ತಾನು ಹುಡುಗಿಯೊಂದಿಗೆ ಸ್ನೇಹಿತನಾಗಿದ್ದೆ, ಅವರ ಹೆತ್ತವರು ಅವಳೊಂದಿಗೆ ಸ್ನೇಹಿತರಾಗಲು ಇಷ್ಟಪಡದ ಕಾರಣ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವ್ಯಕ್ತಿ ಹೇಳಿದ್ದರೂ ಆತ ಅದಕ್ಕೆ ಸಾಕ್ಷಿ ನೀಡದ ಕಾರಣ ಕೋರ್ಟ್ ಅದನ್ನು ಪರಿಗಣಿಸಿಲ್ಲ.
ಮುಂಬೈ: 15ರ ಹರೆಯದ ಬಾಲಕಿಗೆ ‘ಐಟಂ’ ಎಂಬ ಪದ ಬಳಸಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬನಿಗೆ ಸ್ಥಳೀಯ ನ್ಯಾಯಾಲಯವೊಂದು ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಅವಹೇಳನಕಾರಿ ವರ್ತನೆ ತೋರಿದ್ದಕ್ಕೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಬಾಲಕಿಯೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲದಿದ್ದರೂ, ಪುರುಷ ಈ ರೀತಿಯಲ್ಲಿ ವರ್ತಿಸುವುದು ಸಂಪೂರ್ಣವಾಗಿ ಅನುಚಿತವಾಗಿದೆ. 'ಐಟಂ' ಎಂಬ ಪದವನ್ನು ಸಾಮಾನ್ಯವಾಗಿ ಹುಡುಗರು ಬಳಸುತ್ತಾರೆ. ಆದರೆ, ಹುಡುಗಿಯರನ್ನು ಅವಹೇಳನಕಾರಿ ರೀತಿಯಲ್ಲಿ ಸಂಭೋಧಿಸುವುದು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ ಎಂದು ಮುಂಬೈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಆತ ಭವಿಷ್ಯದಲ್ಲಿ ಉತ್ತಮ ನಡವಳಿಕೆ ತೋರುವ ಭರವಸೆ ನೀಡಿದರೂ, ಮೆಗಾಸಿಟಿಯ ಸಕಿನಾಕಾ ಪ್ರದೇಶದ ಉದ್ಯಮಿಗೆ ಲಘು ಶಿಕ್ಷೆಯನ್ನು ನೀಡಲು ಕೋರ್ಟ್ ನಿರಾಕರಿಸಿತು. "ಯಾವುದೇ ಹುಡುಗಿಯನ್ನು ಸಂಬೋಧಿಸಲು 'ಐಟಂ' ಎಂಬ ಪದವನ್ನು ಬಳಸುವುದು ನಿಸ್ಸಂಶಯವಾಗಿ ಅವಮಾನಕರವಾಗಿದೆ," ಎಂದು ಬೋರಿವಲಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ ಅನ್ಸಾರಿ ಅವರು ತೀರ್ಪು ನೀಡಿದರು. 7 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅಕ್ಟೋಬರ್ 20 ರಂದು ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.
ಇದನ್ನು ಓದಿ: ಸೆಕ್ಸ್‌ಗಾಗಿ ಮೂವರು ಸಚಿವರ ಒತ್ತಾಯ, ಸ್ಪಪ್ನಾ ಸುರೇಶ್ ಬಿಚ್ಚಿಟ್ಟ ರಹಸ್ಯಕ್ಕೆ ಪಿಣರಾಯಿ ಸರ್ಕಾರ ಗಡಗಡ!
ಅಬ್ರಾರ್ ನೂರ್ ಮೊಹಮ್ಮದ್ ಖಾನ್ ಮತ್ತು ಅವನ ಸ್ನೇಹಿತರು ಆಗಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರೂ, ಜುಲೈ 14, 2015 ರ ಘಟನೆಯ ನಂತರ ಹುಡುಗಿ ಮತ್ತು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
“ಮಧ್ಯಾಹ್ನ 1.30 ರ ಸುಮಾರಿಗೆ ಹುಡುಗಿ ಯಾವುದೋ ಕೆಲಸದ ನಿಮಿತ್ತ ತನ್ನ ಶಾಲೆಗೆ ಹೋಗಿದ್ದಳು. ಅವಳು ಮಧ್ಯಾಹ್ನ 2.10 ರ ಸುಮಾರಿಗೆ ಹಿಂತಿರುಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತಿದ್ದ ಅಬ್ರಾರ್ ನೂರ್ ಮೊಹಮ್ಮದ್ ಖಾನ್ ಹದಿಹರೆಯದ ಬಾಲಕಿಯ ಹಿಂದೆ ಬಂದು ಅವಳ ಕೂದಲನ್ನು ಎಳೆದುಕೊಂಡು 'ಕ್ಯಾ ಐಟಂ ಕಿದರ್ ಜಾ ರಹೀ ಹೋ' (ಏನು ಐಟಂ ಎಲ್ಲಿಗೆ ಹೋಗುತ್ತಿದ್ದೀಯಾ)’’ ಎಂದು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ವಾದ ಮಾಡಿದೆ.
ಇದನ್ನೂ ಓದಿ: ಐಷಾರಾಮಿ ಜೀವನಕ್ಕೆ ಬಾಸ್ ಜೊತೆ ಮಲಗ್ತೇನೆ, ಅದಕ್ಕೆಲ್ಲ ಬೇಜಾರಿಲ್ವಂತೆ ಇವ್ಳಿಗೆ!
ಆದರೆ, ತಾನು ಹುಡುಗಿಯೊಂದಿಗೆ ಸ್ನೇಹಿತನಾಗಿದ್ದೆ, ಅವರ ಹೆತ್ತವರು ಅವಳೊಂದಿಗೆ ಸ್ನೇಹಿತರಾಗಲು ಇಷ್ಟಪಡದ ಕಾರಣ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆತ ಹೇಳಿದ್ದಾನೆ. ಅದರೆ, ಅಬ್ರಾರ್ ನೂರ್ ಮೊಹಮ್ಮದ್ ಖಾನ್ ಇದಕ್ಕೆ ಯಾವುದೇ ಸಾಕ್ಷ್ಯ ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, "ಸಮಾಜಕ್ಕೆ ಸರಿಯಾದ ಸಂದೇಶವನ್ನು ಕಳುಹಿಸಲು ತಕ್ಕ ಶಿಕ್ಷೆಯನ್ನು" ಮತ್ತು ನಿರ್ದಿಷ್ಟವಾಗಿ "ಹೆಣ್ಣುಮಕ್ಕಳ ಜೀವನವನ್ನು ಶೋಚನೀಯಗೊಳಿಸುವ, ಅವರನ್ನು ಚುಡಾಯಿಸುವ ಮೂಲಕ ಮತ್ತು ರಸ್ತೆಯಲ್ಲಿ ನಡೆಯುವಾಗ ಅನುಚಿತವಾಗಿ ಸ್ಪರ್ಶಿಸುವ" ಜನರಿಗೆ ನೀಡಬೇಕೆಂದು ಪ್ರಾಸಿಕ್ಯೂಷನ್ ನ್ಯಾಯಾಧೀಶರನ್ನು ಮನವಿ ಮಾಡಿಕೊಂಡಿತ್ತು.
ಇದನ್ನೂ ಓದಿ: Crime News: ಸಂಬಂಧಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಸರ್ಕಲ್ ಇನ್ಸ್‌ಪೆಕ್ಟರ್ ಅಮಾನತು
ಅಂತಿಮವಾಗಿ, ನ್ಯಾಯಾಲಯವು ಹದಿಹರೆಯದ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಒಂದೂವರೆ ವರ್ಷಗಳ ಜೈಲು ಶಿಕ್ಷೆಯನ್ನು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಅಡಿಯಲ್ಲಿ ಇದೇ ರೀತಿಯ ಶಿಕ್ಷೆಯನ್ನು ವಿಧಿಸಿತು. ಆದರೆ, ಎರಡೂ ಶಿಕ್ಷೆಗಳು ಸಮಾನಾಂತರವಾಗಿ ನಡೆಯುತ್ತವೆ ಎಂದು ಕೋರ್ಟ್ ಹೇಳಿದ್ದು, ಈ ಹಿನ್ನೆಲೆ ಅಬ್ರಾರ್ ನೂರ್ ಅಹ್ಮದ್ ಖಾನ್, ಕೇವಲ 18 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಾರೆ. ಇನ್ನು, ಈಗಾಗಲೇ ಆತ 4 ತಿಂಗಳ ಶಿಕ್ಷೆ ಅನುಭವಿಸಿರುವುದರಿಂದ ಆತನಿಗೆ ಕೇವಲ 14 ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ ಎಂದೂ ಮುಂಬೈ ನ್ಯಾಯಾಲಯ ಹೇಳಿದೆ.