ಧಾರವಾಡ: ಕೊರೋನಾ ಕಾಟಕ್ಕೆ ಒಂದೇ ಕುಟುಂಬ ಮೂವರ ಆತ್ಮಹತ್ಯೆ..!

Suvarna News   | Asianet News
Published : Jul 25, 2020, 09:51 AM ISTUpdated : Jul 25, 2020, 11:46 AM IST
ಧಾರವಾಡ: ಕೊರೋನಾ ಕಾಟಕ್ಕೆ ಒಂದೇ ಕುಟುಂಬ ಮೂವರ ಆತ್ಮಹತ್ಯೆ..!

ಸಾರಾಂಶ

ಒಂದೇ ಕುಟುಂಬದ ಮೂವರ ಆತ್ಮಹತ್ಯೆ| ಧಾರವಾಡದಲ್ಲೊಂದು ಹೃದಯ ವಿದ್ರಾವಕ ಘಟನೆ| ಖಾಸಗಿ ಕಂಪನಿ ಉದ್ಯೋಗಿಯ ಕುಟುಂಬ ಆತ್ಮಹತ್ಯೆ| ಕಂಪನಿಯಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಹೆಚ್ಚಳ| ಉದ್ಯೋಗ ಕಳೆದುಕೊಳ್ಳುವ ಆತಂಕ|  

ಧಾರವಾಡ(ಜು.25):  ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಪತ್ನಿ, ಮಗಳಿಗೆ ವಿಷ ನೀಡಿ, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕವಳಿಕಾಯಿ‌ ಚಾಳದಲ್ಲಿ ಘಟನೆ ನಡೆದಿದೆ. ಮೌನೇಶ ಪತ್ತಾರ (36), ಪತ್ನಿ ಅರ್ಪಿತಾ(28), ಮಗಳು ಸುಕೃತಾ (4) ಮೃತ ದುರ್ದೈವಿಗಳಾಗಿದ್ದಾರೆ. 

"

ಮೃತ ಮೌನೇಶ ಪತ್ತಾರ ಅವರು ನಗರದ ಟಾಟಾ ಮಾರ್ಕೊಪೊಲೋ ಕಂಪನಿ ಉದ್ಯೋಗಿಯಾಗಿದ್ದಾರೆ. ತಮ್ಮ ಕಂಪನಿಯಲ್ಲಿ ಮಾಹಾಮರಿ ಕೊರೋನಾ ಕೇಸ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಹೀಗಾಗಿ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಮೌನೇಶ ಪತ್ತಾರ ಅವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮನಸ್ಸು ಮಾಡಿದ್ದರು ಎಂದು ಹೇಳಲಾಗುತ್ತಿದೆ. 

ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಸಾಫ್ಟ್‌ವೇರ್‌ ಎಂಜಿನಿಯರ್‌

ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ವರಾದ ಮೃತ ಮೌನೇಶ ಪತ್ತಾರ ಅವರು ಉದ್ಯೋಗಕ್ಕಾಗಿ ಧಾರವಾಡದಲ್ಲಿ ಬಂದು‌ ನೆಲೆಸಿದ್ದರು. ಇದೀಗ ಡೆಡ್ಲಿ ಕೊರೋನಾ ಕಾಟಕ್ಕೆ ಇಡೀ ಕುಟುಂಬವೇ ನಾಶವಾಗಿದೆ. ಉಪನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು