ರಾಜ್ಯ ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಆಂಜನೇಯ ಟೆಂಪಲ್ ಬಳಿಯಲ್ಲಿರುವ ಮನೆಯಲ್ಲಿದ್ದ ಗುತ್ತಿಗೆದಾರ, ಆತನ ತಾಯಿ ಮತ್ತು ತಂಗಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಬೆಂಗಳೂರು (ಡಿ.20): ಕಾಂಟ್ರ್ಯಾಕ್ಟರ್ ಕುಟುಂಬದವರನ್ನು ಸಮಾಜದಲ್ಲಿ ಶ್ರೀಮಂತರು ಎಂದು ನೋಡಲಾಗುತ್ತದೆ. ಆದರೆ, ಕೋವಿಡ್ ಕಾಣಿಸಿಕೊಂಡ ನಂತರ ಎಲ್ಲ ಕಾಂಟ್ರ್ಯಾಕ್ಟರ್‌ಗಳು ಕೂಡ ನಷ್ಟವನ್ನು ತಾಳಲಾರದೇ ಆತ್ಮಹತ್ಯೆ ದಾರಿ ಹಿಡಿದ ಹಲವು ಘಟನೆಗಳು ನಡೆದಿವೆ. ಈಗ ರಾಜ್ಯ ರಾಜಧಾನಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಆಂಜನೇಯ ಟೆಂಪಲ್ ಬಳಿಯಲ್ಲಿರುವ ಮನೆಯಲ್ಲಿದ್ದ ಗುತ್ತಿಗೆದಾರ, ಆತನ ತಾಯಿ ಮತ್ತು ತಂಗಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು (ತಾಯಿ, ಮಗ ಮತ್ತು ಮಗಳು) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಮೇಲ್ನೋಟಕ್ಕೆ ವಿಷಸೇವೆಸಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣತ್ತಿದೆ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಸದ್ಯ ಮೂರು ಮೃತದೇಹವನ್ನು ಪೊಲೀಸರು ರಾಮಯ್ಯ ಆಸ್ಪತ್ರೆ ಗೆ ರವಾನೆ ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿ ನಿದ್ರೆಯಲ್ಲಿದ್ದ ಪತ್ನಿ, ನಾಲ್ವರು ಮಕ್ಕಳ ಕತ್ತು ಸೀಳಿ ಕೊಂದ ತಂದೆ!
ಮಕ್ಕಳಿಗೆ ಮದುವೆ ಆಗಿರಲಿಲ್ಲ: ತಾಯಿ ಯಶೋಧ (72), ಮಗಳು ಸುಮನ್ ಗುಪ್ತಾ (32) ಹಾಗೂ ಮಗ ನರೇಶ್ ಗುಪ್ತಾ (36) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇನ್ನು ತಾಯಿ ಜೊತೆಯಲ್ಲಿದ್ದ ಇಬ್ಬರು ಮಕ್ಕಳಿಗೂ ಮದುವೆ ಯಾಗಿರಲಿಲ್ಲ. ಒಂದೇ ಮನೆಯಲ್ಲಿ ವಾಸವಾಗಿದ್ದ ಮೂವರು. ಮಗ ನರೇಶ್ ಗುಪ್ತಾ ಕಾಂಟ್ರಾಕ್ಟ್ ಕೆಲಸವನ್ನು ಮಾಡುತ್ತಿದ್ದನು. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎರಡು ದಿನದ ಹಿಂದೆಯೇ ವಿಷ ಸೇವನೆ ಶಂಕೆ: ಕಳೆದ ಎರಡು ದಿನಗಳ ಹಿಂದೆಯೇ ಮೂವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಮೂವರು ಪೋನ್ ರಿಸಿವ್ ಮಾಡ್ತಾ ಇರಲಿಲ್ಲ. ಮತ್ತೊಬ್ಬ ಮಗಳು ಮೂವರಿಗೂ ಕಾಲ್ ಮಾಡಿದರೂ ರಿಸೀವ್ ಮಾಡ್ತಾ ಇರಲಿಲ್ಲ. ಮನೆಯ ಬಳಿ ಹೋಗಿ ಪರಿಶೀಲನೆ ನಡೆಸಿದ ವೇಳೆ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಇನ್ನು ನರೇಶ್ ಗುಪ್ತ ಕಂಟ್ರಾಕ್ಟರ್ ಆಗಿದ್ದು, ತೀವ್ರ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇನ್ನು ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಬಗ್ಗೆ ಪೊಲೀಸರ ಮಾಹಿತಿ ನೀಡಿದ್ದಾರೆ.
7ನೇ ಮಹಡಿಯಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ!
ಸಾವಿಗೂ ಮುನ್ನ ಇನ್ನೊಬ್ಬ ಮಗಳೊಂದಿಗೆ ಮೂವರ ಮಾತು: ಸಾವನ್ನಪ್ಪಿದ ಯಶೋಧಾ ಗುಪ್ತಾ ಅವರಿಗೆ ಸುಮನ್ ಗುಪ್ತಾ, ಅಪರ್ಣಾ ಗುಪ್ತಾ ಹಾಗೂ ನರೇಶ್ ಗುಪ್ತಾ ಎಂಬ ಮೂವರು ಮಕ್ಕಳಿದ್ದರು. ಕಳೆದ ನಾಲ್ಕು ತಿಂಗಳಿನಿಂದ ಮಹಾಲಕ್ಷ್ಮಿ ಲೇಔಟ್ ನಲ್ಲಿ ವಾಸವಾಗಿದ್ದರು. ಮಹಾಲಕ್ಷ್ಮಿ ಲೇಔಟ್ ನ ಏಕಾಂಗ್ಷ್ ಅಪಾರ್ಟ್ಮೆಂಟ್ ನ ಫ್ಲ್ಯಾಟ್‌ನಲ್ಲಿ ಇದ್ದರು. ತಾಯಿ ಯಶೋಧಾ ಮಕ್ಕಳಾದ ಸುಮನ್ ಗುಪ್ತಾ ಹಾಗೂ ಗುತ್ತಿಗೆದಾರ ನರೇಶ ಗುಪ್ತಾನ ಜೊತೆ ವಾಸವಾಗಿದ್ದರು. ಶನಿವಾರ ಇಡೀ ಮನೆಯವರು ಅಪರ್ಣಾ ಜೊತೆ ಫೋನ್ ನಲ್ಲಿ ಮಾತನ್ನಾಡಿದ್ದರಂತೆ. ಅದಾದ ಮೇಲೆ ಯಾರೂ ಫೋನನ್ನ ಪಿಕ್ ಮಾಡಿಲ್ಲ. ಬಂದು ನೋಡಿದಾಗ ಮೂವರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾವಿಗೆ ಹಣಕಾಸಿನ ಸಮಸ್ಯೆ ಕಾರಣವಾಗಿದೆ ಎಂಬ ಮಾಹಿತಿ ಬಯಲಾಗಿದೆ.