ಬೆಂಗಳೂರು ಮೂಲದ ಮೂವರ ಸೆರೆ, ಬಂಧಿತರಿಂದ 24,59,300 ಮೌಲ್ಯದ ಆಯಿಲ್, ಗ್ರೀಸ್ ಜಫ್ತಿ / 7 ಲಕ್ಷ ಮೌಲ್ಯದ ಗೂಡ್ಸ್ ವಾಹನ ವಶ
ಹೊಸಪೇಟೆ(ಆ.26): ವಿಜಯನಗರ ಜಿಲ್ಲೆಯ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ, 24,59,300 ಮೌಲ್ಯದ ಟ್ರಾನ್ಸ್‌ಫಾರ್ಮರ್ ಆಯಿಲ್ ಹಾಗೂ ಗ್ರೀಸ್ ಮತ್ತು .7 ಲಕ್ಷ ಮೌಲ್ಯದ ಮಹೇಂದ್ರ ಬುಲೆರೊ ಗೂಡ್ಸ್ ವಾಹನ ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಜಯನಗರ ನಿವಾಸಿಗಳಾದ ಮಂಜುನಾಥ ಕೆ.ಅಲಿಯಾಸ್ ಮಂಜು (30), ಮುಸ್ತಾಕ್ ಖೈಯಿಯಾ ಅಲಿಯಾಸ್ ಮುನ್ನಾ (25) ಮತ್ತು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಸಿ.ಗಜೇಂದ್ರ ಅಲಿಯಾಸ್ ಗಜ (29) ಬಂಧಿತ ಆರೋಪಿಗಳು.
ಬಂಧಿತರಿಂದ .16,09, 300 ಮೌಲ್ಯದ 70 ಬ್ಯಾರಲ್ ಟ್ರಾನ್ಸ್‌ಫಾರ್ಮರ್ ಆಯಿಲ್, .8.50 ಲಕ್ಷ ಮೌಲ್ಯದ 17 ಬ್ಯಾರಲ್ ಗ್ರೀಸ್ ಮತ್ತು .7 ಲಕ್ಷ ಮೌಲ್ಯದ ಮಹೇಂದ್ರ ಬುಲೆರೊ ಗೂಡ್‌್ಸ ಕ್ಯಾರಿಯರ್ ವಾಹನ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಆಯಿಲ್ ವ್ಯಾಪಾರ ಮಾಡುತ್ತಿದ್ದ ಈ ಮೂವರು, ಹೊಸಪೇಟೆಯಲ್ಲಿ ಕಳೆದ ಏಪ್ರಿಲ್‌ನಿಂದ ಆಯಿಲ್ ಮತ್ತು ಗ್ರೀಸ್ ಬ್ಯಾರಲ್‌ಗಳನ್ನು ಕಳವು ಮಾಡಿ ಒಂದು ಕಡೆ ಸಂಗ್ರಹಿಸಿಟ್ಟಿದ್ದರು. ಇದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
undefined
ವಿಡಿಯೋಗಾಗಿ ಮನೆಯಲ್ಲಿ ಹಾವು ಸಾಕಿದ youtuber ಬಂಧನ
ನಗರದ ಬಸವೇಶ್ವರ ಬಡಾವಣೆ ನಿವಾಸಿ ಸುಲೇಖೆರಾಜು ಎಂಬವರು ಜೂ.24ರಂದು ಜಂಬುನಾಥನಹಳ್ಳಿ ಪ್ರದೇಶದಲ್ಲಿ ತಮ್ಮ ಸಂಸ್ಥೆಗೆ ಸೇರಿದ ಟ್ರಾನ್ಸ್‌ಫಾರ್ಮರ್ ಆಯಿಲ್ ಮತ್ತು ಗ್ರೀಸ್ ಆಯಿಲ್‌ಗಳನ್ನು ಕಳವು ಮಾಡಲಾಗಿದೆ ಎಂದು ದೂರಿದ್ದರು. ಈ ಹಿನ್ನೆಲೆ ಪತ್ತೆಗೆ ತಂಡ ರಚಿಸಲಾಗಿತ್ತು. ಆ.25ರ ಬೆಳಗ್ಗೆ 8:30ಕ್ಕೆ ಗ್ರಾಮೀಣ ಠಾಣೆ ಪಿಐ ಶ್ರೀನಿವಾಸ ಮೇಟಿ ಪೆಟ್ರೋಲಿಂಗ್ ಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಮಹೇಂದ್ರ ಬುಲೆರೊ ಗೂಡ್‌್ಸ ವಾಹನ ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿಐ ಶ್ರೀನಿವಾಸ್ ಮೇಟಿ, ಸಿಬ್ಬಂದಿ ಮಂಜುನಾಥ ಮೇಟಿ, ಕೊಟ್ರೇಶ್ ಜೆ., ಅಡಿವೆಪ್ಪ ಕಬ್ಬಳ್ಳಿ, ಸಣ್ಣಗಾಳೆಪ್ಪ, ಕೊಟ್ರೇಶ್ ಎ., ಚಂದ್ರಪ್ಪ ಬಿ., ನಾಗರಾಜ ಬಿ., ಸಂತೋಷ್‌ಕುಮಾರ, ಅಬ್ದುಲ್ ನಜೀರ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಎಸ್ಪಿ ಡಾ. ಅರುಣ್ ಕೆ. ಈ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ.