Drugs Bust in Bengaluru: ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

By Kannadaprabha News  |  First Published Jan 12, 2022, 4:55 AM IST

*  ಮನೆಯಲ್ಲೇ ಕುಕ್ಕರ್‌ ಬಳಸಿ ಡ್ರಗ್ಸ್‌ ತಯಾರಿಸುತ್ತಿದ್ದ ವಿದೇಶಿ ಬ್ರದರ್ಸ್‌
*  50 ಲಕ್ಷ ಮೌಲ್ಯದ ಡ್ರಗ್ಸ್‌ ವಶ
*  6 ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ನೈಜೀರಿಯನ್ಸ್‌
 


ಬೆಂಗಳೂರು(ಜ.12):  ತಮ್ಮ ಮನೆಯಲ್ಲೇ ಡ್ರಗ್ಸ್‌(Drugs) ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಚಾಲಾಕಿ ವಿದೇಶಿ ಸೋದರರ ಪೈಕಿ ಕಿರಿಯ ಸೋದರ ಸಿಸಿಬಿ(CCB) ಬಲೆಗೆ ಬಿದ್ದಿದ್ದಾನೆ.

ಸೋಲದೇವನಹಳ್ಳಿ ಸಮೀಪದ ತರಬನಹಳ್ಳಿ ನಿವಾಸಿ ರಿಚರ್ಡ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) 50 ಲಕ್ಷ ಮೌಲ್ಯದ 900 ಗ್ರಾಂ ಕೊಕೇನ್‌, 50 ಗ್ರಾಂ ಎಂಡಿಎಂ ಕ್ರಿಸ್ಟೆಲ್‌ ಹಾಗೂ ಎಂಡಿಎಂಎ ತಯಾರು ಮಾಡಲು ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ 10 ಲೀಟರ್‌ ಕುಕ್ಕರ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಡ್ರಗ್ಸ್‌ ತಯಾರಿಕೆ ಬಗ್ಗೆ ಬಾತ್ಮೀದಾರರಿಂದ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ವಿರೂಪಾಕ್ಷಿ ನೇತೃತ್ವದ ತಂಡ ದಾಳಿ ನಡೆಸಿದೆ.

Tap to resize

Latest Videos

Fraud: ಗಾಂಜಾ ನಶೆಯಲ್ಲಿ ಪುಂಡಾಟ: 5 ಆಪ್ರಾಪ್ತರು ಪೊಲೀಸರ ವಶಕ್ಕೆ

ಅಣ್ತಮ್ಮಂದಿರ ಕಮಾಲ್‌:

ನೈಜೀರಿಯಾ(Nigeria) ಮೂಲದ ರಿಚರ್ಡ್‌ ಹಾಗೂ ಆತನ ಹಿರಿಯ ಸೋದರರು 2019ರಲ್ಲಿ ಬಿಸಿನೆಸ್‌ ವೀಸಾದಲ್ಲಿ(Business Visa)  ದೆಹಲಿಗೆ ಬಂದಿದ್ದರು. ಅನಂತರ 6 ತಿಂಗಳ ಹಿಂದೆ ಬೆಂಗಳೂರಿಗೆ(Bengaluru) ಬಂದ ಸೋದರರು, ಮೊದಲು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ತರುವಾಯ ಎರಡು ತಿಂಗಳ ಹಿಂದೆ ಸೋಲದೇವನಹಳ್ಳಿ ವ್ಯಾಪ್ತಿಗೆ ಅವರು ವಾಸ್ತವ್ಯ ಬದಲಾಯಿಸಿದ್ದರು. ತರಬನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದ ಸೋದರರು, ಮಾಲಿಕರಿಗೆ ಗೊತ್ತಾಗದಂತೆ ಮನೆಯಲ್ಲೇ ಡ್ರಗ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಹೇಳಿದೆ.

ತಮ್ಮ ಮನೆಯಲ್ಲೇ ಮೀಥೈಲ್ಸಲೋನಿಲ್ಮೆಥೇನ್‌ ಹಾಗೂ ಸೋಡಿಯಂ ಹೈಡ್ರಾಕ್ಸೆಡ್‌ ಕ್ರೈಸ್ಟೆಲ್‌ ಬಳಸಿ ಎಂಡಿಎಂಎ ಕ್ರಿಸ್ಟೆಲ್‌ ಡ್ರಗ್ಸ್‌ ತಯಾರಿಸುತ್ತಿದ್ದರು. ಬೆಂಗಳೂರು ಸೇರಿದಂತೆ ಇತರೆಡೆ ತಮ್ಮ ಸಂಪರ್ಕ ಜಾಲದ ಮೂಲಕ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದರು. ಆರೋಪಿ ಮನೆಯಲ್ಲಿ ಮೀಥೈಲ್ಸಲೋನಿಲ್ಮೆಥೇನ್‌ 930 ಗ್ರಾಂ, ಸೋಡಿಯಂ ಹೈಡ್ರಾಕ್ಸೆಡ್‌ ಕ್ರೈಸ್ಟೆಲ್‌ 580 ಗ್ರಾಂ ಹಾಗೂ ಆ್ಯಸಿಡ್‌ 5 ಲೀ. ಅಳವಡಿಸಿದ್ದ ಪೈಪು ಪತ್ತೆಯಾಗಿದೆ. ಈ ದಾಳಿ ವೇಳೆ ರಿಚರ್ಡ್‌ ಸಿಕ್ಕಿಬಿದ್ದಿದ್ದು, ದೆಹಲಿಯಲ್ಲಿ ತಲೆಮರೆಸಿಕೊಂಡಿರುವ ಆತನ ಅಣ್ಣನ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

ಅಕ್ರಮ ಚಟುವಟಿಕೆಗಳ ಶಂಕೆ ಮೇರೆಗೆ ಪರಪ್ಪನ ಅಗ್ರಹಾರ(Parappana Agrahara) ಕೇಂದ್ರ ಕಾರಾಗೃಹದ ಮೇಲೆ ಮಂಗಳವಾರ ಮುಂಜಾನೆ ದಿಢೀರ್‌ ದಾಳಿ(Raid) ನಡೆಸಿದ ಕಾರಾಗೃಹ ಇಲಾಖೆ ಅಧಿಕಾರಿಗಳು ಹಾಗೂ ಸಿಸಿಬಿ(CCB) ಪೊಲೀಸರು, ಜೈಲಿನಲ್ಲಿ ಮತ್ತೆ ಗಾಂಜಾ ಹಾಗೂ ಚುಟ್ಟಾಸೇವನೆಯ ಕೊಳವೆಗಳನ್ನು ಜಪ್ತಿ ಮಾಡಿದ ಘಟನೆ ಕೆಳದ ವರ್ಷದ ಡಿ.01 ರಂದು ನಡೆದಿತ್ತು. 

Fraud: ಗಾಂಜಾ ನಶೆಯಲ್ಲಿ ಪುಂಡಾಟ: 5 ಆಪ್ರಾಪ್ತರು ಪೊಲೀಸರ ವಶಕ್ಕೆ

ಸಜಾ ಕೈದಿಗಳ ಬ್ಲಾಕ್‌ನ ‘ಬಿ’ ಬ್ಯಾರೆಕ್‌ನ ಸಜಾ ಕೈದಿ(Prisoner) ಮಂಜುನಾಥ್‌ ಸೆಲ್‌ನಲ್ಲಿ 10 ಗ್ರಾಂ ಹಾಗೂ ಅನುಕುಮಾರ್‌ನ ಸೆಲ್‌ನಲ್ಲಿ 20 ಗ್ರಾಂ ಗಾಂಜಾ(Marijuana) ಹಾಗೂ ಚುಟ್ಟಾ ಸೇವನೆಯ ಕೊಳವೆಗಳನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಮೂರು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ(Central Prison) ಮೇಲೆ ಅಪಾರ ಪ್ರಮಾಣದ ಗಾಂಜಾ ಹಾಗೂ ಮೊಬೈಲನ್ನು ಸಿಸಿಬಿ ಜಪ್ತಿ ಮಾಡಿದ್ದರು. ಆದರೆ ಮಂಗಳವಾರದ ಕಾರ್ಯಾಚರಣೆಯಲ್ಲಿ ನಿರೀಕ್ಷಿತ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಐದು ತಾಸು ಪರಿಶೀಲಿಸಿದ ಸಿಸಿಬಿ:

ಇತ್ತೀಚಿನ ಕೋರಮಂಗಲದ ರೌಡಿ ಜೋಸೆಫ್‌ ಅಲಿಯಾಸ್‌ ಬಬ್ಲಿ ಕೊಲೆ(Murder) ಸೇರಿದಂತೆ ಕೆಲವು ಅಪರಾಧ ಕೃತ್ಯಗಳಿಗೆ ಜೈಲಿನಿಂದ ಕೆಲವರು ಸುಪಾರಿ ಕೊಟ್ಟಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ, ಜೈಲಿನಲ್ಲಿದ್ದುಕೊಂಡೇ ಹೊರಗೆ ಕಾನೂನುಬಾಹಿರ ಚಟುವಟಿಕೆಯಲ್ಲಿ ನಡೆಸಿರುವುದು ಹಾಗೂ ಜೈಲಿನಲ್ಲಿ ಮಾದಕ ವಸ್ತು ಸೇವನೆ ಮತ್ತು ಮೊಬೈಲ್‌ ಬಳಕೆ ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿಗೆ ಯೋಜಿಸಲಾಯಿಗಿತ್ತು. 
 

click me!