ಕಲಬುರಗಿಯಲ್ಲಿ ಭೀಕರ ಅಪಘಾತಕ್ಕೆ 3 ಬಲಿ

By Gowthami K  |  First Published Jul 9, 2022, 7:08 AM IST

ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೆ ಮೂವರು ಮೃತಪಟ್ಟಿರುವ ದಾರುಣ ಘಟನೆ  ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ  ಕಟ್ಟಿಸಂಗಾವಿ ಗ್ರಾಮದ ಭೀಮಾ ನದಿ ಬ್ರೀಡ್ಜ್ ಬಳಿ ನಡೆದಿದೆ.


ಕಲಬುರಗಿ (ಜು.9): ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೆ ಮೂವರು ಮೃತಪಟ್ಟಿರುವ ದಾರುಣ ಘಟನೆ  ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ  ಕಟ್ಟಿಸಂಗಾವಿ ಗ್ರಾಮದ ಭೀಮಾ ನದಿ ಬ್ರೀಡ್ಜ್ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು  ಆಕಾಶ್ ಬಡಿಗೇರ್ (21), ಶೀವು ಮ್ಯಾಗೇರಿ (21) ಮತ್ತು ಲಕ್ಷ್ಮಣ್ ಮಲವಾಡಿ (18)  ಎಂದು ಗುರುತಿಸಲಾಗಿದೆ.  ಮೃತರು ಜೇವರ್ಗಿ ತಾಲೂಕಿನ ಎಸ್ ಎನ್ ಹಿಪ್ಪರಗಿ ಗ್ರಾಮದವರು ಎನ್ನಲಾಗಿದೆ.  

UTTARA KANNADA MURDER; ಪತ್ನಿ ಮಗನನ್ನು ಭೀಕರವಾಗಿ ಕಡಿದು ಕೊಂದ ತಂದೆ!

Tap to resize

Latest Videos

ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದು ಬೈಕ್ ಡಿಕ್ಕಿ ಹೊಡೆದ  ಪರಿಣಾಮ ಈ ದುರಂ ತ ನಡೆದಿದೆ ಡಿಕ್ಕಿ ರಭಸಕ್ಕೆ ಬೈಕ್ ಸವಾರರ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.  ಮೃತರು ನಾಗಾವಿ ಯಲ್ಲಮ್ಮ ದೇಗುಲದಲ್ಲಿ‌ ಪೂಜೆ ಮುಗಿಸಿಕೊಂಡು ಬಾಡೂಟ ಮಾಡಿ ವಾಪಾಸ್ ಆಗುತ್ತಿದ್ದರು ಎಂದು ತಿಳಿದುಬಂದಿದೆ. ಕಲಬುರಗಿ ಸಂಚಾರಿ 1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!