Ramanagara: ಲಂಚ ಪ್ರಕರಣ; 15 ದಿನಗಳಿಂದ ನಾಪತ್ತೆಯಾಗಿರುವ ಮಾಗಡಿ ತಹಶೀಲ್ದಾರ್

By Ravi JanekalFirst Published Jan 20, 2023, 2:57 PM IST
Highlights

ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪ್ರತಿಜ್ಞೆ ಮಾಡಿ ಕೆಲಸಕ್ಕೆ ಸೇರಿಕೊಳ್ಳುವ ಅಧಿಕಾರಿಗಳು ಬಳಿಕ ಆಣೆ ಪ್ರಮಾಣ ಎಲ್ಲವನ್ನು ಮರೆತು ಹಣ ಮಾಡಲು ಮುಂದಾಗುತ್ತಾರೆ. ಕಳೆದ 15 ದಿನಗಳಿಂದ ಮಾಗಡಿ ತಹಸೀಲ್ದಾರ್ ಲಂಚ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ತಹಸೀಲ್ದಾರ್ ಶ್ರೀನಿವಾಸ್‌ ನಾಪತ್ತೆಯಾಗಿದ್ದಾರೆ.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಜ.20) : ಸರ್ಕಾರಿ ಕೆಲಸ ದೇವರ ಕೆಲಸ ಎಂದು ಪ್ರತಿಜ್ಞೆ ಮಾಡಿ ಕೆಲಸಕ್ಕೆ ಸೇರಿಕೊಳ್ಳುವ ಅಧಿಕಾರಿಗಳು ಬಳಿಕ ಆಣೆ ಪ್ರಮಾಣ ಎಲ್ಲವನ್ನು ಮರೆತು ಹಣ ಮಾಡಲು ಮುಂದಾಗುತ್ತಾರೆ. ಕಳೆದ 15 ದಿನಗಳಿಂದ ಮಾಗಡಿ ತಹಸೀಲ್ದಾರ್ ಲಂಚ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ತಹಸೀಲ್ದಾರ್ ಶ್ರೀನಿವಾಸ್‌ ನಾಪತ್ತೆಯಾಗಿದ್ದಾರೆ.

ಹೌದು, ರಾಮನಗರ(Ramanagar) ಜಿಲ್ಲೆ ಮಾಗಡಿ ತಾಲೂಕಿನ ತಹಶಿಲ್ದಾರ್(Tahsildar) ಕಳೆದ ಮೂರು ವರ್ಷಗಳಿಂದ ಮಾಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಜನವರಿ 3 ರ ಸಂಜೆ ರಾಮನಗರ ಲೋಕಾಯುಕ್ತ ಅಧಿಕಾರಿಗಳಿಂದ ಮಾಗಡಿ ತಹಸೀಲ್ದಾರ್ ಆವರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಬ್ಬರಿಂದ 60 ಸಾವಿರ ಬೇಡಿಕೆ ಇಟ್ಟಿದ್ದ ಮುಂಗಡವಾಗಿ 20 ಸಾವಿರ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ಮಂಜುನಾಥ್.

ಕಾನೂನು, ಸುವ್ಯವಸ್ಥೆ ಪೊಲೀಸರ ವಿರುದ್ಧದ ಲಂಚದ ಆರೋಪಕ್ಕೆ ಕಡಿವಾಣ ಹಾಕಲು Bodyworn Camera ಬಳಕೆ

ಅಂದಹಾಗೆ ಸಾರ್ವಜನಿಕರ ಜಮೀನಿನ ಪ್ರಕರಣ ಒಂದು ಮಾಗಡಿ ತಹಸಿಲ್ದಾರ್ ಕೋರ್ಟ್ ನಲ್ಲಿನ ಇತ್ಯರ್ಥ ಮಾಡಿಕೊಡುವುದಾಗಿ ಅರ್ಜಿದಾರನಿಗೆ ಪುಸಲಾಯಿಸಿದ್ದ ಮಧ್ಯವರ್ತಿ ಮಂಜುನಾಥ್. ಜಮೀನಿನ ವ್ಯಾಜ್ಯವನ್ನು ನಿಮ್ಮ ಕಡೆ ಮಾಡಿಕೊಡಬೇಕಾದರೆ, ತಹಶಿಲ್ದಾರ್  ಸಾಹೇಬರಿಗೆ ಹಣ ನೀಡಬೇಕು ಎಂದು ಹೇಳಿದ್ದ. ಹಾಗಾಗಿ ಲೋಕಾಯುಕ್ತ ಅಧಿಕಾರಿಗಳು ಅಂದು ಸಂಜೆ ತಹಸಿಲ್ದಾರ್ ಶ್ರೀನಿವಾಸ್ ಪ್ರಸಾದ್(Tahsildar srinivas prasad) ಜೊತೆ ಅಂದೆ ಮಾತನಾಡಿದ್ದಾರೆ. ಅಂದಿನಿಂದ ತಹಶೀಲ್ದಾರ್ ಕಚೇರಿಗೆ ಬಾರದೆ ನಾಪತ್ತೆ ಆಗಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದಿರುವ ಆರೋಪಿ ಮಂಜುನಾಥ್ ಜೊತೆಗೆ ಮಾಗಡಿ ತಹಶೀಲ್ದಾರ್ ಪರಮಾಪ್ತ ಎಂಬುದು ಎಲ್ಲರಿಗೂ ತಿಳಿದಿತ್ತು. ಹಾಗಾಗಿ ಮಂಜುನಾಥ್ ಬಂಧನವಾಗುತ್ತಿದ್ದಂತೆ ತಹಶೀಲ್ದಾರ್ ರಾಮನಗರ ಜಿಲ್ಲಾಧಿಕಾರಿಗಳಿಗೆ ರಜೆ ಬೇಕು ಎಂದು ಪೋನ್ ಮೂಲಕ ಸಂದೇಶ ರವಾನಿಸಿ ಅಂದಿನಿಂದ ಇಲ್ಲಿಯ ತನಕ ಫೋನ್ ಹಾಗೂ ವಾಟ್ಸಪ್ ಕರೆಗಳನ್ನು ಬಂದ್ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಆದರೆ ಅವರನ್ನು ಹುಡುಕುವ ಯಾವುದೇ ಕೆಲಸ ನಡೆಯುತ್ತಿಲ್ಲ.

ಇನ್ನೂ ತಹಸೀಲ್ದಾರ್ ಲ್ಯಾಪ್ ಟಾಪ್ ಅನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಂಜುನಾಥ್ ಸಂಪರ್ಕದಲ್ಲಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಕೇವಲ ತಹಸೀಲ್ದಾರ್ ಮೇಲೆ ಗುಮಾನಿ ಅಷ್ಟೇ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಲಂಚಾವತಾರ, ಮಂಚಾವತಾರ ಸರ್ಕಾರ: ಡಿ.ಕೆ.ಶಿವಕುಮಾರ್‌

ಇನ್ನೂ ಕಳೆದ 15 ದಿನಗಳಿಂದ ಮಾಗಡಿ ತಹಶಿಲ್ದಾರ್ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯ ನಡೆಯದೆ ಸಾರ್ವಜನಿಕರು ತಮ್ಮ ತಮ್ಮ ಕೆಲಸಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಂದಿನಿಂದ ರಾಮನಗರ ತಹಶೀಲ್ದಾರ್ ರವರನ್ನು ಹೆಚ್ಚುವರಿಯಾಗಿ ಮಾಗಡಿ ತಾಲೂಕಿನಲ್ಲಿ‌ ಕರ್ತವ್ಯ ಮಾಡುವಂತೆ ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ಹೊರಡಿಸಿದ್ದಾರೆ.

click me!