
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಜ.21): ಸಾರಿಗೆ ಬಸ್ ನಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರಿಂದ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್. ರಾತ್ರಿ ವೇಳೆ ಚಾಕು ತೋರಿಸಿ ರಾಬರಿ ಮಾಡೋದು, ಬೆಳಗಿನ ಸಮಯದಲ್ಲಿ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ಗಳನ್ನ ಕಳ್ಳತನ ಮಾಡೋದೆ ಅವರ ಕಾಯಕ. ಚನ್ನಪಟ್ಟಣದಲ್ಲಿ ಮೊಬೈಲ್ ಗಳನ್ನ ಅಬೇಸ್ ಮಾಡಲು ಮೈಸೂರಿನಿಂದ ಬಂದಿದ್ದ ವೇಳೆ ಖಾಕಿ ಕೈಯಲ್ಲಿ ಅಂದರ್ ಆಗಿದ್ದಾರೆ. ಚನ್ನಪಟ್ಟಣ ಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ರಾತ್ರಿ ವೇಳೆ ಲಾರಿಗಳನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳನ್ನ ತೋರಿಸಿ ರಾಬರಿ ಮಾಡೋದು ಹಾಗೂ ಹಗಲು ವೇಳೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಮೊಬೈಲ್ ಗಳನ್ನ ಅಬೇಸ್ ಮಾಡೋ ಖತರ್ನಾಕ್ ಒಬ್ಬನನ್ನ ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಅಂದಹಾಗೆ ಮೈಸೂರಿನ ಉದಯಗಿರಿ ನಿವಾಸಿಗಳಾದ ಇಮ್ರಾನ್ ಪಾಷ, ತೌಶಿಫ್, ನಿಶಾದ್ ಪಾಷ, ನದೀಮ್ ಹಾಗೂ ಚಾಂದ್ ಪಾಷ ಎಂಬುವವರು ಮೊಬೈಲ್ ಗಳನ್ನ ಅಬೇಸ್ ಮಾಡೋದೆ ಕಾಯಕ. ಅದೇ ರೀತಿ ನೆನ್ನೆ ಮೈಸೂರಿನಿಂದ ಚನ್ನಪಟ್ಟಣಕ್ಕೆ ಕಾರಿನಲ್ಲಿ ಬಂದು ಬಸ್ ಗಳನ್ನ ಹತ್ತಿ ಪ್ರಯಾಣಿಕರ ಮೊಬೈಲ್ ಗಳನ್ನ ಅಬೇಸ್ ಮಾಡುತ್ತಿದ್ದರು. ಅದೇ ರೀತಿ ನೆನ್ನೆ ಸಹಾ ತಮ್ಮ ಕರಾಮತ್ತು ತೋರಿಸಲು ಮುಂದಾದ ವೇಳೆ ಚನ್ನಪಟ್ಟಣ ಪುರ ಠಾಣೆ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಇಮ್ರಾನ್ ಪಾಷ ಲಾಕ್ ಆದರೆ ತೌಶಿಫ್, ನಿಶಾದ್ ಪಾಷ, ನದೀಮ್ ಹಾಗೂ ಚಾಂದ್ ಪಾಷ ಎಸ್ಕೇಪ್ ಆಗಿದ್ದಾರೆ.
ಕಳ್ಳತನ ಬಳಿಕ ಪೊಲೀಸ್ ಠಾಣೆ ಪಕ್ಕದಲ್ಲೇ ವಾಸವಿದ್ದ, ಚೈನ್ ಸ್ನ್ಯಾಚ್ ಮಾಡಿ 20 ದಿನದಲ್ಲಿ 20 ಕೆ
ಅಂದಹಾಗೆ ಈ ಖತರ್ನಾಕ್ ಗಳು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬರುವ ಬಸ್ ನಿಲ್ದಾಣಗಳನ್ನೇ ಟಾರ್ಗೆಟ್ ಮಾಡಿಕೊಂಡು ಮೊಬೈಲ್ ಗಳನ್ನ ಅಬೇಸ್ ಮಾಡುತ್ತಾರೆ. ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಿ ಮೊಬೈಲ್ ಗಳನ್ನ ಕದ್ದು ಒಬ್ಬರಿಂದ ಒಬ್ಬರಿಗೆ ಎಕ್ಸೆಂಜ್ ಮಾಡುತ್ತಾರೆ. ಇದರಿಂದ ಕದ್ದವರು ಯಾರು ಎಂಬ ಅನುಮಾನ ಸಹಾ ಬರುವುದಿಲ್ಲ. ಇದೇ ರೀತಿ ಕಳೆದ ಹಲವು ತಿಂಗಳಿಂದ ಈ ಕಾಯಕವನ್ನ ಮಾಡಿಕೊಂಡು ಬಂದಿದ್ದಾರೆ.
ಅಂಕಲ್ ಆಫೀಸ್‌ಗೆ- ಆಂಟಿ ಟಾಕೀಸ್‌ಗೆ: ಮನೆಯಲ್ಲಿ ಮಕ್ಕಳ ಪರದಾಟ
ಇನ್ನು ಕದ್ದ ಮೊಬೈಲ್ ಗಳನ್ನ ಮೈಸೂರಿನ ಇರ್ಫಾನ್ ಎಂಬಾತನಿಗೆ ಕಡಿಮೆ ಬೆಲೆ ಮಾರುತ್ತಿದ್ದರು. ಇನ್ನು ಹಗಲು ವೇಳೆಯಲ್ಲಿ ಮೊಬೈಲ್ ಗಳನ್ನ ಅಬೇಸ್ ಮಾಡಿದ್ರೆ, ಇನ್ನು ರಾತ್ರಿ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಲಾರಿಗಳನ್ನ ಅಡ್ಡಗಟ್ಟಿ ಚಾಕು ತೋರಿಸಿ ರಾಬರಿ ಮಾಡುತ್ತಿದ್ದರು. ಇನ್ನು ಆರೋಪಿಗಳನ್ನ ನಾಲ್ಕು ಮೊಬೈಲ್ ಹಾಗೂ ಒಂದು ಚಾಕು ವಶಪಡಿಸಿಕೊಳ್ಳಲಾಗಿದ್ದು, ಎಸ್ಕೇಪ್ ಆಗಿರೋ ನಾಲ್ವರು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಪ್ರಯಾಣಿಕರ ಮೊಬೈಲ್ ಗಳನ್ನ ಅಬೇಸ್ ಮಾಡುತ್ತಿದ್ದ ಗ್ಯಾಂಗ್ ನ ಒಬ್ಬ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉಳಿದ ನಾಲ್ವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ