ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಖಾತೆಗಳನ್ನು ತೆರೆದು ಬಾಯಿಗೆ ಬಂದಹಾಗೆ ಮನಸೋ ಇಚ್ಛೆ ಅವಾಚ್ಯ ಪದ ಬಳಸಿ ಬೈದು ಬಚಾವ್ ಆಗುತ್ತಿದ್ದ ಮೂವರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಅ.26): ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಖಾತೆಗಳನ್ನು ತೆರೆದು ಬಾಯಿಗೆ ಬಂದಹಾಗೆ ಮನಸೋ ಇಚ್ಛೆ ಅವಾಚ್ಯ ಪದ ಬಳಸಿ ಬೈದು ಬಚಾವ್ ಆಗುತ್ತಿದ್ದ ಮೂವರು ಆರೋಪಿಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರು ಮಹಿಳೆಯರು, ರಾಜಕಾರಣಿಗಳು ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮಾಡುತ್ತಿದ್ದ ಮೂವರನ್ನು ಬಂಧಿಸಿ 5 ಮೊಬೈಲ್‌ಗಳನ್ನು ದಾವಣಗೆರೆ ಸೈಬರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿಸಿದ್ದು ಏಕೆ ಅದರ ವಿವರ ಇಲ್ಲಿದೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿ ವಿವಿಧ ಜಿಮೇಲ್ ಆಕೌಂಟ್‌ನಿಂದ ಚನ್ನಗಿರಿ ರಾಜಕೀಯ ಗಿಲ್ಟಿ ಶಿವ, ಚನ್ನಗಿರಿ ಪ್ರಚಂಡ, ಮಸಣಿಕೆರೆ ಚೌಡಮ್ಮ ಚನ್ನಗಿರಿ ರಾಯಲ್ ಬ್ರದರ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆಗಳನ್ನು ತೆರೆದು ಚನ್ನಗಿರಿಯ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳ ಬಳಸಿ ಪೋಸ್ಟ್ ಮಾಡುತ್ತಿದ್ದರು. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ 504, 506 ಐಪಿಸಿ & ಕಲಂ: 66 ಐಟಿ ಆಕ್ಟ್ -2000; ಕಲಂ 153, 504, 505 (2), 509, 354 (ಡಿ), ಐಪಿಸಿ ಜೊತೆ 67 ಐಟಿ ಆಕ್ಟ್ ಪ್ರಕಾರ ಪ್ರಕರಣಗಳು ದಾಖಲಾಗಿತ್ತು.
ಚಿಕ್ಕೋಡಿ: ಎಣ್ಣೆ ಏಟಲ್ಲಿ ಮನೆಗೆ ಕನ್ನ ಹಾಕ್ತಿದ್ದ ಖತರ್ನಾಕ್ ಖದೀಮರ ಬಂಧನ
ಈ ಬಗ್ಗೆ ದಾವಣಗೆರೆ ಸೈಬರ್ ಪೊಲೀಸರಿಂದ ಆಧುನಿಕ ತಂತ್ರಜ್ಞಾನವನ್ನು ಬಳಿಸಿ ಆರೋಪಿಗಳ ಪತ್ತೆ ಹಚ್ಚಿದ್ದಾರೆ. ನಂತರ ಜಿ-ಮೇಲ್ ಮತ್ತು ಫೇಸ್‌ಬುಕ್ ಕಂಪನಿಯವರಿಂದ ಮಾಹಿತಿಯನ್ನು ಪಡೆದುಕೊಂಡು ಆರೋಪಿಗಳ ಬಂಧಿಸಿ ಅವರಿಂದ 5 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಕೌಶಿಕ್ ಗೌಡ, (ಕುಳೆನೂರು) 2) ನಾರದಮುನಿ @ ಮುನಿ, (ಶೆಟ್ಟಿಹಳ್ಳಿ ) 3) ಶ್ರೀಕಾಂತ್, (ಅಜ್ಜಿಹಳ್ಳಿ) ಗೆ ಸೇರಿದ ಕಿಡಿಗೇಡಿಗಳಾಗಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವವರಿಗೆ ದಾವಣಗೆರೆ ಎಸ್ಪಿ ಎಚ್ಚರಿಕೆ: ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಅಶ್ಲೀಲ ಹಾಗೂ ಅವಾಚ್ಯ ಪದಗಳಲ್ಲಿ ನಿಂದಿಸುವ ಕಿಡಿಗೇಡಿಗಳ ಬಗ್ಗೆ ಪೊಲೀಸರ ನಿಗಾ ವಹಿಸಿದ್ದಾರೆ. ಯಾರಾದ್ರು ಸಾರ್ವಜನಿಕರು ಈ ಬಗ್ಗೆ ದೂರು ನೀಡಿದ್ರೆ ಸಮಾಜಘಾತುಕ ವ್ಯಕ್ತಿಗಳನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಸ್ಪಿ ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ.
ಗದಗ: ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ ಕೇಸ್, ಆರೋಪಿಗಳ ಸುಳಿವು ನೀಡಿದ ಪೊಲೀಸ್ ರ‍್ಯಾಂಬೊ..!
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶ್ರೀ ಮಂಜುನಾಥ ಪಿ.ಐ. ಸಿ.ಇ.ಎನ್ ಪೊಲೀಸ್ ಠಾಣೆ, ಚನ್ನಗಿರಿ ಠಾಣೆಯ ಶ್ರೀ ಮಧು ಪಿ.ಬಿ. ಪಿ.ಐ, ಶ್ರೀ ಪರಮೇಶ ಡಿ.ಜಿ. ಪಿ.ಎಸ್.ಐ. ಸಿ.ಇ.ಎನ್ ಪೊಲೀಸ್ ಠಾಣೆ, ಶ್ರೀ ಚಂದ್ರಶೇಖರ್ ಪಿ.ಎಸ್.ಐ. ಚನ್ನಗಿರಿ ಠಾಣೆ, ಶ್ರೀ ಚಂದ್ರಶೇಖರ್ ನಾಯ್ಕ ಪ್ರೊಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಉಮೇಶ್, ಶ್ರೀನಿವಾಸ, ಮಂಜುನಾಥ ಪ್ರಸಾದ್, ಚಂದ್ರಚಾರಿ, ನರೇಂದ್ರಸ್ವಾಮಿ, ರಂಗಪ್ಪ ಇವರುಗಳನ್ನು ಎಸ್ಪಿ ಸಿ.ಬಿ.ರಿಷ್ಯಂತ್ ಇವರನ್ನು ಶ್ಲಾಘಿಸಿರುತ್ತಾರೆ.