ಸಿಂಧನೂರು: ಬಾಲ್ಯ ವಿವಾಹ ಪ್ರಕರಣ, ಮೂವರು ಅಪರಾಧಿಗಳಿಗೆ ಜೈಲು ಶಿಕ್ಷೆ

By Kannadaprabha News  |  First Published Jan 21, 2023, 11:30 PM IST

2017ರ ಜೂ.1ರಂದು ಬಾಲ್ಯ ವಿವಾಹ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರೊಂದಿಗೆ ಮದುವೆ ನಡೆಯುವ ಸ್ಥಳಕ್ಕೆ ಹೋಗಿ ಬಾಲ್ಯ ವಿವಾಹ ಆಗುವುದನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಿ ಪ್ರಕರಣ ದಾಖಲಿಸಿದ್ದ ಅಂದಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೀತಾ ಬಾಯಿ. 


ಸಿಂಧನೂರು(ಜ.21): ಬಾಲ್ಯ ವಿವಾಹ ಬಗ್ಗೆ ಸಾಕ್ಷ್ಯಾಧಾರಗಳು ಧೃಢಪಟ್ಟಿದ್ದರಿಂದ ನಗರದ ಪ್ರಥಮ ದರ್ಜೆಯ ಜೆಎಮ್‌ಎಫ್‌ಸಿ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ನಗರದ ಭಗೀರಥ ಕಾಲೋನಿಯ ಕಲ್ಯಾಣ ಮಂಟಪವೊಂದರಲ್ಲಿ 2017ರ ಜೂ.1ರಂದು ಬಾಲ್ಯ ವಿವಾಹ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಂದಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೀತಾ ಬಾಯಿ ಪೊಲೀಸರೊಂದಿಗೆ ಮದುವೆ ನಡೆಯುವ ಸ್ಥಳಕ್ಕೆ ಹೋಗಿ ಬಾಲ್ಯ ವಿವಾಹ ಆಗುವುದನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Latest Videos

undefined

BIG3 ಹಸಿದವರ ಹೊಟ್ಟೆ ತುಂಬಿಸೋ ಕಾಯಕಯೋಗಿ: ಚಿನ್ನಾಭರಣದ ಬ್ಯಾಗ್ ಮರಳಿ‌ಸಿ ಎಲ್ಲರ ಮನ ಗೆದ್ದ ಸಾರಿಗೆ ಸಿಬ್ಬಂದಿ

ನಗರ ಠಾಣೆಯ ಅಂದಿನ ಪಿಎಸ್‌ಐ ಜಗದೀಶ ಪ್ರಕರಣ ದಾಖಲಿಸಿಕೊಂಡು ತನಿಖೆಯ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸೂಕ್ತ ಸಾಕ್ಷ್ಯ ಆಧಾರಗಳ ಜೊತೆಗೆ ವಾದವನ್ನು ಆಲಿಸಿದ ಪ್ರಥಮ ದರ್ಜೆಯ ಜೆಎಮ್‌ಎಫ್‌ಸಿ ಸಿವಿಲ್‌ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಆರೋಪಿ ಮಲ್ಲೇಶ ಮತ್ತು ಇತರ ಇಬ್ಬರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರು.10 ಸಾವಿರ ದಂಡ ಮತ್ತು ನೊಂದ ಬಾಲಕಿಗೆ ರು.25 ಸಾವಿರ ಪರಿಹಾರ ಧನ ನೀಡುವಂತೆ ಆದೇಶಿಸಿ ಜ.17ರಂದು ತೀರ್ಪು ಪ್ರಕಟಿಸಿದೆ. ಸರ್ಕಾರಿ ಅಭಿಯೋಜಕರಾದ ಮಾರುತಿ. ಕೆ ಸೂಕ್ತ ಸಾಕ್ಷ್ಯದಾರಗಳೊಂದಿಗೆ ವಾದ ಮಂಡಿಸಿದ್ದರು.

click me!