ವಂಚನೆ ಪ್ರಕರಣ: ಸಚಿವ ಶ್ರೀರಾಮುಲು ಆಪ್ತನಿಗೆ ನ್ಯಾಯಾಂಗ ಬಂಧನ

By Suvarna NewsFirst Published Sep 1, 2021, 8:17 PM IST
Highlights

* ಸಚಿವ ಶ್ರೀರಾಮುಲು ಹೆಸರಲ್ಲಿ ವಂಚನೆ ಪ್ರಕರಣ
* ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ
 * ಮೂರು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ ಕೋರ್ಟ್

ಬೆಂಗಳೂರು, (ಸೆ.01): ಸಚಿವ ಶ್ರೀರಾಮುಲು ಹೆಸರಲ್ಲಿ ವಂಚನೆ ಮಾಡಲು ಯತ್ನಿಸಿದ ಆರೋಪದ ಮೇಲೆ ಅರೆಸ್ಟ್ ಆಗಿರುವ ಆರೋಪಿಗೆ ನ್ಯಾಯಾಂಗ ಬಂಧನವಾಗಿದೆ.

 ಸಚಿವ ಶ್ರೀರಾಮುಲು ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿ ಧರ್ಮತೇಜ್​​ನನ್ನ ಕೊಡಗೇಹಳ್ಳಿ ಪೊಲೀಸರು ಇಂದು (ಸೆ.01) ಕೋರ್ಟ್​ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಮೂರು ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಸಚಿವ ಶ್ರೀರಾಮುಲು ಆಪ್ತನನ್ನು ಬಂಧಿಸಿದ ಪೊಲೀಸ್ರು

ಧರ್ಮತೇಜ್ ವಿರುದ್ಧ ತಾನು ಶ್ರೀರಾಮುಲು ಅವರ ಆಪ್ತನೆಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಬಾಗಲೂರು ಮೂಲದ ರಿಯಲ್ ಎಸ್ಟೇಟ್ ಉದ್ಯೋಗಿಯಾಗಿರುವ ಆರೋಪಿ ಧರ್ಮತೇಜ್ ನ ವಿರುದ್ಧ ಪ್ರದೀಪ್​ ಎನ್ನುವರು ದೂರು ನೀಡಿದ್ದರು.

ಈ ದೂರಿನ ಮೇಲೆ ಕೊಡಿಗೆಹಳ್ಳಿ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದರು. ಸಚಿವ‌ ಶ್ರೀರಾಮುಲು ಜತೆ ಕಾಣಿಸಿಕೊಳ್ಳುತ್ತಿದ್ದ ಆರೋಪಿ ಧರ್ಮತೇಜ್, ಮತ್ತೆ ಸಚಿವ ಶ್ರೀರಾಮುಲು ಹೆಸರು ಬಳಕೆ ಮಾಡಿಕೊಂಡು ವಂಚನೆಗೆ ಯತ್ನ ಮಾಡಿರುವ ಆರೋಪದ ಮೇಲೆ ಧರ್ಮತೇಜ್ ವಿರುದ್ಧ ಐಪಿಸಿ ಸೆಕ್ಷನ್ 420, 406, 506 ಅಡಿ ಪ್ರಕರಣ ದಾಖಲಾಗಿದೆ.

click me!