* ಬಂಧಿತರಿಂದ 16.65 ಲಕ್ಷ ಮೌಲ್ಯದ 333 ಗ್ರಾಂ ತೂಕದ ಚಿನ್ನಾಭರಣ ಜಪ್ತಿ
* ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ಖದೀಮರು
* ಜನರ ಗಮನ ಬೇರೆಡೆ ಸೆಳೆದು ಕದ್ದು ಕ್ಷಣಾರ್ಧದಲ್ಲಿ ಪರಾರಿ
ಬೆಂಗಳೂರು(ಜ.12): ಜೈಲಿನಲ್ಲಿ(Jail) ಸ್ನೇಹಿತರಾಗಿ ಜಾಮೀನಿನ(Bail) ಮೇಲೆ ಹೊರಬಂದ ಬಳಿಕ ಒಟ್ಟಾಗಿ ನಗರದ ವಿವಿಧೆಡೆ ಮನೆಗಳವು ಮಾಡುತ್ತಿದ್ದ ಮೂವರು ಆರೋಪಿಗಳು(Accused) ಮಾಗಡಿ ರಸ್ತೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂಧ್ರಪ್ರದೇಶ(Andhra Pradesh) ಮೂಲದ ವೆಂಕಟರಮಣ, ಕೃಷ್ಣಮೂರ್ತಿ ಹಾಗೂ ಬಾಗೇಪಲ್ಲಿ ಮೂಲದ ರಮೇಶ್ ಬಂಧಿತರು(Arrest). ಆರೋಪಿಗಳಿಂದ 16.65 ಲಕ್ಷ ಮೌಲ್ಯದ 333 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಬೆಳಗ್ಗೆ 11.30ರ ಸುಮಾರಿಗೆ ಒಡವೆ ಬಿಚ್ಚಿ ಟೇಬಲ್ ಮೇಲಿರಿಸಿ ಸ್ನಾನಕ್ಕೆ ತೆರಳಿದ್ದರು. ಬಳಿಕ ಸ್ನಾನ ಮುಗಿಸಿ ಬಂದು ನೋಡಿದಾಗ ಒಡೆವೆಗಳು ಕಳವುವಾಗಿದ್ದವು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
Theft Cases: ಜೇಬಿಗೆ ಕತ್ತರಿ ಹಾಕಿ ಚಿನ್ನಾಭರಣ ಕದ್ದಿದ್ದ 3 ಖದೀಮರ ಬಂಧನ
ಆರೋಪಿಗಳು ಈ ಹಿಂದೆ ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ(Criminal Cases) ಭಾಗಿಯಾಗಿ ಜೈಲು ಪಾಲಾಗಿದ್ದರು. ಈ ವೇಳೆ ಜೈಲಿನಲ್ಲಿ ಸ್ನೇಹಿತರಾಗಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದು ಒಟ್ಟಾಗಿ ಅಪರಾಧ ಕೃತ್ಯಗಳನ್ನು ಎಸೆಗುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ನಗರದ ವಿವಿಧ ಬಡಾವಣೆ ಸುತ್ತಾಡುತ್ತಿದ್ದ ಆರೋಪಿಗಳು, ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಳವು ಮಾಡುತ್ತಿದ್ದರು. ಒಬ್ಬ ಮನೆಯ ಹೊರಗೆ ನಿಂತು ಸಿಗ್ನಲ್ ನೀಡುತ್ತಿದ್ದ. ಉಳಿದಿಬ್ಬರು ಮನೆ ಬೀಗ ಮೀಟಿ ಒಳಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಬೆಳ್ಳಿ ಆಭರಣಗಳನ್ನು ಕಳವು(Theft) ಮಾಡುತ್ತಿರಲಿಲ್ಲ ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳವು, ವಿಜಯನಗರ ಎರಡು, ಕೆ.ಪಿ.ಅಗ್ರಹಾರ, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಲಾ ಒಂದು ಮನೆಗಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಆರೋಪಿಗಳು ಇನ್ನೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನವಿದ್ದು, ಹೆಚ್ಚಿನ ವಿಚಾರಣೆಯಿಂದ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ಸಲ್ಲಿ ಪ್ರಯಾಣಿಕರ ಚಿನ್ನ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳ ಸೆರೆ
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ(Passengers) ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Credit Card Theft: 1 ಲಕ್ಷ ಕಳಕೊಂಡ ಗ್ರಾಹಕನಿಂದ ಸುಲಿಗೆ ಮಾಡಿದ ಬ್ಯಾಂಕಿಗೆ 10 ಸಾವಿರ ರು. ದಂಡ
ರಾಮನಗರದ ಆನಂದ್ ಗಿರಿ (26) ಬಂಧಿತ. ಆರೋಪಿಯಿಂದ 16 ಲಕ್ಷ ಮೌಲ್ಯದ 306 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ. ತೂಕದ ಬೆಳ್ಳಿಯ ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಾಮರಾಜ ನಗರದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಬಸ್ ಇಳಿಯುವಾಗ ಪ್ರಯಾಣಿಕರ ನೂಕು ನುಗ್ಗಲು ಉಂಟಾಗಿತ್ತು. ಈ ವೇಳೆ ಕಿಡಿಗೇಡಿಗಳು ಆ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಜನದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆಯಿರುವ ಸ್ಥಳಗಳು ಹಾಗೂ ಬಸ್‌ಗಳಲ್ಲಿ(Bus) ಜನರ ಗಮನ ಬೇರೆಡೆ ಸೆಳೆದು ಕಳವು ಮಾಡಿ ಕ್ಷಣಾರ್ಧದಲ್ಲಿ ಓಡಿ ಹೋಗುತ್ತಿದ್ದ. ಅಂತೆಯೆ ಹಗಲು ವೇಳೆಯಲ್ಲಿ ಮನೆಯ ಬಾಗಿಲು ತೆರೆದಿದ್ದರೆ ಏಕಾಏಕಿ ನುಗ್ಗಿ ದೇವರ ಆಭರಣ ಕದ್ದು ಪರಾರಿಯಾಗುತ್ತಿದ್ದ. ಸಾರ್ವಜನಿಕರು ಬೆನ್ನಟ್ಟಿದ್ದರೂ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಆರೋಪಿಯ ಬಂಧನದಿಂದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಮೂರು ಕಳವು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.