ಧಾರವಾಡದಲ್ಲಿ ಎಲ್ಲೆಂದರಲ್ಲಿ ಅಂದರ್ ಬಾಹರ್: ಶಾಲೆಗಳೇ ಪುಂಡ ಪೋಕರಿಗಳ ಟಾರ್ಗೆಟ್‌..!

By Girish Goudar  |  First Published Oct 26, 2022, 1:06 PM IST

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಎರಡು ದಿನ ಶಾಲೆಗಳನ್ನೇ ಇಸ್ಪಿಟ್ ಅಡ್ಡೆ ಮತ್ತು ಕುಡುಕರ ತಾಣವನ್ನಾಗಿ  ಮಾಡಿಕೊಂಡ ಪುಂಡರು 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಅ.26): ದೀಪಾವಳಿ ಹಬ್ಬದವನ್ನ ನಾಡಿನ ಜನತೆ ಒಂದು ಕಡೆ ಕುಷಿಯಾಗಿ ಎಲ್ಲರೂ ಆಚರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ದೀಪಾವಳಿ ಹಬ್ಬವನ್ನೇ ನೆಪ ಮಾಡಿಕೊಂಡು ಜೂಜಾಟ ಆಡಿ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿರುವುದನ್ನ ನಾವು ನೋಡಿದ್ದೇವೆ, ಖಂಡಿದ್ದೇವೆ. ಅದಕ್ಕೆ ಸಾಕ್ಷಿಯಂತೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಎರಡು ದಿನ ಶಾಲೆಗಳನ್ನೇ ಇಸ್ಪಿಟ್ ಅಡ್ಡೆ ಮತ್ತು ಕುಡುಕರ ತಾಣವನ್ನಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. 

Tap to resize

Latest Videos

ಹೌದು, ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದಲ್ಲಿ ಶಾಲೆಯನ್ನ ಇಸ್ಪಿಟ್ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ ಗ್ರಾಮದವರು. ಆದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮತ್ತು ಕೊಠಡಿಗಳಲ್ಲಿ ಎಲ್ಲೆಂದರಲ್ಲಿ ಇಸ್ಪಿಟ್ ಎಲೆಗಳು, ಮದ್ಯದ ಬಾಟಲಿಗಳು ಎಲ್ಲಿ ನೋಡಿದರು ಅಲ್ಲಿ ಗುಟ್ಕಾ ಚೀಟುಗಳನ್ನ ಎಸೆದು ಹೋಗಿದ್ದಾರೆ. ದೀಪಾವಳಿ ಹಬ್ಬ ಇರುವ ಹಿನ್ನಲೆಯಿಂದ ಶಾಲೆಗಳಿಗೆ ರಜೆ ಇರುವ ಹಿನ್ನಲೆ ಶಾಲೆಗಳನ್ನ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. 

ಅಂದರ್ ಬಾಹರ್ ಕಾರ್ಪೋರೇಟರ್ ಗಣೇಶ ಮುಧೋಳ್ ಸೇರಿ 10 ಜನರ ಬಂಧನ

ಬಹುತೇಕ ಕೇವಲ ಇದೊಂದೇ ಗ್ರಾಮದಲ್ಲಿ ಅಲ್ಲ, ಧಾರವಾಡ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ದೀಪಾವಳಿ ಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಅದರಲ್ಲೂ ರೈತರ ದೊಡ್ಡ ಹಬ್ಬ ಅಂದರೆ ದೀಪಾವಳಿ ಆದರೆ ಅದೆ ನೆಪದಲ್ಲಿ ಕೆಲ ಪುಂಡ ಪೋಕರಿಗಳು ಹಣದ ಆಸೆಗಾಗಿ ಇಸ್ಪಿಟ್ ಆಟವನ್ನ ಕೆಲವರು ಆಡಿಸುತ್ತಿದ್ದಾರೆ. ಇನ್ನು ಕೆಲವರು ಲಕ್ಷ ಗಟ್ಟಲೇ ಬಡ್ಡಿ ರೂಪದಲ್ಲಿ ಸಾಲ ಕೊಟ್ಟು ಇಸ್ಪಿಟ್ ಆಡಿಸುತ್ತಿದ್ದಾರೆ. ಆದರೆ ಪೊಲೀಸ್ ಇಲಾಖೆ ಇದಕ್ಕೆ‌ ಕಡಿವಾಣ ಹಾಕಬೇಕಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಗಸ್ತು ತಿರುಗುವುದು ತುಂಬಾ ಅತ್ಯವಶ್ಯಕ ಎಂದ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನೇ ಟಾರ್ಗೆಟ್ ಮಾಡಿಕೊಂಡು ಕೆಲವರು ಇಸ್ಪಿಟ್ ದಂಧೆಯನ್ನ‌ ಶುರು ಮಾಡಿಕೊಂಡಿದ್ದಾರೆ. ಇನ್ನು ಶಾಸಕ ಅಮೃತ ದೇಸಾಯಿ‌ ಸ್ಪರ್ಧೆ ಮಾಡೋ ಗ್ರಾಮೀಣ ಕ್ಷೇತ್ರದಲ್ಲಿ ಜೂಜಾಟಕ್ಕೆ ಬ್ರೇಕ್ ಹಾಕಲು ಶಾಸಕರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಕೆಲ ಕಿಡಿಗೇಡಿಗಳು ಅಂದರ್ ಬಾಹರ್ ಆಟವನ್ನ ಶುರು ಇಟ್ಟುಕೊಂಡಿದ್ದಾರೆ. ಎಸ್ಪಿ ಲೋಕೇಶ್ ಕುಮಾರ ಅವರು ಈ ದಂಧೆಗಳಿಗೆ ಬ್ರೇಕ್ ಹಾಕಿ ಹೆಣ್ಣು ಮಕ್ಕಳ‌ ಕೊರಳಿನ ತಾಳಿಯನ್ನ ಉಳಿಸಬೇಕಿದೆ ಹಾಗೆ ಬಡ ಕುಟುಂಬಗಳನ್ನ ರಕ್ಷಣೆ ಮಾಡಬೇಕಿದೆ. 
 

click me!