
ಬೆಂಗಳೂರು(ಜು. 24) ಸೋಶಿಯಲ್ ಮೀಡಿಯಾದಲ್ಲಿ ಈ ಪ್ರಪಂಚಕ್ಕೆ ಗುಡ್ ಬೈ ಎಂದು ಹೇಳಿ ಶಾಕಿಂಗ್ ನ್ಯೂಸ್ ನೀಡಿದ್ದ ಬಿಗ್ ಬಾಸ್ ಜಯಶ್ರೀ ನಂತರ ಸ್ನೇಹಿತರ ಕಮೆಂಟ್ ಗಳು, ಭರವಸೆ ಮಾತಿನಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಆದರೆ ಈಗ ಮತ್ತೆ ಫೇಸ್ ಬುಕ್ ಲೈವ್ ಬಂದು ನನಗೆ ಬದುಕಲು ಇಷ್ಟವಿಲ್ಲ ಸಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಆಸ್ಪತ್ರೆಯಿಂದಲೇ ಫೇಸ್ ಲೈವ್ ವಿಡಿಯೋ ಅಪ್ಲೋಡ್ ಮಾಡಿದ ನಟಿ ಜಯಶ್ರೀ ನನಗೆ ಬದಕಲು ಇಷ್ಟವಿಲ್ಲ ನಾನು ಸಾಯಬೇಕು ಎಂದು ಹೇಳಿ ವಿಡಿಯೋ ಕಟ್ ಮಾಡಿದ್ದಾರೆ. ಅಭಿಮಾನಿಗಳು ಮತ್ತು ಹಿತೈಷಿಗಳು ಕಮೆಂಟ್ ಮಾಡಿದ್ದರೂ ನಟಿ ಪ್ರತಿಕ್ರಿಯೆ ನೀಡಿಲ್ಲ.
ಈ ಒಂದು ಕಾರಣಕ್ಕೆ ಕಿಚ್ಚ ಸುದೀಪ್ ಭೇಟಿ ಮಾಡಬೇಕು ಎಂದಿದ್ದ ಜಯಶ್ರೀ
ಡಿಪ್ರೆಶನ್ ನಿಂದ ಬಳಲುತ್ತಿರುವ ನಟಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು ಎನ್ನಲಾಗಿದೆ. ಬಿಗ್ ಬಾಸ್ ಜಯಶ್ರೀ ತಮ್ಮ ಮನಸಿನಲ್ಲಿ ಆಸೆಯೊಂದನ್ನು ಇಟ್ಟುಕೊಂಡಿದ್ದು ಕಿಚ್ಚ ಸುದೀಪ್ ರ ಬಳಿ ಮಾತನಾಡಬೇಕು ಎಂದು ಹೇಳಿದ್ದರು.
ಜಯಶ್ರೀ ಮಾನಸಿಕ ಸ್ಥಿತಿ ಬಗ್ಗೆ ಸುವರ್ಣ ನ್ಯೂಸ್ ಗೆ ಜಯಶ್ರೀ ಸ್ನೇಹಿತೆ ಮಾಹಿತಿ ನೀಡಿದ್ದರು. ಆಸ್ಪತ್ರೆ ಶುಲ್ಕ ಭರಿಸಲು ಕಿಚ್ಚನಿಂದ ಸಹಾಯ ಬೇಡುತ್ತಿದ್ದಾರೆ ಎನ್ನಲಾಗಿತ್ತು. ಈಗ ನಟಿ ಫೆಸ್ ಬುಕ್ ಲೈವ್ ನಲ್ಲೇ ಹೀಗೆ ಹೇಳಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ