Bengaluru Crime News: ಡ್ರಗ್ಸ್ ಹಾಗೂ ಕಳ್ಳತನ ಪ್ರಕರಣಗಳಲ್ಲಿ ರೌಡಿ ಶೀಟರ್ ಸೇರಿ 13 ಜನರ ಬಂಧನ

By Suvarna News  |  First Published Jul 6, 2022, 6:14 PM IST

Bengaluru Crime News: ಡ್ರಗ್ಸ್ ಹಾಗು ಕಳ್ಳತನ ಪ್ರಕರಣದಲ್ಲಿ ರೌಡಿ ಶೀಟರ್‌ಗಳೂ ಸೇರಿ 13 ಜನರನ್ನ ಬಂಧಿಸಿ 50‌ಲಕ್ಷ ಮೌಲ್ಯದ ವಸ್ತುಗಳನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 


ಮಂಜುನಾಥ್, ಏಷಿಯಾನೆಟ್ ಸುವರ್ಣನ್ಯೂಸ್, ಬೆಂಗಳೂರು

ಬೆಂಗಳೂರು (ಜು. 06): ಮಾದನಾಯಕನಹಳ್ಳಿ ಪೊಲೀಸರು (Madanayakanahalli Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ಸ್ (Drugs Peddling) ಹಾಗು ಕಳ್ಳತನ (Theft) ಪ್ರಕರಣದಲ್ಲಿ ರೌಡಿ ಶೀಟರ್‌ಗಳೂ ಸೇರಿ 13 ಜನರನ್ನ ಬಂಧಿಸಿ 50‌ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಈ 13 ಜನ ಆರೋಪಿಗಳಲ್ಲಿ ವಿದ್ಯಾರ್ಥಿಗಳೂ, ದಂಪತಿಗಳು ಹಾಗು ರೌಡಿಗಳೂ ಕೂಡ ಸೇರಿದ್ದಾರೆ. ಇನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದಲೇ (Students) ಡ್ರಗ್ ಪೆಡ್ಲಿಂಗ್‌ಗಳು ನಡೆದಿದೆ.

Tap to resize

Latest Videos

ಕುಂಜು ಮೂಸಾ , ತೇಜೇಶ್ವರಪ್ಪ ,ಶ್ರೀಜಿತ್ ಹಾಗು ಹರ್ಷಿತ್ ಬಂಧಿತ ಆರೋಪಿಗಳು. ಇವರೆಲ್ಲರೂ ಎಂಬಿಎ ,ಬಿಬಿಎ, ಬಿಇ ವಿದ್ಯಾರ್ಥಿಗಳಾಗಿದ್ದಾರೆ.‌ ಆರೋಪಿಗಳು ಆಫ್ರಿಕನ್ ಪ್ರಜೆಗಳಿಂದ ಡ್ರಗ್ಸ್ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 10 ಲಕ್ಷ ಮೌಲ್ಯದ 62 ಗ್ರಾಂ ಎಂಡಿಎಂಎ (MDMA) ವಶಕ್ಕೆ ಪಡೆಯಲಾಗಿದೆ. 

ಇನ್ನು ಮತ್ತೊಂದು ಪ್ರಕರಣದಲ್ಲಿ ಇಬ್ಬರು ರೌಡಿ ಶೀಟರ್ ಗಳು ಸೇರಿ ಮೂರು ಜನರನ್ನ ಪೊಲೀಸರು ಬಂಧಿದ್ದಾರೆ. ಬಂಧಿತರಿಂದ 25 ಲಕ್ಚ ಮೌಲ್ಯದ 66 ಕೇಜಿ ಗಾಂಜಾ ,62 ಗ್ರಾಂ ಎಂಡಿಎಂಎ ,ಚಿನ್ನಾಭರಣವನ್ನ ವಶಕ್ಕೆ ಪಡೆದಿದ್ದಾರೆ.  ಇರ್ಫಾನ್ ಖಾನ್ , ಸೈಯದ್ ನೂರ್ ರೌಡಿಶೀಟರ್ ಗಳಾಗಿದ್ದು ಈ ಹಿಂದೆ ಮಿಲಿಟರಿ ವಾಹನ ಸುಟ್ಟ ಆರೋಪದಡಿ ಬಂಧಿತರಾಗಿದ್ದರು . ಅಸೀಫ್ ಖಾನ್ ಕೂಡ ಹಳೆಯ ಅಪರಾಧಿ ಎನ್ನಲಾಗಿದೆ. ‌

ಇದನ್ನೂ ಓದಿ: ಮತ್ತೊಬ್ಬನೊಂದಿಗೆ ಚಕ್ಕಂದ: ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಹೆಂಡತಿಯನ್ನು ಕೊಂದ ಗಂಡ

ಇನ್ನು ಮಾದನಾಯಕನಹಳ್ಳಿ ಪೊಲೀಸರು ಮತ್ತೊಂದು ಪ್ರಕರಣ ಬಯಲಿಗೆಳೆದಿದ್ದು, ದಂಪತಿಗಳು ಸೇರಿ ಆರು ಜನ ಕಳ್ಳರನ್ನ ಬಂಧಿಸಿದ್ದಾರೆ. ದಂಪತಿಗಳಾದ ಮಂಜುಳಾ , ಶ್ರೀನಿವಾಸ್ ಹಾಗು ಗಂಗಾಧರ , ಶಾರದಮ್ಮ, ಮುಬಾರಕ್ ಅಹ್ಮದ್, ಗಂಗಣ್ಣ@ ಸೊಳ್ಳೆ ಸೇರಿ ಆರು ಜನರನ್ನ ಬಂಧನ ಮಾಡಲಾಗಿದೆ. ಇನ್ನು ಇವರ ಮತ್ತೊಬ್ಬ ಸ್ನೇಹಿತ ಜೈಲಿನಲ್ಲಿರುವ ಕಾರಣ ಆತನನ್ನ‌ ಬಿಡಿಸಲು ಲಾಯರ್‌ಗೆ ಹಣ ನೀಡಲು ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಸದ್ಯ ಬಂಧಿತರಿಂದ ಚಿನ್ನದ ಗಟ್ಟಿ ಹಾಗು ಚಿನ್ನಾಭರಣ ಸೇರಿ 25 ಲಕ್ಷ ಮೌಲ್ಯದ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

click me!