2000 ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ (ಜ.20): 2000 ಸಾವಿರ ಮುಖ ಬೆಲೆಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಬಂಧಿತರನ್ನು ಶೇಖ್ ಹಿದಾಯತ್ ರಾಮಕೃಷ್ಣಾ ಹೆಗಡೆ ನಗರ ಬೆಂಗಳೂರು,ದಾವೂದ್ ವಸೀಂ ಶಾಂತಿ ನಗರ ರಾಮಕೃಷ್ಣ ಹೆಗಡೆ ನಗರ ಬೆಂಗಳೂರು ಹಾಗೂ ಜಿ ಕೆ ಶಿವಾ ಚಿಂತಾಮಣಿ ತಾಲೂಕಿನ ಗಾಜಲಹಳ್ಳಿ ಎಂದು ತಿಳಿದು ಬಂದಿದೆ.
ಸದ್ಯ ಬಂಧಿತರಿಂದ 2 ಸಾವಿರ ಮುಖ ಬೆಲೆಯ 230 ನೋಟುಗಳ 4 ಲಕ್ಷ ಮೌಲ್ಯದ 9BR381891 ಕ್ರಮ ಸಂಖ್ಯೆಯ ನೋಟುಗಳನ್ನು ಹಾಗೂ 2 ಸಾವಿರ ಮುಖ ಬೆಲೆಯ ಗಾಂಧೀಜಿ ಭಾವ ಚಿತ್ರವಿರುವ 3170 ನೋಟುಗಳ ಒಟ್ಟು 63,40,000 ಬೆಲೆಯ ಖೋಟಾ ನೋಟುಗಳು.ಸ್ಯಾಟ್‌ಲೈಟ್ ಭಾವಚಿತ್ರವಿರುವ 3050 ನೋಟುಗಳ 61.00,000 ಲಕ್ಷ ಬೆಲೆಯ ನೋಟುಗಳನ್ನು ಹಾಗೂ ಆರೋಪಿಗಳನ್ನು ಚಿಂತಾಮಣಿ ನಗರದ ಗಾಂಧೀನಗರದಿಂದ ಊಲವಾಡಿ ಗ್ರಾಮಕ್ಕೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಮನೆಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವರಿಷ್ಠಾಧಿಕಾರಿ ಡಿಎಲ್ ನಾಗೇಶ್ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.
ಕಪ್ಪು ಹಣ ತಂದು,ಬಡವರ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ: ಎಚ್.ಕೆ. ಪಾಟೀಲ್
ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ತಂದು ಬಡವರ ಬ್ಯಾಂಕ್ ಖಾತೆಗೆ .15 ಲಕ್ಷ ಜಮೆ ಮಾಡುತ್ತೇವೆ ಎಂದಿದ್ದರು. ಜಮೆ ಮಾಡಿದ್ದಾರೆಯೇ? ನೋಟು ಅಮ್ಯಾನೀಕರಣ ಮಾಡಿದ್ದರೂ ಕಪ್ಪು ಹಣ ನಿಂತಿಲ್ಲ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ದೂರಿದರು.
Bengaluru: 1 ಪೀಸ್ ಕಬಾಬ್ ಕಮ್ಮಿಕೊಟ್ಟ ಹೋಟೆಲ್ ಮಾಲೀಕನಿಗೆ ಥಳಿತ
ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದರು. ಯುವಕರಿಗೆ ಎಲ್ಲಿ ಉದ್ಯೋಗ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲ್ಪಿಸಿದ್ದು, ಕಾಂಗ್ರೆಸ್ ಸರ್ಕಾರ. ಈ ಭಾಗದ 41 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆಂಬ ಪಣತೊಡಬೇಕು ಎಂದರು.
RAMANAGARA: ಲಂಚ ಪ್ರಕರಣ; 15 ದಿನಗಳಿಂದ ನಾಪತ್ತೆಯಾಗಿರುವ ಮಾಗಡಿ ತಹಶೀಲ್ದಾರ್
ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ ರಾಠೋಡ್, ಮುಖಂಡರಾದ ಮಂಜುನಾಥ, ರಾಜಶೇಖರ ಹಿಟ್ನಾಳ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಮುಖಂಡರಾದ ದೀಪಕ್ ಸಿಂಗ್, ವೆಂಕಟರಾವ್ ಘೋರ್ಪಡೆ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್ ಇಮಾಮ್, ಎಲ್. ಸಿದ್ದನಗೌಡ, ಗುಜ್ಜಲ ರಘು, ಐಗೋಳ್ ಚಿದಾನಂದ ಮತ್ತಿತರರಿದ್ದರು. 17 ಎಚ್‌ಪಿಟಿ11- ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು.