* ಮ್ಯಾಟ್ರಿಮೋನಿಯಲ್ಲಿ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿ ಬಂಧನ
* ಹಣ ಒಡವೆ ಪಡೆದು ಮದುವೆಯಾಗದೇ ನಂಬರ್ ಬ್ಲಾಕ್ ಮಾಡ್ತಿದ್ದ
* ರಮೇಶ್ ವಿಜಯ್ ಹೀಗೆ ಬೇರೆ ಬೇರೆ ಹೆಸರಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡ್ತಿದ್ದ
* 30 ವರ್ಷ ಮೇಲ್ಪಟ್ಟ ವಿಚ್ಛೇದನ ಆಗಿರುವ ಯುವತಿಯರನ್ನ ಟಾರ್ಗೆಟ್ ಮಾಡ್ತಿದ್ದ
ಬೆಂಗಳೂರು(ಸೆ. 01) ಮ್ಯಾಟ್ರಿಮೋನಿ ಸೈಟ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಆರೋಪಿಯನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.
ಹೆಣ್ಣು ಮಕ್ಕಳಿಂದ ಹಣ ಒಡವೆ ಪಡೆದು ಮದುವೆಯಾಗದೇ ನಂಬರ್ ಬ್ಲಾಕ್ ಮಾಡ್ತಿದ್ದ. ರಮೇಶ್, ವಿಜಯ್ ಹೀಗೆ ಬೇರೆ ಬೇರೆ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಜಗನ್ನಾಥ್ (34) ಬಂಧನವಾಗಿದೆ.
30 ವರ್ಷ ಮೇಲ್ಪಟ್ಟ ವಿಚ್ಛೇದನ ಆಗಿರುವ ಯುವತಿಯರನ್ನ ಟಾರ್ಗೆಟ್ ಮಾಡಿ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದ. ಆಕ್ಸಿಡೆಂಟ್ ಆಗಿದೆ, ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗಿದೆ, ಸೈಟ್ ಖರೀದಿ ಮಾಡಲಿಕ್ಕೆ ಹಣ ಬೇಕು ಅಂತ ನೆಪ ಹೇಳಿ ಹಣ ಪಡೆದುಕೊಳ್ಳುತ್ತಿದ್ದ.
ಲೋಹಕ್ಕೆ ಚಿನ್ನದ ಲೇಪ ಮಾಡಿ ಸಾಲ ಪಡೆದಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ
ಹತ್ತು ಮಂದಿ ಯುವತಿಯರಿಗೆ ವಂಚಿಸಿರುವ ಆರೋಪಿ ಮೂಲತ: ಬಿಜಾಪುರ ಜಿಲ್ಲೆಯವನು. ಸಿವಿಲ್ ಎಂಜಿನಿಯರ್ ಅಂತ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ ವಿರುದ್ದ ಇದುವರೆಗೂ ಮೂರು ಯುವತಿಯರು ದೂರು ದಾಖಲಿಸಿದ್ದಾರೆ. ಬನಶಂಕರಿ, ಹೆಣ್ಣೂರು, ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಕಾರಿನಲ್ಲಿ ಆಕ್ಸಿಡೆಂಟ್ ಆಗಿದ್ದ ಪೊಟೊ ಬಳಸಿ ಹಣ ವಸೂಲಿ ಮಾಡಿದ್ದ ಮೊದಲೆರಡು ಬಾರಿ ಯುವತಿಯರನ್ನ ಭೇಟಿ ಆಗಿ ಮದುವೆಯಾಗುವುದಾಗಿ ನಂಬಿಸ್ತಿದ್ದ ನಂತರ ಬೇರೆ ಬೇರೆ ಕಾರಣ ಹೇಳಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಇಂಜಿನಿಯರ್ ಬಲೆಗೆ ಬಿದ್ದಿದ್ದಾನೆ.