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.
ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ: ಮುಂಬೈ ಪೊಲೀಸರಿಗೆ (Mumbai Police) ಸವಾಲಾಗಿದ್ದ ಮಲಾಡ್ ದರೋಡೆ ಪ್ರಕರಣದಲ್ಲಿ ಸಿಕ್ಕ ಸುಳಿವನ್ನು ಆಧರಿಸಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಐವರನ್ನು ಬಂಧಿಸಿದ್ದಾರೆ. 60 ವರ್ಷದ ಮಹಿಳೆ ಮನೆಯಿಂದ 21 ಲಕ್ಷ ರೂ. ದರೋಡೆ (Robbery) ಮಾಡಿದ್ದ ತಂಡದ ಸದಸ್ಯರು ಸರೆ ಸಿಕ್ಕಿದ್ದಾರೆ. ಮಹಿಳೆ ತಮ್ಮ ಜನ್ಮದಿನ ಆಚರಣೆ ಮಾಡಿಕೊಳ್ಳಲು ಹೊರಗೆ ಹೋಗಿದ್ದಾಗ ಜನವರಿ 31 ರಂದು ಆಕೆ ಮನೆಯನ್ನು ದರೋಡೆ ಮಾಡಿದ ತಂಡ ಪರಾರಿಯಾಗಿತ್ತು.
Suvarna FIR: ನಿನ್ನ ಗಂಡ ನನಗೆ ಬೇಕು... ಕರುಣೆ ತೋರದೆ ಮಕ್ಕಳು ಸೇರಿ ಐವರನ್ನು ಕೊಂದಳು!
ಅಪರಾಧ ಹಿನ್ನಲೆ ಇದ್ದ ಆಟೋ ಚಾಲಕರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಕೆಲವರು ತಲೆಮರೆಸಿಕೊಂಡ ಮಾಹಿತಿಯೂ ಲಭ್ಯವಾಗಿದೆ. ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ ನೌಶಾದ್ ಖಾನ್ ಪೋನ್ ಮಾಹಿತಿಯನ್ನು ಹೊರತೆಗೆದಾಗ ಇನ್ನಷ್ಟು ಅಂಶಗಳು ಪತ್ತೆಯಾಗಿವೆ. ನಂತರ ಪೊಲೀಸರು ನೌಶಾದ್ ಖಾನ್ ಪೋನ್ ಬಳಸಿಕೊಂಡೆ ಉಳಿದವರಿಗೆ ಕರೆ ಮಾಡಿ ಪಾರ್ಟಿ ಆಯೋಜನೆ ಮಾಡಿದ್ದೇನೆನ ಬರಬೇಕು ಎಂದು ಆಹ್ವಾನ ಕೊಟ್ಟಿದ್ದ ಪೊಲೀಸರು ಅಲ್ಲಿಗೆ ಬಂದವರನ್ನು ಸೀದಾ ಜೈಲಿಗೆ ಕಳಿಸಿದ್ದಾರೆ.
ಇಂಜಿನ್ ಆಯಿಲ್ ಸೋರ್ತಿದೆ ಎಂದು ಲಾಜಿಕ್: ವ್ಯಕ್ತಿಯ ಗಮನ ಬೇರೆಡೆ ಸೆಳೆದು .10 ಲಕ್ಷ ಕಳ್ಳತನ ಮಾಡಿದ್ದ ಪ್ರಕರಣ ವಿಜಯಪುರದಿಂದ ವರದಿಯಾಗಿತ್ತು. ಬಿಎಲ್‌ಡಿಇ ರಸ್ತೆಯ ಎಕ್ಸಿಸ್ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿ ತಂಡ ಪರಾರಿಯಾಗಿತ್ತು.
ನಿಂಗರಾಜ ಅವರು ಎಕ್ಸಿಸ್ ಬ್ಯಾಂಕ್‌ನಿಂದ .10 ಲಕ್ಷ ತೆಗೆದುಕೊಂಡು ಕಾರ್‌ನಲ್ಲಿ (Car) ಇಟ್ಟುಕೊಂಡು ತೆರಳಲು ಅಣಿಯಾಗಿದ್ದರು. ಆಗ ಕಾರ್‌ನ ಎಂಜಿನ್‌ನಿಂದ ಆಯಿಲ್ ಸೋರುತ್ತಿದೆ ಎಂದು ಗಮನ ಸೆಳೆದರು. ಆಗ ಆಯಿಲ್ ನೋಡಲು ಹಣದ ಬ್ಯಾಗ್ ಕಾರಿನ ಸೀಟಿನಲ್ಲಿಟ್ಟು ನಿಂಗರಾಜ ಕಾರಿನಿಂದ ಕೆಳಗಿಳಿದು ನೋಡಲು ಹೋದಾಗ ಕಾರಿನ ಸೀಟಿನಲ್ಲಿದ್ದ .10 ಲಕ್ಷ ಕಳ್ಳತನ ಮಾಡಿದ್ದ ತಂಡ ಎಸ್ಕೇಪ್ ಆಗಿತ್ತು.
ಮಸಾಜ್ ಪಾರ್ಲರ್ ಮಾಸ್ಟರ್ಸ್: ಮಸಾಜ್ ಪಾರ್ಲರ್ ಗೆ ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ. ಮಾಡ್ತಾ ಇದ್ದಿದ್ದು ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದಿದ್ದರು.
ಹೆಣ್ಣು ಮಕ್ಕಳ ಶೋಕಿಗೆ ಬಿದ್ದು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಮಸಾಜ್ ಪಾರ್ಲರ್ ಹೋಗೊಕೆ ಅಂತಲೇ ಮನೆ ಬೀಗ ಒಡಿಯುತ್ತಿದ್ದರು. ಇಬ್ಬರು ಖತರ್ನಾಕ್ ಮನೆಗಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜಾನ್ ಮೆಲ್ವಿನ್ ಮತ್ತು ಮಂಜುನಾಥ್ ಬಂಧಿತ ಸೆರೆ ಸಿಕ್ಕಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ