Bengaluru: ಹಿಗ್ಗಾಮುಗ್ಗ ಥಳಿತಕ್ಕೆ ಆರೋಪಿಯ ಬಲಗೈ ಕಟ್‌: ಪೊಲೀಸರ ಅಮಾನತು

By Kannadaprabha NewsFirst Published Dec 4, 2021, 10:00 AM IST
Highlights

*  ವರ್ತೂರು ಪೊಲೀಸರ ಅಮಾನುಷ ಕೃತ್ಯ
*  ಸಲ್ಮಾನ್‌ ಖಾನ್‌ ಮೇಲೆ ತೀವ್ರ ಹಲ್ಲೆ ಮಾಡಿದ್ದ ಪೊಲೀಸರು 
*  ಪೊಲೀಸರ ಅಮಾನುಷ ನಡೆಗೆ ವ್ಯಾಪಕ ಆಕ್ರೋಶ 

ಬೆಂಗಳೂರು(ಡಿ.04):  ವಾಹನಗಳ ಬ್ಯಾಟರಿ ಕಳವು ಪ್ರಕರಣ ಸಂಬಂಧ ವಿಚಾರಣೆ ವೇಳೆ ಮನಸೋ ಇಚ್ಛೆ ಹಲ್ಲೆಗೈದಿದ್ದರಿಂದ ಆರೋಪಿಯೊಬ್ಬ ಬಲಗೈ ಕಳೆದುಕೊಂಡಿದ್ದಾನೆ. ಈ ಸಂಬಂಧ ವರ್ತೂರು ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಮೂವರು ಪೊಲೀಸರನ್ನು(Police) ಸೇವೆಯಿಂದ ಅಮಾನತುಗೊಳಿಸಿ(Suspend) ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ದೇವರಾಜ್‌ ಅವರು ಆದೇಶಿಸಿದ್ದಾರೆ.

ವರ್ತೂರಿನ ಸಲ್ಮಾನ್‌ ಖಾನ್‌ ಅವರ ಬಲಗೈಯನ್ನು ಆಪರೇಷನ್‌ ಮಾಡಿ ತೆಗೆಯಲಾಗಿದೆ. ಈ ಘಟನೆ ಸಂಬಂಧ ಎಸಿಸಿ ನೇತೃತ್ವದಲ್ಲಿ ತನಿಖೆಗೆ(Investigation) ಆದೇಶಿಸಲಾಗಿತ್ತು. ಎಸಿಪಿ ನೀಡಿದ ವರದಿ ಮೇರೆಗೆ ವರ್ತೂರು ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ನಾಗಭೂಷಣ್‌, ಕಾನ್‌ಸ್ಟೇಬಲ್‌ಗಳಾದ ಬಿ.ಎನ್‌.ನಾಗರಾಜ್‌ ಮತ್ತು ಎಚ್‌.ಶಿವರಾಜ್‌ ಅವರನ್ನು ಅಮಾನತುಗೊಳಿಸಲಾಗಿದೆ.

Assault on Kirik Keerthi: ನಶೆಯಲ್ಲಿ ಫೋಟೋ ಕ್ಲಿಕ್‌: ಕಿರಿಕ್‌ ಕೀರ್ತಿ ಮೇಲೆ ಬಿಯರ್‌ ಬಾಟಲಿಂದ ಹಲ್ಲೆ

ಬ್ಯಾಟರಿ ಕಳವು ಪ್ರಕರಣ ಸಂಬಂಧ ವರ್ತೂರು ಪೊಲೀಸರು ಅ.27ರಂದು ಸಲ್ಮಾನ್‌ ಖಾನ್‌ನನ್ನು ಬಂಧಿಸಿ(Arrested) ಠಾಣೆಗೆ ಕರೆತಂದಿದ್ದರು. ಈ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಮೂರು ಬ್ಯಾಟರಿಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಬಳಿಕ ಬೇರೆ ಪ್ರಕರಣಗಳ ಬಗ್ಗೆ ವಿಚಾರಣೆ ಮಾಡುವ ನೆಪದಲ್ಲಿ ಸಲ್ಮಾನ್‌ ಖಾನ್‌ ಮೇಲೆ ಪೊಲೀಸರು ತೀವ್ರ ಹಲ್ಲೆ(Assault) ಮಾಡಿದ್ದರು. ಅದರಲ್ಲೂ ಸಲ್ಮಾನ್‌ ಖಾನ್‌ನ ಬಲಗೈಗೆ ತೀವ್ರ ಹಾನಿ ಮಾಡಿದ್ದರು. ಇಷ್ಟಾದರೂ ಸಲ್ಮಾನ್‌ ಖಾನ್‌ ಆರೋಪಗಳ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಪೊಲೀಸರ ಹಲ್ಲೆಯಿಂದ ಬಲಗೈ ಊದಿಕೊಂಡು ರಕ್ತ ಹೆಪ್ಪು ಗಟ್ಟಿತ್ತು. ಈ ವೇಳೆ ಪಾಲಕರನ್ನು ಕರೆಸಿ ಸಲ್ಮಾನ್‌ ಖಾನ್‌ನನ್ನು ಕಳುಹಿಸಿದ್ದರು.

ಸಲ್ಮಾನ್‌ ಖಾನ್‌ ಮನೆಗೆ ಹೋದ ಬಳಿಕ ನೋವಿನ ಮಾತ್ರೆ ಸೇವಿಸಿ ನೋವು ತಡೆದಿದ್ದ. ಬಳಿಕ ಆತನ ಆರೋಗ್ಯದಲ್ಲಿ ಏರುಪೇರಾಯಿತು. ಪಾಲಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ತಪಾಸಣೆ ಮಾಡಿದ ವೈದ್ಯರು, ಸಲ್ಮಾನ್‌ ಖಾನ್‌ ಬಲಗೈಗೆ ತೀವ್ರ ಹಾನಿಯಾಗಿದ್ದು, ಆ ಕೈ ತೆಗೆಯದಿದ್ದರೆ ಪ್ರಾಣಕ್ಕೆ ಅಪಾಯವೆಂದು ಪಾಲಕರ ಸಮ್ಮತಿ ಮೇರೆಗೆ ಭುಜದ ವರೆಗೆ ಶಸ್ತ್ರಚಿಕಿತ್ಸೆ(Surgery) ಮಾಡಿ ಬಲಗೈ ತೆಗೆದಿದ್ದರು.

ಪೊಲೀಸರ ಈ ಅಮಾನುಷ ನಡೆಗೆ ಪಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವೈಟ್‌ಫೀಲ್ಡ್‌ ಡಿಸಿಪಿಗೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ, ಘಟನೆ ಕುರಿತ ತನಿಖೆಗೆ ಎಸಿಪಿಗೆ ಸೂಚಿಸಿದ್ದರು. ಇದೀಗ ಎಸಿಪಿ ನೀಡಿದ ತನಿಖಾ ವರದಿ ಆಧರಿಸಿ ತಪ್ಪಿತಸ್ಥ ಮೂವರು ಪೊಲೀಸರನ್ನು ಅಮಾನುತುಗೊಳಿಸಿ ಆದೇಶಿಸಿದ್ದಾರೆ.

ಅಂಗಡಿಗಳಲ್ಲಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಕಿಡಿಗೇಡಿ ಬಂಧನ

ಬೆಂಗಳೂರು(Bengaluru): ಮಾರ​ಕಾಸ್ತ್ರ ತೋರಿಸಿ ಬೆದರಿಸಿ ಅಂಗ​ಡಿ​ಗ​ಳಲ್ಲಿ ಸುಲಿಗೆ ಮಾಡು​ತ್ತಿದ್ದ ಆರೋ​ಪಿ​ಯನ್ನು(Accused) ಹೈಗ್ರೌಂಡ್ಸ್‌ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

Quarantine Crime:ಕ್ವಾರಂಟೈನ್‌ನಲ್ಲಿದ್ದ ಸಹದ್ಯೋಗಿ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಆರೋಪಿಗಳು ಅರೆಸ್ಟ್!

ಕೆ.ಜಿ.ಹಳ್ಳಿ ನಿವಾಸಿ ಸಿದ್ದಿಕಿ ಅಲಿ​ಯಾಸ್‌ ಬರ್ನಲ್‌ ಸಿದ್ದಿಕಿ(32) ಬಂಧಿ​ತ. ಆರೋಪಿ ವಸಂತನಗರದ 8ನೇ ಕ್ರಾಸ್‌ನ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಮಾರ​ಕಾ​ಸ್ತ್ರ ತೋರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಈ ಕುರಿತ ವಿಡಿ​ಯೋ​ವೊಂದು ಸಾಮಾ​ಜಿ​ಕ​ ಜಾ​ಲ​ತಾ​ಣ​ಗ​ಳಲ್ಲಿ(Social Media) ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಅಂಗಡಿ ಮಾಲೀ​ಕ​ರಿಂದ ದೂರು ಸ್ವೀಕ​ರಿಸಿ ಆರೋ​ಪಿ​ಯನ್ನು ಬಂಧಿ​ಸ​ಲಾ​ಗಿ​ದೆ. ಈತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲೇಡ್‌ ನಾಟಕ!: 

ಪೊಲೀಸರು ಆರೋಪಿಯನ್ನು ಬಂಧಿ​ಸಿ ಠಾಣೆಗೆ ಕರೆದುಕೊಂಡು ಬಂದಿದ್ದು, ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಯು ಬಾಯಿಗೆ ಕೈ ಹಾಕಿಕೊಂಡು ಬ್ಲೇಡ್‌ ನುಂಗಿದ್ದೇನೆ ಎಂದು ಹೈಡ್ರಾಮ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ಪೊಲೀಸರು ಕೂಡಲೇ ಆರೋ​ಪಿ​ಯನ್ನು ಆಸ್ಪ​ತ್ರೆಗೆ ಕರೆ​ದೊಯ್ದು ಸ್ಕ್ಯಾನಿಂಗ್ ಮಾಡಿ​ಸಿ​ದ್ದಾರೆ. ಈ ವೇಳೆ ಬ್ಲೇಡ್‌ ಇಲ್ಲ ಎಂಬುದು ಪತ್ತೆ​ಯಾ​ಗಿದೆ. ಈ ಕತರ್ನಾಕ್‌ ಆರೋಪಿಯು ಈ ಹಿಂದೆ ಸಹ ಪೇಪರ್‌ ನುಂಗಿ, ಸೈನೈಡ್‌ ನುಗ್ಗಿ​ದ್ದೇನೆ ಎಂದು ಹೈಡ್ರಾಮಾ ಮಾಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!