ಎಣ್ಣೆ ಏಟಲ್ಲಿ ಕದ್ದಿದ್ದು ಬರೊಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ಬಂಗಾರ, ಮೂವರು ಖದೀಮರನ್ನು ಬಂಧಿಸಿದ ಚಿಕ್ಕೋಡಿ ಪೊಲೀಸರು
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕೋಡಿ
ಚಿಕ್ಕೋಡಿ(ಅ.26): ಸಾಮಾನ್ಯವಾಗಿ ಎಣ್ಣೆ ಹೊಡೆಯೋರನ್ನ ಯಾಕ್ ಸ್ವಾಮೀ ಎಣ್ದೆ ಹೊಡಿತೀರಿ ಅಂತ ಕೇಳಿದ್ರೆ ಅವರು ಏನ್ ಉತ್ತರ ಕೊಡಬಹುದು. ಒಂದು ಖುಷಿಗೋ ಅಥವಾ ದು:ಖಕ್ಕೊ ಅಂತ ಹೇಳಬಹುದು. ಆದರೆ ಇಲ್ಲೊಂದು ಗ್ಯಾಂಗ್ ಕಳ್ಳತನ ಮಾಡೋಕೆ ಅಂತಾನೇ ಎಣ್ಣೆ ಹೊಡೆದು ಎಣ್ಣೆ ಏಟಲ್ಲೆ ಮನೆ ಕೀಲಿ ಹೊಡೆದು ಈಗ ಪೊಲೀಸರ ಅಥಿಯಾಗಿದೆ.
ಎಣ್ಣೆ ಹೊಡಿ ಸಿಕ್ಕ ಸಿಕ್ಕವರ ಮನೆಯ ಕೀಲಿ ಹೊಡಿ
ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು ಅಂತಾರೆ. ಆದರೆ ಈ ಫೋಟೊದಲ್ಲಿ ಕಾಣ್ತಿರೋ ಈ ಪುಣ್ಯಾತ್ಮರು ಅದೆಷ್ಟು ಎಣ್ಣೆ ಹೊಡಿತಿದ್ರೋ ಗೊತ್ತಿಲ್ಲ. ಎಣ್ಣೆ ಹೊಡೆದಾಗಲೆಲ್ಲ ಇವರು ಹಾಡು ಹಗಲೇ ಯಾರೂ ಇಲ್ಲದ ಮನೆ ಟಾರ್ಗೆಟ್ ಮಾಡಿ ಮನೆ ಕಳ್ಳತನ ಮಾಡ್ತಿದ್ರು. ಇದೇ ತಿಂಗಳ 12 ರಂದು ಚಿಕ್ಕೋಡಿಯಲ್ಲಿರುವ ವಿಷ್ಣುಪ್ರಕಾಶ ನೇತಗೇಕರ್ ಎಂಬುವವರ ಮನೆಗೆ ನುಗ್ಗಿದ್ದ ಈ ಖದೀಮರ ತಂಡ ಮನೆಯಲ್ಲಿದ್ದ 370 ಗ್ರಾಂ ಬಂಗಾರ ಹಾಗೂ 1.50 ಲಕ್ಷ ಹಣ ದೋಚಿ ಪರಾರಿಯಾಗಿತ್ತು. ಕೂಡಲೇ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದ ವಿಷ್ಣು ಪ್ರಕಾಶ ಮತ್ತು ರಂಜಿತ್ ಶಿಂದೇ ಅವರ ದೂರು ಅಧರಿಸಿ ಮೂವರನ್ನು ಬಂಧಿಸಿದ್ದಾರೆ. ನೇಪಾಳ ಮೂಲದ ವಿಶಾಲ್ ಶರ್ಮಾ, ಚಿಕ್ಕೋಡಿ ಮೂಲದ ಗಜಾನನ ಕಾಂಬಳೆ, ಸಂಜು ಬೈಲಾಪತ್ತಾರ ಎಂಬ ಖದೀಮರುನ್ನು ಹೆಡೆಮುರಿ ಕಟ್ಟಿ ಅವರಿಂದ ಬರೊಬ್ಬರಿ 15 ಲಕ್ಷ ಮೌಲ್ಯದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
ಹಾಡು ಹಗಲೇ ಈ ಗ್ಯಾಂಗ್ ಕಂಡೋರ ಮನೆ ಒಡೆಯೋಕೆ ಪ್ಲಾನ್ ಮಾಡುತ್ತಿದ್ದು ಚಿಕ್ಕೋಡಿ ನಗರದ ವಿವಿಧ ಭಾಗಗಲ್ಲಿ ಇವರ ಚಲನವಲನಗಳು ವಿವಿಧ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹೆಸರಿಗೆ ತಳ್ಳುವ ಗಾಡಿಯಲ್ಲಿ ಎಗ್ ರೈಸ್ ವ್ಯಾಪಾರ ಮಾಡಿಕೊಂಡಿದ್ದ ಈ ಖದೀಮರು ಸುಲಭವಾಗಿ ಹಣ ಮಾಡೋಕೆ ಆರಿಸಿಕೊಂಡಿದ್ದೇ ಕಳ್ಳತನ. ಅದು ಕಂಠ ಪೂರ್ತಿ ಕುಡಿದು ಸಿಕ್ಕ ಸಿಕ್ಕ ಮನೆಯವರ ಮನೆ ಬಾಗಿಲು ಹೊಡೆಯತ್ತಿದ್ದ ಖದೀಮದರಿಂದ ಚಿಕ್ಕೋಡಿ ಪೊಲೀಸರು 4 ಪ್ರಕರಣಗಳನ್ನು ಭೇದಿಸಿದಂತಾಗಿದೆ. ಬಂಧಿತದಿಂದ ಒಂದು ಕೆಟಿಎಂ ಬೈಕ್, ಒಂದು ಕೆನಾನ್ ಕ್ಯಾಮರಾ ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಒಟ್ಟಿನಲ್ಲಿ ಎಣ್ಣೆ ಏಟಲ್ಲಿ ಸಿಕ್ಕ ಸಿಕ್ಕವರ ಮನೆಗೆ ಕನ್ನ ಹಾಕುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದು ಜನ ಇನ್ನಾದರೂ ಹುಷಾರಾಗಿರಬೇಕು ಅಂತ ಚಿಕ್ಕೋಡಿ ಪೊಲೀಸರು ನಿವೇದಿಸಿಕೊಂಡಿದ್ದಾರೆ.