ಜಿಲ್ಲೆಯ ಹೊರವಲಯಗಳಲ್ಲಿ ಫುಲ್ ಆಕ್ಟೀವ್ ಆಗಿರೋ ಖಾಕಿ ಜಿಲ್ಲೆಯ ಹೊರ ಹಾಗೂ ಒಳ ಪ್ರವೇಶಿಸುವ ವಾಹನಗಳ ಮೇಲೆ ಹದ್ದಿನ ಕಣ್ಣನ್ನ ಇಟ್ಟಿದ್ದಾರೆ.. ಅರೆ ಇದ್ದಕ್ಕಿದ್ದಂತೆ ನಮ್ಮ ಪೊಲೀಸರು ಇಷ್ಟೊಂದು ಆಕ್ಟೀವ್ ಆಗಿದ್ದಾದ್ರು ಯಾಕೆ ಅಂತೀರಾ ಈ ರಿಪೋರ್ಟ್ ನೋಡಿ.
ವರದಿ: ಪುಟ್ಟರಾಜು.ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಆ.24): ಕಳೆದೊಂದು ದಿನದಿಂದ ಚಾಮರಾಜನಗರ ಜಿಲ್ಲಾ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓರ್ವನನ್ನ ತಡಕಾಡ್ತಯಿದ್ದಾರೆ. ಜಿಲ್ಲೆಯ ಹೊರವಲಯಗಳಲ್ಲಿ ಫುಲ್ ಆಕ್ಟೀವ್ ಆಗಿರೋ ಖಾಕಿ ಜಿಲ್ಲೆಯ ಹೊರ ಹಾಗೂ ಒಳ ಪ್ರವೇಶಿಸುವ ವಾಹನಗಳ ಮೇಲೆ ಹದ್ದಿನ ಕಣ್ಣನ್ನ ಇಟ್ಟಿದ್ದಾರೆ.. ಅರೆ ಇದ್ದಕ್ಕಿದ್ದಂತೆ ನಮ್ಮ ಪೊಲೀಸರು ಇಷ್ಟೊಂದು ಆಕ್ಟೀವ್ ಆಗಿದ್ದಾದ್ರು ಯಾಕೆ ಅಂತೀರಾ ಈ ರಿಪೋರ್ಟ್ ನೋಡಿ.
ಕಳೆದ ಕೆಲವು ತಿಂಗಳುಗಳ ಹಿಂದೆ ಚಾಮರಾಜನಗರ ಜೈಲಿನಿಂದ ಪ್ರಕರಣವೊಂದರ ಸಂಬಂದ ತಮಿಳುನಾಡಿನ ಈರೋಡ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು ಈ ವೇಳೆ ಊಟಕ್ಕೆ ನಿಲ್ಲಿಸಿದಾಗ ಮೂತ್ರ ಮಾಡುವ ನೆಪ ಹೇಳಿ ಇಬ್ಬರು ಕಾನ್ಸ್ ಟೇಬಲ್ ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಸುರೇಶ್ ಎಸ್ಕೇಪ್ ಆಗಿದ್ದ. ಆನಂತರ ಕವಲಂದೆ ರೈಲ್ವೆ ನಿಲ್ಧಾಣದಲ್ಲಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಅಂದಹಾಗೆ ನಿನ್ನೆ ಎಸ್ಕೇಪ್ ಆಗಿರುವ ಈ ಕಳ್ಳ ಸಾಮಾನ್ಯ ಕಳ್ಳ ಅಲ್ವೇ ಅಲ್ಲ.. ಸುರೇಶಾ ನಟೋರಿಯಸ್ ಚೈನ್ ಸ್ನ್ಯಾಚರ್. ಕೈಯಲ್ಲಿ ಸ್ಲೇಟ್ ಹಿಡ್ದು ಫೋಟೊಗೆ ಪೋಸು ಕೊಟ್ಟಿರುವ ಈತನನ್ನ ಒಮ್ಮೆ ದಿಟ್ಟಿಸಿ ನೋಡಿ.. ಈತನೇ ಈ ಕಥೆಯ ಸೆಂಟರ್ ಆಫ್ ಅಟ್ರಾಕ್ಷನ್ ಹೆಸ್ರು ಸುರೇಶ ಅಂತ.
Chikkamagaluru: ಅತ್ಯಾಚಾರ, ಕೊಲೆ ಖಂಡಿಸಿ ಕಾಫಿನಾಡಿನಲ್ಲಿ 28 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಒಳ್ಳೆ ಮಳ್ಳನ ತರ ಕ್ಯಾಮರ ಮುಂದೆ ನಿಂತಿರುವ ಈ ಕ್ರಿಮಿಯೆ ಇಂದು ಚಾಮರಾಜನಗರ ಜಿಲ್ಲಾ ಪೊಲೀಸರು ನಿದ್ದೆಗೆಡಿಸಿದ ಭೂಪ. ಒಂಟಿ ಮನೆ ಹಾಗೂ ಒಂಟಿ ಮಹಿಳೆಯರೇ ಈತನ ಟಾರ್ಗೆಟ್ ಹೊಂಚು ಹಾಕಿ ವಿವಾಹಿತೆರ ಕತ್ತಲ್ಲಿರುವ ಮಾಂಗಲ್ಯ ಸರವನ್ನ ಕಿತ್ತು ಪರಾರಿಯಾಗ್ತಯಿದ್ದ. ನಿನ್ನೆ ಸಹ ಚಾಮರಾಜನಗರದ ಶಿವಪುರ,ರದಲ್ಲಿ ಸರಗಳ್ಳತನಕ್ಕೆ ಯತ್ನಿಸಿ ವಿಫಲವಾಗಿದ್ರೆ. ಕಣ್ಣೇನಹಳ್ಳಿಯಲ್ಲಿ ಒಂಟಿ ಮಹಿಳೆಯ ಕತ್ತಿಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತು ಎಸ್ಕೇಪ್ ಆಗಿದ್ದ ಸಾಲ್ದು ಅಂತ ಸರಸಮಂಗಲದಲ್ಲಿ ಮಂಜುಳಾ ಎಂಬಾಕೆಯ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿ ಸರ ಕೀಳಲು ಯತ್ನಿಸಿದ ವೇಳೆ ಆಕೆಯ ಪತಿ ದೊಣ್ಣೆಯಿಂದ ಸರಗಳ್ಳ ಸುರೇಶನ ಮೇಲೆ ದಾಳಿ ಮಾಡಿದ್ದು ಈ ವೇಳೆ ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಇನ್ನು ಈ ಸುರೇಶ ಯಾರು ಈತ ಎಷ್ಟು ನಟೋರಿಯಸ್ ಎಂದು ನೋಡುವುದಾದ್ರೆ. ಸುರೇಶ ಇದೆ ಚಾಮರಾಜನಗರ ತಾಲೂಕಿನ ಮೇಘಲಹುಂಡಿ ಗ್ರಾಮದವ. ಈತನ ಮೇಲೆ ಏನಿಲ್ಲ ಅಂದ್ರು ಬರೋಬ್ಬರಿ 18ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣವಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಈತನನ್ನ ಸಂತೇಮರಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ರು ಜೆಸಿಯಿಂದ ರಿಲೀಸ್ ಆದ್ಮೇಲೆ ಈಗ ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರೆಸಿದ್ದು ಇಸ್ಪಿಟ್ ಹಾಗೂ ಮೋಜು ಮಸ್ತಿಗಾಗಿ ಸರಗಳ್ಳತನ ಮಾಡ್ತಾಯಿರೋದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಗ್ಯಾರಂಟಿಗಾಗಿ ರಸ್ತೆಯಲ್ಲಿ ಓಡಾಡುವವರಿಗೂ ಕಾಂಗ್ರೆಸ್ ಬರೆ: ಶಾಸಕ ಸುನಿಲ್ ಕುಮಾರ್
ಈತ ಕೇವಲ ಕರ್ನಾಟಕ ಅಷ್ಟೇ ಅಲ್ದೆ ನೆರೆಯ ರಾಜ್ಯ ತಮಿಳುನಾಡಿನಲ್ಲಿ ತನ್ನ ಕೈ ಚಳಕ ತೋರಿದ್ದು. ಒಂಟಿ ಮಹಿಳೆಯರ ಬಳಿ ಹೋಗಿ ಶುಂಠಿ ಬೆಳೆಯಲು ಜಮೀನು ಸಿಗುತ್ತಾ ಅಂತ ಪೀಠಿಕೆ ಹಾಕಿ ಬಳಿಕ ಸರಕಿತ್ತು ಪರಾರಿಯಾಗ್ತಯಿದ್ದ. ದುರಂತ ಅಂದ್ರೆ ಈತನು ಕೃತ್ಯಕ್ಕೆ ಬಳಸಿದ್ದ ಬೈಕ್ ಕೂಡ ಕಳ್ಳತನ ಮಾಡಿದ್ದು ಎಂಬುದು ಖಾಕಿ ತನಿಖೆಯಿಂದ ಬಯಲಾಗಿದ್ದು ಆರೋಪಿಯ ಸೆರೆಗಾಗಿ ಒಂದು ವಿಶೇಷ ತನಿಖಾ ತಂಡವನ್ನ ಎಸ್ ಪಿ ರಚನೆ ಮಾಡಿದ್ದು ಆದಷ್ಟು ಬೇಗ ಆರೋಪಿಯನ್ನ ಸೆರೆ ಹಿಡಿಯೋ ಆತ್ಮವಿಶ್ವಾಸವನ್ನ ವ್ಯಕ್ತ ಪಡಿಸಿದ್ದಾರೆ.